ಮಡಿಕೇರಿ: ನಗರಸಭೆ ಆಯುಕ್ತರ ಮೇಲೆ ಸ್ಥಾಯಿ ಸಮಿತಿ ಅಧ್ಯಕ್ಷ ಹಲ್ಲೆ ಆರೋಪ; ಕಪ್ಪು ಪಟ್ಟಿ ಧರಿಸಿ ಸಿಬ್ಬಂದಿ ಪ್ರತಿಭಟನೆ

ಸಾಮಾನ್ಯವಾಗಿ ಅಧಿಕಾರಿಗಳು ಜನಪ್ರತಿನಿಧಿಗಳು ಪರಸ್ಪರ ಗುಟ್ಟನ್ನು ಬಿಟ್ಟುಕೊಡದಂತೆ ಕೆಲಸ ಮಾಡುತ್ತಾರೆ. ಆದರೆ ಮಡಿಕೇರಿ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ವಾರ್ ನಡೆದಿದ್ದು ಹಾದಿ ರಂಪಾಟ ಬೀದಿ ರಂಪಾಟ ಆಗಿದೆ. ಇದರಿಂದ ಸಾರ್ವಜನಿಕರು ಪರದಾಡುವಂತೆ ಆಗಿದೆ. 

Allegation of Assault on Municipal Commissioner by standing comittee Chairman  Staff protest by wearing black belt at madikeri rav

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಅ.10): ಸಾಮಾನ್ಯವಾಗಿ ಅಧಿಕಾರಿಗಳು ಜನಪ್ರತಿನಿಧಿಗಳು ಪರಸ್ಪರ ಗುಟ್ಟನ್ನು ಬಿಟ್ಟುಕೊಡದಂತೆ ಕೆಲಸ ಮಾಡುತ್ತಾರೆ. ಆದರೆ ಮಡಿಕೇರಿ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ವಾರ್ ನಡೆದಿದ್ದು ಹಾದಿ ರಂಪಾಟ ಬೀದಿ ರಂಪಾಟ ಆಗಿದೆ. ಇದರಿಂದ ಸಾರ್ವಜನಿಕರು ಪರದಾಡುವಂತೆ ಆಗಿದೆ. 

ಹೌದು ಮಡಿಕೇರಿ ನಗರಸಭೆ ಆಯುಕ್ತರ ಮೇಲೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಅವರು ಆಯುಕ್ತರ ಕಚೇರಿಯಲ್ಲೇ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ಬಿಟ್ಟು ಪ್ರತಿಭಟನೆ ನಡೆಸಿದರು. ನಗರಸಭೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. 

ಮತ್ತೊಮ್ಮೆ ಮಹಿಳೆ ಮೊರೆ ಹೋದ ಕಾಂಗ್ರೆಸ್; ನಾರೀಶಕ್ತಿ ಹೆಸರಲ್ಲಿ ಲೋಕಸಭೆಗೆ ಭರ್ಜರಿ ತಯಾರಿ!

ಕೈಗೆ ಕಪ್ಪುಪಟ್ಟಿ ಕಟ್ಟಿ ಮೌನ ಪ್ರತಿಭಟನೆ ನಡೆಸಿದರು. ಈ ನಡುವೆ ನಗರಸಭೆ ಅಧ್ಯಕ್ಷೆ ಅನಿತಾಪೂವಯ್ಯ ಅವರ ನೇತೃತ್ವದಲ್ಲಿ ಸದಸ್ಯರು ಸಭೆ ನಡೆಸಿದರು. ನಂತರ ಆಯುಕ್ತರ ಕಚೇರಿ ಹೋಗಿ ಆಯುಕ್ತ ವಿಜಯ ಅವರ ಮನವೊಲಿಸಿ ನೌಕರರ ಪ್ರತಿಭಟನೆಯನ್ನು ಕೈಬಿಡಲು ಹೇಳುವಂತೆ ಪ್ರಯತ್ನಿಸಿದರು. 

1 ಗಂಟೆಯವರೆಗೆ ಆ ಪ್ರಯತ್ನ ಮುಂದುವರಿಯಿತು. ಇದಕ್ಕೆ ಬಗ್ಗದ ನಗರಸಭೆ ನೌಕರರು ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಆಯುಕ್ತರ ಮೇಲೆ ಹಲ್ಲೆಗೆ ಮುಂದಾದ ಜನಪ್ರತಿನಿಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಸಲ್ಲಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಈ ವಾರ್ ನಿಂದ ಪ್ರತಿಭಟನೆ ನಡೆಯುತ್ತಿರುವುದು ಗೊತ್ತಿಲ್ಲದೆ ತಮ್ಮ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳಲು ಬಂದಿದ್ದ ಮಹಿಳೆಯರು ಸೇರಿದಂತೆ ಸಾರ್ವಜನಿಕರು ನಗರಸಭೆಗೆ ಬಂದು ನಗರಸಭೆ ಕಚೇರಿಯಲ್ಲಿ ಯಾರೂ ಇಲ್ಲದೇ ಇರುವುದರಿಂದ ಕಾದು ಕಾದು ನಿಂತು ಸುಸ್ತಾಗಿ ಕೊನೆಗೆ ವಾಪಸ್ ಆಗಬೇಕಾಯಿತು. 

ಪ್ರತಿಭಟನೆ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಅವರು ಮಾತನಾಡಿ ನಗರಸಭೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೂ ಒಬ್ಬರೂ ಮೂರು ನಾಲ್ಕು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇಷ್ಟೊಂದು ಒತ್ತಡದ ನಡುವೆಯೂ ಕೆಲಸ ಮಾಡುತ್ತಿರುವಾಗ ಆಯುಕ್ತ ಮೇಲೆ ಹಲ್ಲೆಗೆ ಮುಂದಾಗಿರುವುದು ಸರಿಯಲ್ಲ. ಸರಿಯಾಗಿ ಕೆಲಸ ಮಾಡಲು ಜನಪ್ರತಿನಿಧಿಗಳು ಬಿಡುತ್ತಿಲ್ಲ. ಮಾನಸಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮಡಿಕೇರಿ ತಾಲ್ಲೂಕು ಅಧ್ಯಕ್ಷ ಸತ್ಯನಾರಾಯಣ ಅವರು ಮಾತನಾಡಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸತೀಶ್ ಅವರು ಆಯುಕ್ತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ಇದನ್ನು ಕೇಳಿ ನಾನು ಆಯುಕ್ತರ ಕೊಠಡಿಗೆ ಹೋಗಿ ಪ್ರಶ್ನಿಸಿದಾಗ ಸ್ಥಾಯಿ ಸಮಿತಿ ಅಧ್ಯಕ್ಷರು ನನಗೂ ನಿಂದಿಸಿದರು. ಜೊತೆಗೆ ನೀನು ಪ್ರತಿಭಟನೆ ಮತ್ತೊಂದು ಎಂದು ಹೋದರೆ ಅದು ಹೇಗೆ ನೀನು ಕೆಲಸ ಮಾಡುತ್ತೀಯೋ ನಾನು ನೋಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅವರು ಆಯುಕ್ತರ ಬಳಿಗೆ ಬಂದು ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು. 

ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಕಲ್ಲೆಸೆತ; ಆರೋಪಿ ಅರೆಸ್ಟ್

ನೌಕರರು ಪ್ರತಿಭಟನೆ ನಡೆಸುತ್ತಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಅವರು ಇದೆಲ್ಲಾ ಸುಳ್ಳು ಆರೋಪ. ನಾನು ಯಾರಿಗೂ ನಿಂದಿಸಿಲ್ಲ, ಯಾರ ಮೇಲೂ ಹಲ್ಲೆಗೆ ಮುಂದಾಗಿಲ್ಲ. ಫಾರಂ ನಂ 3, ವಾಸ ಸ್ಥಳ ದೃಢೀಕರಣಪತ್ರ ಸೇರಿದಂತೆ ವಿವಿಧ ಕೆಲಸಗಳಿಗೆ ಅಧಿಕಾರಿಗಳು ಮೂರು ನಾಲ್ಕು ತಿಂಗಳ ಕಾಲ ಅಲೆಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದರಿಂದ ನನ್ನ ಮೇಲೆ ಈ ರೀತಿ ಆಪಾದನೆ ಮಾಡಲಾಗಿದೆ. ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಕಿತ್ತಾಟದಿಂದಾಗಿ ಸಾರ್ವಜನಿಕರು ಪರದಾಡುವಂತೆ ಆಗಿರುವುದು ವಿಪರ್ಯಾಸ.

Latest Videos
Follow Us:
Download App:
  • android
  • ios