Asianet Suvarna News Asianet Suvarna News

ಅಂಗನವಾಡಿ ಶಿಕ್ಷಣ ಮಧ್ಯಾಹ್ನ 1 ಗಂಟೆಗೆ ಮುಕ್ತಾಯ: ಕಾರ್ಯಕರ್ತೆಯರ ಹೋರಾಟಕ್ಕೆ ಮಣಿದ ಸರ್ಕಾರ

ಇನ್ನು ಮುಂದೆ ಎಲ್ಲ ಅಂಗನವಾಡಿ ಶಾಲೆಗಳು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

Anganwadi education ends at 1 pm Govt Surrender in to activists struggle sat
Author
First Published Jan 31, 2023, 11:14 AM IST

ಬೆಂಗಳೂರು (ಜ.31): ರಾಜ್ಯದಲ್ಲಿ ಹಲವು ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿಯನ್ನು ಕೈಗೊಂಡಿರುವ ಅಂಗನವಾಡಿ ಕಾರ್ಯಕರ್ತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಇನ್ನು ಮುಂದೆ ಎಲ್ಲ ಅಂಗನವಾಡಿ ಶಾಲೆಗಳು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ 2011ರಲ್ಲಿ ಎಲ್ಲ ಅಂಗನವಾಡಿ ಶಾಲೆಗಳನ್ನು ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಯವರೆ ತೆರೆದಿಟ್ಟು ಶಿಕ್ಷಣ ನೀಡುವಂತೆ ಸರ್ಕಾರ ಆದೇಶಿತ್ತು. ಆದರೆ, ಈಗ ಅಂಗನವಾಡಿ ಶಾಲೆಗಳಲ್ಲಿ ದೀರ್ಘಾವಧಿ ಕೆಲಸ ಮಾಡುತ್ತಿದ್ದರೂ ನಮಗೆ ಗೌರವಧನ ತೀವ್ರ ಕಡಿಮೆಯಾಗಿದೆ. ಹೀಗಾಗಿ, ಗೌರವಧನ ಹೆಚ್ಚಳ ಮಾಡುವಂತೆ ಪಟ್ಟು ಹಿಡಿದಿದ್ದರು. ಈಗ ವೇತನ ಹೆಚ್ಚಳ ಮಾಡಲಾರದೇ ಸರ್ಕಾರ ಅಂಗನವಾಡಿ ಕೇಂದ್ರಗಳ ಸಮಯವನ್ನೇ ಬದಲಿಸಿದೆ. ಇಮ್ನುಮುಂದೆ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಮಾತ್ರ ಶಾಲಾ ಪೂರ್ವ ಶಿಕ್ಷಣ ನೀಡುವಂತೆ ಸರ್ಕಾರ ಸೂಚಿಸಿದೆ.

Anganwadi Workers: ಮುಷ್ಕರದಲ್ಲಿ ಕಾರ್ಯಕರ್ತೆಯರು, ಬೀದಿಯಲ್ಲಿ ಮಕ್ಕಳು! 

ಶಿಕ್ಷಣದ ಅವಧಿಯಲ್ಲಿ ಪೋಷಕರ ಭೇಟಿಯಿಲ್ಲ: ಅಂಗನವಾಡಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ  ಕಾರ್ಯಕರ್ತೆಯರಿಗೆ ಸರ್ಕಾರದಿಂದ ಇತರೆ ಯೋಜನೆಗಳ ಕಾರ್ಯಗಳನ್ನು ಮಾಡಲು ನೀಡುತ್ತಿದ್ದು, ಶಿಕ್ಷಣ ನೀಡಲು ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ನೀಡುವ ಸಮಯವನ್ನು ಮಾತ್ರ ಈಗ ಕಡಿತ ಮಾಡಲಾಗಿದೆ. ಇನ್ನು ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಅವಧಿಯ ಶಿಕ್ಷಣದ ಸಮಯದಲ್ಲಿ ಪೋಷಕರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುವಂತಿಲ್ಲ. ಇನ್ನು ಅಂಗನವಾಡಿಯಲ್ಲಿ ಯಾವುದೇ ಕೆಲಸಗಳು ಇದ್ದರೂ ಅದನ್ನು ಮಧ್ಯಾಹ್ನ  2 ಗಂಟೆಯ ನಂತರ ಭೇಟಿ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ.

ನಾಳೆಯಿಂದ ಹೋರಾಟ ಸ್ವರೂಪ ಬದಲು: ಇಂದು ಸಂಜೆಯೊಳಗೆ ಮುಖ್ಯಮಂತ್ರಿ ಜೊತೆ ಸಭೆ ಕರಿಯಬೇಕು. ಇಲ್ಲದಿದ್ದರೆ ನಾಳೆ ಮುಂದಿನ ನಡೆ ಬೇರೆ ಆಗಿರುತ್ತದೆ. ಇಂದು ಸಂಜೆಯೊಳಗೆ ನಮ್ಮ ಆದೇಶ ಜಾರಿಯಾಗದಿದ್ದಾರೆ ನಾಳೆ ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕಲಾಗುತ್ತದೆ. ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮೀ ಅವರು ನಾಳೆ ಮುಖ್ಯಮಂತ್ರಿ ಮನೆ ಮುತ್ತಿಗೆಗೆ ಕರೆ ಕೊಟ್ಟಿದ್ದಾರೆ. ಅಂಗನವಾಡಿ ಕಾರ್ಯಕರ್ತರ ಗುಂಪು ಗಂಟೆ ಗಂಟೆಗೂ ಹೆಚ್ಚಾಗುತ್ತಿದೆ. ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. 

ಉಡಾಫೆ ಉತ್ತರಗಳು ಬೇಡ: ಸ್ವಾತಂತ್ರ್ಯ ಉದ್ಯಾನದಲ್ಲಿ ಇರುವ ಸ್ಥಳ ಸಾಕಾಗದೇ ಅಂಗನವಾಡಿ ಕಾರ್ಯಕರ್ತೆಯರು ಅಕ್ಕ ಪಕ್ಕದ ನಡುರಸ್ತೆಯ ಮಧ್ಯೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಉಢಾಫೇ ಉತ್ತರಗಳಿಗೆ ಮಣೆಯುವುದಿಲ್ಲ. ಅಂಗನವಾಡಿ ಕಾರ್ಯಕರ್ತರ ಹೋರಾಟಕ್ಕೆ ಮಣಿಯದ ಸರ್ಕಾರಕ್ಕೆ ದಿಕ್ಕಾರ ಎಂದು ಘೋಷಣೆ ಕೂಗುತ್ತಿದ್ದಾರೆ.

Chikkamagaluru: ಮಾಸಿಕ ಪೆನ್ಷನ್ ಜಾರಿಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ನಿನ್ನೆ ಸಚಿವ ಹಾಲಪ್ಪ ಭೇಟಿ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಸ್ಥಳಕ್ಕೆ ನಿನ್ನೆ ಸಂಜೆ ಮಹಿಳಾ ಮತ್ತು ಮಕ್ಕಳ ಸಚಿವ  ಹಾಲಪ್ಪ ಆಚಾರ್ ಭೇಟಿ ನೀಡಿ, ಸಮಸ್ಯೆ ಆಲಿಸಿದರು. ತಮ್ಮ ಕೈಯಲ್ಲಿ ಆದ ಬೇಡಿಕೆಗಳನ್ನ ಈಡೇರಿಸುವ ಭರವಸೆ ನೀಡಿದರು. ಸಚಿವರ ಭರವಸೆಗೆ ಒಪ್ಪದ ಅಂಗನವಾಡಿ ಕಾರ್ಯಕರ್ತೆಯರು ನಮಗೆ ಬೇಡ, ಬೇಡಿಕೆ ಈಡೇರಿಸಿದ ಲಿಖಿತ ರೂಪದ ಆದೇಶ ಪ್ರತಿ ನಮಗೆ ಕೊಡಿ ಎಂದರು. ಒಂದು ವಾರ ಅಲ್ಲ ಎಷ್ಟು ದಿನವಾದರೂ ನಾವು ಇಲ್ಲಿಯೇ ಇರುತ್ತೇವೆ. ಸಿಎಂ ಜೊತೆ ಒಂದು ಸಭೆ ನಿಗದಿ ಮಾಡಿ. ಜೊತೆಗೆ, ನಮಗೆ ಲಿಖಿತ ರೂಪದ ಆದೇಶ ನೀಡಿ ಎಂದು ಪಟ್ಟು ಹಿಡಿದಿದ್ದರು.

Follow Us:
Download App:
  • android
  • ios