Asianet Suvarna News Asianet Suvarna News

ತಮಿಳುನಾಡಿಗೆ ಇನ್ನು 10 ಟಿಎಂಸಿ ನೀರು ಬಿಡಬೇಕು: ಡಿ.ಕೆ.ಶಿವಕುಮಾರ್‌

ನಾವು ನೀರು ಬಿಟ್ಟಿಲ್ಲ. ಉತ್ತಮ ಮಳೆಯಾಗಿರುವ ಕಾರಣ ಜಲಾಶಯ ತುಂಬಿ ಹೆಚ್ಚುವರಿ ನೀರು ಹರಿದು ಹೋಗಿದೆ. ಕೆಲವರಿಗೆ ಪ್ರಚಾರ ಬೇಕು ಅದಕ್ಕೋಸ್ಕರ ಮಾತನಾಡುತ್ತಾರೆ ಅಷ್ಟೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 
 

Another 10 tmc of water should be released to tamil nadu dcm dk shivakumar grg
Author
First Published Jul 23, 2024, 2:34 PM IST | Last Updated Jul 23, 2024, 3:28 PM IST

ಮಂಡ್ಯ(ಜು.23):  ಸಾಮಾನ್ಯ ದಿನಗಳಲ್ಲಿ 40.43 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಿತ್ತು. ಈವರೆಗೆ 30 ಟಿಎಂಸಿ ನೀರು ನೆರೆ ರಾಜ್ಯಕ್ಕೆ ಹರಿದು ಹೋಗಿದೆ. ಇನ್ನು 10 ಟಿಎಂಸಿ ನೀರು ಬಿಡುಗಡೆ ಮಾಡಿದರೆ ನಮ್ಮ ಪಾಲಿನ ನೀರು ತಲುಪಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 

ಕೆಆರ್‌ಎಸ್‌ ವೀಕ್ಷಣೆ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸರ್ವಪಕ್ಷಗಳ ಸಭೆಗೂ ಮೊದಲೇ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು. 

ನೀರಿನ ಹರಿವು ಪ್ರಮಾಣ ಹೆಚ್ಚಳ : ಕಾವೇರಿ ನದಿಗೆ ಇಳಿಯದಂತೆ ಮನವಿ

ನಾವು ನೀರು ಬಿಟ್ಟಿಲ್ಲ. ಉತ್ತಮ ಮಳೆಯಾಗಿರುವ ಕಾರಣ ಜಲಾಶಯ ತುಂಬಿ ಹೆಚ್ಚುವರಿ ನೀರು ಹರಿದು ಹೋಗಿದೆ. ಕೆಲವರಿಗೆ ಪ್ರಚಾರ ಬೇಕು ಅದಕ್ಕೋಸ್ಕರ ಮಾತನಾಡುತ್ತಾರೆ ಅಷ್ಟೆ ಎಂದು ಟಾಂಗ್ ನೀಡಿದರು.

Latest Videos
Follow Us:
Download App:
  • android
  • ios