ದೇಶದ 30 ಪ್ರಮುಖ ರಸ್ತೆಗಳಲ್ಲಿ ನಗರದ ಎಂಜಿ ರೋಡ್‌ ನಂ.1 ಟಾಪ್‌ 10ರಲ್ಲಿ ಬೆಂಗಳೂರಿನ 4 ರಸ್ತೆಗಳಿಗೆ ಸ್ಥಾನಮಾನ ರಿಯಲ್‌ ಎಸ್ಟೇಟ್‌ ಕನ್ಸಲ್ಟಂಟ್‌ ನೈಟ್‌ ಫ್ರ್ಯಾಂಕ್‌ ಸಮೀಕ್ಷೆ

ನವದೆಹಲಿ (ಮೇ.11): ರಿಯಲ್‌ ಎಸ್ಟೇಟ್‌ ಕನ್ಸಲ್ಟಂಟ್‌ ನೈಟ್‌ ಫ್ರ್ಯಾಂಕ್‌ ಇಂಡಿಯಾ ಬುಧವಾರ ಬಿಡುಗಡೆ ಮಾಡಿದ ‘ಥಿಂಕ್‌ ಇಂಡಿಯಾ ಥಿಂಕ್‌ ರೀಟೇಲ್‌ 2023- ಹೈ ಸ್ಟ್ರೀಟ್‌ ರಿಯಲ್‌ ಎಸ್ಟೇಟ್‌ ಔಟ್‌ಲುಕ್‌’ ಸಮೀಕ್ಷಾ ವರದಿ ಪ್ರಕಾರ ದೇಶದ 8 ಬೃಹತ್‌ ನಗರಗಳ 30 ಪ್ರಮುಖ ಹಾಗೂ ಉತ್ತಮ ಗುಣಮಟ್ಟಹೊಂದಿರುವ ರಸ್ತೆಗಳಲ್ಲಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆ (ಎಂಜಿ ರೋಡ್‌) ಮೊದಲ ಸ್ಥಾನದಲ್ಲಿದೆ. ಅಲ್ಲದೇ ಇದನ್ನು ಒಳಗೊಂಡಂತೆ ಟಾಪ್‌ 10 ರಸ್ತೆಗಳಲ್ಲಿ ಬೆಂಗಳೂರಿನ ನಾಲ್ಕು ರಸ್ತೆಗಳಿವೆ. ಈ ಪೈಕಿ ಬೆಂಗಳೂರಿನ ಕಮರ್ಷಿಯಲ್‌ ರಸ್ತೆ 7, ಬ್ರಿಗೇಡ್‌ ರಸ್ತೆ 9 ಹಾಗೂ ಚಚ್‌ರ್‍ ರಸ್ತೆ 10 ನೇ ಸ್ಥಾನದಲ್ಲಿವೆ. ಇನ್ನು ಹೈದರಾಬಾದ್‌ನ ಸೊಮಾಜಿಗುಡಾ, ಹಾಗೂ ಮುಂಬೈನ ಲಿಂಕಿಂಗ್‌ ರೋಡ್‌ಗಳು ಕ್ರಮವಾಗಿ 2, 3ನೇ ಸ್ಥಾನದಲ್ಲಿದ್ದರೆ ದೆಹಲಿಯ ಖಾನ್‌ ಮಾರ್ಕೆಟ್‌ 27ನೇ ಸ್ಥಾನದಲ್ಲಿದೆ.

ಆಯಾ ನಗರಗಳ ಗುಣಮಟ್ಟದ ಕುರಿತು ಗ್ರಾಹಕರ ಅಭಿಪ್ರಾಯ ಹಾಗೂ ಪಾರ್ಕಿಂಗ್‌, ಸಾರ್ವಜನಿಕ ಸಾರಿಗೆ, ಅಂಗಡಿ ಅಥವಾ ವ್ಯಾಪಾರ ಕೇಂದ್ರಗಳ ಗೋಚರತೆ, ಹಣದ ವ್ಯಯ ಹಾಗೂ ಸರಾಸರಿ ವ್ಯಾಪಾರ ಸಾಂದ್ರತೆಯಂತಹ 5 ಪ್ರಮುಖ ಅಂಶಗಳ ಆಧಾರದ ಮೇಲೆ ಈ ಪಟ್ಟಿಯನ್ನು ನಿರ್ಧರಿಸಲಾಗಿದೆ ಎಂದು ನೈಟ್‌ ಫ್ರ್ಯಾಂಕ್‌ ಹೇಳಿದೆ.

ಬೆಳಗಾವಿ: ಅರ್ಹ ಅಭ್ಯರ್ಥಿಗಳಿಲ್ಲವೆಂದು ದೂರ ಉಳಿದ ಮತದಾರ

ಇನ್ನು ಟಾಪ್‌ ಹತ್ತು ರಸ್ತೆಗಳ ಪೈಕಿ ಮೇಲಿನ ರಸ್ತೆ ಹೊರತು ಪಡಿಸಿ ದೆಹಲಿಯ ದಕ್ಷಿಣ ಭಾಗ 4, ಕೋಲ್ಕತ್ತಾದ ಪಾರ್ಕ್ ರಸ್ತೆ ಹಾಗೂ ಕ್ಯಾಮಾಕ್‌ ರಸ್ತೆ 5ನೇ ಸ್ಥಾನದಲ್ಲಿವೆ. ಉಳಿದಂತೆ ಚೆನ್ನೈನ ಅಣ್ಣಾ ನಗರ 6, ನೊಯ್ಡಾದ 18ನೇ ಮಾರ್ಕೆಟ್‌ 8ನೇ ಸ್ಥಾನದಲ್ಲಿವೆ.

ಈ ಟಾಪ್‌ ಹತ್ತು ನಗರಗಳು ಪ್ರವೇಶ, ಪಾರ್ಕಿಂಗ್‌ ಸೌಲಭ್ಯ ಹಾಗೂ ಚಿಲ್ಲರೆ ವ್ಯಾಪಾರ ಸ್ಥಳಗಳು, ರಸ್ತೆಯ ಲೇಔಟ್‌ ಹಾಗೂ ಮಾಸ್ಟರ್‌ ಪ್ಲ್ಯಾನಿಂಗ್‌ ಮತ್ತು ಉತ್ತಮ ಅಥವಾ ಆಕರ್ಷಕ ಗೋಚರತೆಯನ್ನು ಹೊಂದಿದ ಪ್ರಮುಖ ನಗರಗಳಾಗಿವೆ.

ಬೆಂಗಳೂರು ನಗರ: ಮತ ಹಾಕಿದವರಿಗೆ ಸ್ಥಳೀಯರಿಂದ ಬಿರಿಯಾನಿ

ಬೆಂಗಳೂರು ಟಾಪ್‌ 10 ರಸ್ತೆಗಳ ಪೈಕಿ 4 ರಸ್ತೆಗಳನ್ನು ಹೊಂದಿದ್ದು ಇದು ಗ್ರಾಹಕರಿಗೆ ಉತ್ತಮ ಶಾಪಿಂಗ್‌ ಅನುಭವ ನೀಡುತ್ತದೆ ಎಂದು ನೈಟ್‌ ಫ್ರ್ಯಾಂಕ್‌ ತನ್ನ ವರದಿಯಲ್ಲಿ ಹೇಳಿದೆ.