Asianet Suvarna News Asianet Suvarna News

ವಿದ್ಯಾರ್ಥಿಗಳ ಸ್ಕಿಟ್‌ನಲ್ಲಿ ಅಂಬೇಡ್ಕರ್‌ಗೆ ಅವಮಾನ: ಬೇಷರತ್‌ ಕ್ಷಮೆಯಾಚಿಸಿದ ಜೈನ್ ವಿವಿ

ಜೈನ್ ವಿಶ್ವವಿದ್ಯಾಲಯದ ಉತ್ಸವದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪ್ರದರ್ಶಿಸಿದ ಕಿರುನಾಟಕ ಪ್ರದರ್ಶನದ ವೇಳೆ ದಲಿತರ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ವಿದ್ಯಾಲಯದ ವತಿಯಿಂದ ಬೇಷರತ್ತಾಗಿ ಕ್ಷಮೆ ಕೋರಲಾಗಿದೆ.

Ambedkar insulted in student skit Jain university apologizes unconditionally sat
Author
First Published Feb 13, 2023, 8:23 PM IST | Last Updated Feb 13, 2023, 8:23 PM IST

ಬೆಂಗಳೂರು (ಫೆ.13):  ಫೆಬ್ರವರಿ 8 ರಂದು ಜೈನ್ ವಿಶ್ವವಿದ್ಯಾಲಯದ ಉತ್ಸವದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪ್ರದರ್ಶಿಸಿದ ಕಿರುನಾಟಕ ಪ್ರದರ್ಶನದ ವೇಳೆ ದಲಿತರ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ವಿದ್ಯಾಲಯದ ವತಿಯಿಂದ ಬೇಷರತ್ತಾಗಿ ಕ್ಷಮೆ ಕೋರಲಾಗಿದೆ.

ಜೈನ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕೆಲವು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಉತ್ಸವದಲ್ಲಿ ಒಂದು ಕಿರು ನಾಟಕವನ್ನು ಪ್ರದರ್ಶನ ಮಾಡಿದ್ದಾರೆ. ನಾಟಕದ ಹಸ್ತಪ್ರತಿಯ ತಿರುಳಿನ ಉದ್ದೇಶದಲ್ಲಿ ಸಮಾಜದಲ್ಲಿರುವ ಜಾತಿ, ವರ್ಗ, ಲಿಂಗ ಮತ್ತು ವ್ಯಕ್ತಿಯ ಧರ್ಮ ಇವುಗಳನ್ನು ಮೀರಿ ಸಮಾನತೆಯನ್ನು ತರುವ ಪ್ರಯತ್ನ ಇದೆ. ಆದರೆ ಈ ನಾಟಕ ಈ ಸಂದೇಶವನ್ನು ತಲುಪಿಸುವ ಪ್ರಯತ್ನದಲ್ಲಿ ಅದರಲ್ಲಿ ಬಳಕೆಯಾದ ಕೆಲವು ಪದಗಳು ಸಮಾಜದಲ್ಲಿ ಘರ್ಷಣೆಗೆ ಕಾರಣವಾಗಿದೆ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ ಸಮಾಜದಲ್ಲಿ ಅಶಾಂತಿಯನ್ನು ನಿರ್ಮಿಸಿದೆ. ವಿದ್ಯಾ ಸಂಸ್ಥೆಯು ಈ ವಿಚಾರವನ್ನು ಗಂಭೀರವಾಗಿ ಗಮನಕ್ಕೆ ತೆಗೆದುಕೊಂಡು ಆಂತರಿಕ ವಿಚಾರಣೆ ನಡೆಸಿ ಅಗತ್ಯ ಶಿಸ್ತು ಕ್ರಮವನ್ನು ಜರುಗಿಸಿದೆ.

ವಿಷಜಂತುಗಳ ನಡುವೆ ಜೀವನ ನಡೆಸುತ್ತಿರುವ ದಲಿತ ಕುಟುಂಬಗಳು: ಲೋಕೇಶ್‌ ತಾಳಿಕಟ್ಟೆ

ಅಂಬೇಡ್ಕರ್‌ ಅವರನ್ನು ಗೌರವದಿಂದ ಕಾಣುತ್ತೇವೆ: ಜೈನ್ ವಿಶ್ವವಿದ್ಯಾಲಯ ತನ್ನ ನೀತಿ ನಿಯಮಾನುಸಾರ ಜಾತ್ಯತೀತ ತತ್ವಗಳಿಗೆ ಬದ್ಧವಾಗಿದೆ. ವಿದ್ಯಾರ್ಥಿಗಳು ಯಾವುದೇ ರೀತಿ ಸಾರ್ವಜನಿಕರ ಮನಸ್ಸಿಗೆ ನೋವಾಗದ ಹಾಗೆ ನಡೆದುಕೊಳ್ಳಬೇಕೆಂಬ ನೀತಿಗೆ ಬದ್ಧವಾಗಿದೆ. ಜೈನ್ ವಿಶ್ವವಿದ್ಯಾನಿಲಯಕ್ಕೆ ಈ ಕಿರು ನಾಟಕ ಪ್ರದರ್ಶನದಿಂದ ಸಮಾಜದ  ಕೆಲವು ವರ್ಗಗಳಿಗೆ ನೋವಾಗಿದೆ ಎಂಬುದು ಅರಿವಾಗಿದೆ. ಜೊತೆಗೆ ಈ ಕಿರು ನಾಟಕದಲ್ಲಿ ಬಳಸಿದ ಕೆಲವು ಪದಗಳು ಸಂವಿಧಾನ ಶಿಲ್ಪಿ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಅವರನ್ನು ಅಗೌರವದಿಂದ ಕಾಣುವಂತೆ ಮಾಡಿರುವುದನ್ನು ಜೈನ್ ವಿಶ್ವವಿದ್ಯಾಲಯ ಖಂಡಿಸುತ್ತದೆ. ಜೊತೆಗೆ ಇಂತಹ ಹೇಳಿಕೆಗಳನ್ನು ವಿರೋಧಿಸುತ್ತದೆ. 

ಕ್ಷಮೆ ಯಾಚಿಸಿದ ರಿಜಿಸ್ಟ್ರಾರ್‌:  ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್ .ಅಂಬೇಡ್ಕರ್ ಅವರ ಬಗ್ಗೆ ಜೈನ್ ವಿಶ್ವವಿದ್ಯಾಲಯಕ್ಕೆ ಅತ್ಯಂತ ಹೆಚ್ಚಿನ ಗೌರವ ಇದೆ. ಅದನ್ನು ವಿಶ್ವವಿದ್ಯಾಲಯ ಸದಾ ಎತ್ತಿ ಹಿಡಿಯುತ್ತದೆ. ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಕಿರು ನಾಟಕವನ್ನು ಪ್ರದರ್ಶಿಸಿದ ಘಟನೆಯಿಂದ ನೋವು ಅನುಭವಿಸಿದ ಎಲ್ಲರಲ್ಲಿ ವಿಶ್ವವಿದ್ಯಾಲಯವು ಬೇಷರತ್ತಾಗಿ ಕ್ಷಮೆ ಕೋರುತ್ತದೆ ಎಂದು ರಿಜಿಸ್ಟ್ರಾರ್‌ ತಿಳಿಸಿದ್ದಾರೆ.

ನಂಗೇಲಿ ಎಂಬ ನಿಗಿನಿಗಿ ಕೆಂಡ, ತೆರಿಗೆ ವಿರೋಧಿಸಿ ಸ್ತನವನ್ನೇ ಕತ್ತರಿಸಿ ಕಲೆಕ್ಟರ್ ಕೈಗಿಟ್ಟ ಧೀರೆ..!

ಘಟನೆಯ ವಿವರವೇನು.? ಜೈನ್‌ ವಿಶ್ವವಿದ್ಯಾಲಯದ ಉತ್ಸವ ಸಮಾರಂಭದಲ್ಲಿ ದಿ ಡೆಲ್ರಾಯ್ಸ್ ಬಾಯ್ಸ್ ತಂಡ ಪ್ರದರ್ಶಿಸಿದ ಕಿರು ನಾಟಕದಲ್ಲಿ, ಜಾತಿವಾದಿ ಸಂಭಾಷಣೆಗಳಿದ್ದವು. ಭಾರತೀಯ ಸಂವಿಧಾನದ ಪಿತಾಮಹ ಮತ್ತು ಹಿಂದುಳಿದ ವರ್ಗಗಳ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಗುರಿಯಾಗಿಸಿಕೊಂಡು ಅವಹೇಳನ ಮಾಡಿ ಅಸ್ಪೃಶ್ಯತೆ ಪದವನ್ನು ಬಳಸಲಾಗಿತ್ತು. ಮ್ಯಾಡ್ ಆಡ್ಸ್ ಎಂಬ ಕಾರ್ಯಕ್ರಮದಲ್ಲಿ ಹಾಸ್ಯಮಯ ರೀತಿಯಲ್ಲಿ ಕಾಲ್ಪನಿಕ ಉತ್ಪನ್ನಗಳನ್ನು ಜಾಹೀರಾತು ಮಾಡುವ ಕುರಿತು ಸ್ಕಿಟ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಬಗ್ಗೆ ದಲಿತ ಸಂಘಟನೆಗಳ ಸದಸ್ಯರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸ್ಕಿಟ್ ಮಾಡಿರುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದರು. 

Latest Videos
Follow Us:
Download App:
  • android
  • ios