Asianet Suvarna News Asianet Suvarna News

ದೇಶದ ಏಕತೆ, ಪ್ರಜಾಪ್ರಭುತ್ವ ಉಳಿಯಲು ಅಂಬೇಡ್ಕರ್‌ ಹೆಣೆದ ಸೂತ್ರ ಕಾರಣ: ಸಿಎಂ ಬೊಮ್ಮಾಯಿ

ದೇಶದ ಏಕತೆ, ಅಖಂಡತೆ, ಪ್ರಜಾಪ್ರಭುತ್ವ ಉಳಿಯಲು ಅಂಬೇಡ್ಕರ್‌ ಅವರು ಹೆಣೆದಿರುವ ಸಾಮಾಜಿಕ ಸೂತ್ರವೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Ambedkars Formula is the Reason for the Unity of the Country and the Survival of Democracy Says CM Basavaraj Bommai gvd
Author
First Published Feb 26, 2023, 7:41 AM IST

ಬೆಂಗಳೂರು (ಫೆ.26): ದೇಶದ ಏಕತೆ, ಅಖಂಡತೆ, ಪ್ರಜಾಪ್ರಭುತ್ವ ಉಳಿಯಲು ಅಂಬೇಡ್ಕರ್‌ ಅವರು ಹೆಣೆದಿರುವ ಸಾಮಾಜಿಕ ಸೂತ್ರವೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಸೆಂಟ್ರಲ್‌ ಕಾಲೇಜಿನ ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಂಬೇಡ್ಕರ್‌ ಎಕನಾಮಿಕ್ಸ್‌ ಫೌಂಡೇಷನ್‌ ವತಿಯಿಂದ ಶನಿವಾರ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ದಿ ಪ್ರಾಬ್ಲಂ ಆಫ್‌ ದಿ ರುಪಿ ಪುಸ್ತಕದ 100ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ವಿಚಾರ ಸಂಕಿರಣ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಅಂಬೇಡ್ಕರ್‌ಗೆ ದೇಶದ ಇತಿಹಾಸವನ್ನು ಸ್ಪಷ್ಟವಾಗಿ ಅರಿತಿದ್ದ ಕಾರಣ, ಸ್ವಾತಂತ್ರ್ಯ ನಂತರದ ದೇಶದಲ್ಲಾಗಬೇಕಾದ ಹೊಸ ವ್ಯವಸ್ಥೆಗಳ ಬಗ್ಗೆ ಕಲ್ಪನೆ ಹೊಂದಿದ್ದರು ಎಂದು ತಿಳಿಸಿದರು. ರಾಜಕಾರಣವು ಚುನಾವಣೆ ಮತ್ತು ಆಡಳಿತದಲ್ಲಿ ಮಾತ್ರವಲ್ಲದೇ, ಹೋರಾಟಗಳಲ್ಲಿಯೂ ಇದೆ. ಈ ಹೋರಾಟಗಳ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸವನ್ನು ಬಾಬಾ ಸಾಹೇಬ್‌ ಅಂಬೇಡ್ಕರ್‌ ಮಾಡಿದ್ದಾರೆ. ಆದ್ದರಿಂದ ಸಂವಿಧಾನವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದರು. ಅರ್ಥಶಾಸ್ತ್ರ ಮತ್ತು ಸಾಮಾಜ ವಿಜ್ಞಾನ ಎರಡೂ ಒಂದೇ. 

9 ತಿಂಗಳಲ್ಲೇ 11838 ಕೋಟಿ ನೀರಾವರಿ ಟೆಂಡರ್‌ ನೀಡಿದ್ದ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ

ಆರ್ಥಿಕತೆ ಬಿಟ್ಟು ಸಮಾಜವಿಲ್ಲ ಹಾಗೆಯೇ ಸಮಾಜ ಬಿಟ್ಟು ಆರ್ಥಿಕತೆಯಿಲ್ಲ ಎಂದು ನೂರು ವರ್ಷಗಳ ಹಿಂದೆಯೇ ಹೇಳಿದ ಮಹಾನ್‌ ಆರ್ಥಿಕ ತಜ್ಞ ಅಂಬೇಡ್ಕರ್‌ ಎಂದು ಹೇಳಿದರು. ಮೈಸೂರಿನ ಉರಿಲಿಂಗ ಪೆದ್ದಿ ಮಠದ ಬಹುಜನಶ್ರೀ ಜಯಪ್ರಕಾಶ್‌ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್‌ ಅವರು ಪ್ರಪಂಚದಲ್ಲೇ ಜ್ಞಾನದ ಸಂಕೇತ. ಅಂಬೇಡ್ಕರ್‌ ಅವರು ಪ್ರಪಂಚದಲ್ಲೇ ಜ್ಞಾನದ ಸಂಕೇತವಾಗಿದ್ದಾರೆ. ಆದರೆ, ಅವರ ವಿಚಾರ, ಜ್ಞಾನವನ್ನು ತಮ್ಮ ಜೀನವದಲ್ಲಿ ಅಳವಡಿಸಿಕೊಳ್ಳುವ ಬದಲು ಜಾತಿ ಹೆಸರಿನಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಅಂಬೇಡ್ಕರ್‌ ವಿಚಾರಧಾರೆಗಳು ನಶಿಸಿಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. 

‘ಗೃಹಿಣಿ ಶಕ್ತಿ’ಯಡಿ 500 ಬದಲು 1000: ಸಿಎಂ ಬೊಮ್ಮಾಯಿ ಘೋಷಣೆ

ಸಂಸ್ಕೃತಿ, ಶೈಕ್ಷಣಿಕ, ಸಾಮಾಜಿಕವಾಗಿ ಸಮಾನತೆ ಸಾಧಿಸುವುದಕ್ಕೆ ಮೊದಲು ಆರ್ಥಿಕತೆಯಲ್ಲಿ ಸಮಾನತೆ ಬರಬೇಕು ಎಂದು ಅಂಬೇಡ್ಕರ್‌ ಹೇಳಿದ್ದರು ಎಂದರು. ಈ ವೇಳೆ ಅಂಬೇಡ್ಕರ್‌ ವಿಚಾರ ಕುರಿತು ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಏಳು ಜನ ಸಾಧಕರಿಗೆ ಸನ್ಮಾನಿಸಲಾಯಿತು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ, ಆರ್ಥಿಕ ತಜ್ಞ ಪ್ರೊ. ಸುಖಾದೆಯೋ ಥೋರಟ್‌, ವಿಧಾನಪರಿಷತ್ತು ಸದಸ್ಯ ಛಲವಾದಿ ಟಿ.ನಾರಾಯಣಸ್ವಾಮಿ, ಬೆಂಗಳೂರು ನಗರ ವಿವಿಯ ಉಪ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಉಪಸ್ಥಿತರಿದ್ದರು.

Follow Us:
Download App:
  • android
  • ios