ನಾನು ನಟನೆಗೆ ಬರಲು ಪ್ರೇರಣೆಯಾದವರು ಅನಂತ್‌ನಾಗ್: ನಟ ರಕ್ಷಿತ್ ಶೆಟ್ಟಿ
ಸಾಮಾನ್ಯರಲ್ಲಿ ಅಸಾಮಾನ್ಯರನ್ನು ಹುಡುಕಿ ಅವರಿಗೆ ಪ್ರಶಸ್ತಿ ನೀಡುತ್ತಿರುವ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣನ್ಯೂಸ್ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ತಿಳಿಸಿದರು.

ಬೆಂಗಳೂರು (ಅ.14): ಸಾಮಾನ್ಯರಲ್ಲಿ ಅಸಾಮಾನ್ಯರನ್ನು ಹುಡುಕಿ ಅವರಿಗೆ ಪ್ರಶಸ್ತಿ ನೀಡುತ್ತಿರುವ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣನ್ಯೂಸ್ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ತಿಳಿಸಿದರು. ಸಾಮಾನ್ಯರಲ್ಲಿನ ಅಸಾಮಾನ್ಯತೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಕನ್ನಡಪ್ರಭ-ಏಷ್ಯಾನೆಟ್ ಸುವರ್ಣನ್ಯೂಸ್‌ನ ಉತ್ತಮ ಕಾರ್ಯ. ಅದು ಎಲ್ಲರಿಗೂ ಮಾದರಿಯಾದ ವಿಚಾರ. ಈ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿರುವುದು ನನಗೆ ಸಂತಸ ಉಂಟು ಮಾಡಿದೆ ಎಂದರು.
ಪ್ರತಿ ನಾಯಕನಿಗೂ ಮತ್ತೊಬ್ಬ ನಾಯಕ ಪ್ರೇರಣೆಯಾಗಿರುತ್ತಾನೆ. ಅದರಂತೆ ಅನಂತ್‌ನಾಗ್ ನಾನು ನಟನೆಗೆ ಬರಲು ಪ್ರೇರಣೆಯಾದವರು. ಅಂತವರಿಗೆ ನನ್ನಿಂದ ಅಸಾಮಾನ್ಯ ಸಾಧಕ ಪ್ರಶಸ್ತಿ ಪ್ರದಾನ ಮಾಡಿಸುತ್ತಿರುವುದು ನನಗೆ ಹೆಮ್ಮೆಯ ವಿಚಾರ. 70-80ರ ದಶಕದಲ್ಲಿನ ಚಲನಚಿತ್ರಗಳಲ್ಲಿ ಅನಂತನಾಗ್ ಅವರ ನಟನೆಯನ್ನು ಈಗಲೂ ಅನಾಯಸವಾಗಿ, ಯಾವುದೇ ಕಿರಿಕಿರಿ ಅನುಭವಿಸದೆ ವೀಕ್ಷಿಸಬಹುದಾಗಿದೆ. ಅಂತಹ ನಟನಿಗೆ ಹಾಗೂ ತೆರೆಮರೆಯ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸವ್ಯಸಾಚಿ ಸೀರೆಯಲ್ಲಿ ಮಿಂಚಿದ ತಮನ್ನಾ: ಅಬ್ಬಬ್ಬಾ ನೀವು ಮಿಲ್ಕ್ ಬ್ಯೂಟಿನೇ ಎಂದ ಫ್ಯಾನ್ಸ್!
ಸಾಧಕರು ಪ್ರಶಸ್ತಿ ಸ್ವೀಕರಿಸಿ ನಮಗೂ ಹಿರಿಮೆ: ಸಾಧಕರು "ಅಸಾಮಾನ್ಯ ಕನ್ನಡಿಗ" ಪ್ರಶಸ್ತಿ ಸ್ವೀಕರಿಸಿದ್ದರಿಂದ ನಮ್ಮ ಹಿರಿಮೆಗೆ ಮತ್ತೊಂದು ಗರಿ ಸೇರಿಕೊಂಡಂತಗಾಗಿದೆ ಹಾಗೂ ನಮ್ಮ ಸಮಾಜಮುಖಿ ಕಾರ್ಯ ಮುಂದುವರಿಯಲು ಪ್ರೇರಣೆ ದೊರೆತಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ತಿಳಿಸಿದರು. ರಾಜ್ಯದ ಎಲೆಮರೆಯ ಕಾಯಿಯಂತಿರುವ ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ನಾವೇನೋ ಸಾಧನೆ ಮಾಡಿದ್ದೇವೆ ಎಂಬ ಭಾವನೆ ನಮಗಿಲ್ಲ. ಆದರೆ, ಸಾಧಕರು, ಹಿರಿಯ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬಂದಿದ್ದು ನಮ್ಮ ಹಿರಿಮೆಗೆ ಮತ್ತೊಂದು ಗರಿ ಸೇರಿಕೊಂಡಂತಾಗಿದೆಯಷ್ಟೇ. ಅದಕ್ಕಾಗಿ ಪ್ರಶಸ್ತಿ ಸ್ವೀಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.