ವಿಷಜಂತುಗಳ ನಡುವೆ ಜೀವನ ನಡೆಸುತ್ತಿರುವ ದಲಿತ ಕುಟುಂಬಗಳು: ಲೋಕೇಶ್‌ ತಾಳಿಕಟ್ಟೆ

ಪಟ್ಟಣದ ಡಾ. ಅಂಬೇಡ್ಕರ್‌ ನಗರದಲ್ಲಿ ವಾಸವಾಗಿರುವ ದಲಿತ ಕುಟುಂಬಗಳು ವಿಷಜಂತುಗಳ ನಡುವೆ ಅಪಾಯಕಾರಿ ಜೀವನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ,ತರೀಕೆರೆ ಕಾಂಗ್ರೆಸ್‌ ಟಿಕೇಟು ಆಕಾಂಕ್ಷಿ ಲೋಕೇಶ್‌ ತಾಳಿಕಟ್ಟೆತಿಳಿಸಿದ್ದಾರೆ.

Dalit families living among poisons says lokesh talikatte at  in chikkamagaluru rav

,ತರೀಕೆರೆ (ಫೆ.12) : ಪಟ್ಟಣದ ಡಾ. ಅಂಬೇಡ್ಕರ್‌ ನಗರದಲ್ಲಿ ವಾಸವಾಗಿರುವ ದಲಿತ ಕುಟುಂಬಗಳು ವಿಷಜಂತುಗಳ ನಡುವೆ ಅಪಾಯಕಾರಿ ಜೀವನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ,ತರೀಕೆರೆ ಕಾಂಗ್ರೆಸ್‌ ಟಿಕೇಟು ಆಕಾಂಕ್ಷಿ ಲೋಕೇಶ್‌ ತಾಳಿಕಟ್ಟೆತಿಳಿಸಿದ್ದಾರೆ.

ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತರೀಕೆರೆ ಪಟ್ಟಣದ ಡಾ.ಅಂಬೇಡ್ಕರ್‌ ನಗರ(Dr ambedkar nagar)ದಲ್ಲಿ ವಾಸವಾಗಿರುವ ದಲಿತ ಕುಟುಂಬಗಳು(Dalit families) ನಗರದ ಕೊಳಚೆ ನೀರು ಸಂಗ್ರಹವಾಗುವ ದೊಡ್ಡಕೆರೆ ಬಳಿ ಇದೆ. ಹತ್ತಿರದ ನೀರಿನಿಂದ ವಿಷಜಂತುಗಳು ಜೊತೆಗೆ ಕೆಟ್ಟವಾಸನೆ ಹಾಗೂ ಅಪಾಯಕಾರಿ ರೋಗಗಳ ಬೆಳವಣಿಗೆಯ ಕೂಪದಲ್ಲಿ ವಾಸವಾಗಿದ್ದು, ಮಳೆಗಾಲದಲ್ಲಿ ಕಳೆದ ಬಾರಿ ಅತಿವೃಷ್ಠಿಯಾದ ಸಂದರ್ಭದಲ್ಲಿ ದಲಿತರ ವೇದನೆಯನ್ನು ಕೇಳುವವರಿಲ್ಲ ಎಂದು ಹೇಳಿದರು.

 

8 ದಶಕ ಬಳಿಕ ಮುತ್ತು ಮಾರಿಯಮ್ಮನ್ ದೇವಾಲಯಕ್ಕೆ ದಲಿತರ ಪ್ರವೇಶ; ಕನಸೊಂದು ನನಸಾಗಿದೆ ಎಂದ ಭಕ್ತರು!

ಈ ಜಾಗದಲ್ಲಿ ನೆಪಕ್ಕೆ ಶಾಲೆ ಇದ್ದು 2 ಕೊಠಡಿಗಳಿವೆ ಆದರೆ ಯಾವುದೇ ಕಲಿಕಾ ಸಾಮಗ್ರಿಗಳಿಲ್ಲ. 1 ರಿಂದ 5ನೇ ತರಗತಿಗಳಿದ್ದು ಇಬ್ಬರೇ ಶಿಕ್ಷಕರಿದ್ದಾರೆ. ಇಲ್ಲಿ ಚರಂಡಿಗಳಿಲ್ಲ, ರಸ್ತೆಗಳಿಲ್ಲ, ಕೆರೆಯಿಂದ ರಕ್ಷಣಾ ಗೋಡೆಗಳಿಲ್ಲ, ಸಾರ್ವಜನಿಕ ಶೌಚಾಲಯಗಳಿದ್ದು ಅವುಗಳನ್ನು ಉಪಯೋಗಿಸುವ ಸ್ಥಿತಿಯಲ್ಲಿಲ್ಲ, ಇಲ್ಲಿ ವಾಸವಾಗಿರುವ ನಾಗರೀಕರು ಸಂದ್ಯಾ ಸುರಕ್ಷಾ, ವಿಧವೆಯರ ವೇತನ ಇನ್ನಿತರ ಸರ್ಕಾರಿ ಸೌಲಭ್ಯಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ ಎಂದು ತಿಳಿಸಿದರು.

ದಲಿತರಿಗೆ ಇಲ್ಲಿ ನಿವೇಶನ ಹಾಗೂ ಹಕ್ಕು ಪತ್ರಗಳನ್ನು ಇನ್ನೂ ವಿತರಿಸಿಲ್ಲ, ಒಂದು ಚಿಕ್ಕ ಕೊಠಡಿಯಲ್ಲಿ ಮೂರರಿಂದ ಐದು ಕುಟುಂಬಗಳು ಒಟ್ಟಿಗೆ ವಾಸಿಸುವ ಪರಿಸ್ಥಿತಿಯಲ್ಲಿ ಜನರಿದ್ದಾರೆ, ಈ ನಾಗರೀಕರ ಗೋಳನ್ನು ಕೇಳುವಂತಹ ತರೀಕೆರೆ ಪುರಸಭೆಯಾಗಲಿ,ಶಾಸಕರಾಗಲಿ ಅಥವಾ ತಾಲೂಕು ಅಡಳಿತ ಪ್ರಯತ್ನಿಸದೆ ಇರುವುದು ಇವರನ್ನು ಅನಾಥರನ್ನಾಗಿಸಿದೆ. ತಕ್ಷಣಕ್ಕೆ ಈ ಕುರಿತು ಕ್ರಮ ಜರುಗಿಸದೆ ಇದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದÜರು.

 

ದಲಿತರು, ಒಕ್ಕಲಿಗರ ಪತ್ರಿಕೆಗಳಿಗೂ ಜಾಹೀರಾತು ಸಿಗ್ತಿದೆ: ಬ್ರಾಹ್ಮಣ ಸಭೆ

ಮುಖಂಡರಾದ ಚಂದ್ರಶೇಖರ್‌ ಮಾತನಾಡಿ ಡಾ.ಅಂಬೇಡ್ಕರ್‌ ನಗರದಲ್ಲಿ ಮೂಲಸೌಕರ್ಯ ಇಲ್ಲ, ನಿರುದ್ಯೋಗಿಗಳು ಹೆಚ್ಚು ಇದ್ದಾರೆ. ಪಿಯುಸಿ ಮತ್ತು ಡಿಗ್ರಿ ಅದವರು ಇದ್ದಾರೆ, ಅವರಿಗೆ ಉದ್ಯೋಗ ಕೊಡಬೇಕು. ದೊಡ್ಡ ಕೆರೆಗೆ ತಡೆಗೋಡೆ ನಿರ್ಮಿಸಬೇಕು ಎಂದು ಹೇಳಿದರು. ಮುಖಂಡರಾದ ಶಿವಪ್ರಸಾದ್‌ ಮಾತನಾಡಿದರು. ಹಾಲವಜ್ರಪ್ಪ, ಆನಂದ್‌ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios