Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಕಲ್ಲೆಸೆತ; ಆರೋಪಿ ಅರೆಸ್ಟ್

ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಮೇಲೆ ವ್ಯಕ್ತಿಯೊಬ್ಬ ಕಲ್ಲು ಎಸೆದಿರುವ ಘಟನೆ ಮೈಸೂರಿನ ಟಿಕೆ ಲೇಔಟ್‌ನಲ್ಲಿ ನಡೆದಿದೆ. ಸಿಎಂ ನಿವಾಸದ ಮೇಲೆ ಕಲ್ಲು ತೂರಿರುವ ಆರೋಪಿ ಮೈಸೂರಿನ ಸತ್ಯಮೂರ್ತಿ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

Stone pelting on CM Siddaramaiahs house at mysuru  Accused arrested rav
Author
First Published Oct 10, 2023, 8:36 PM IST

ಮೈಸೂರು (ಅ.10) ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಮೇಲೆ ವ್ಯಕ್ತಿಯೊಬ್ಬ ಕಲ್ಲು ಎಸೆದಿರುವ ಘಟನೆ ಮೈಸೂರಿನ ಟಿಕೆ ಲೇಔಟ್‌ನಲ್ಲಿ ನಡೆದಿದೆ. ಸಿಎಂ ನಿವಾಸದ ಮೇಲೆ ಕಲ್ಲು ತೂರಿರುವ ಆರೋಪಿ ಮೈಸೂರಿನ ಸತ್ಯಮೂರ್ತಿ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಕಲ್ಲು ಎಸೆದಿರುವ ಆರೋಪಿ ಸತ್ಯಮೂರ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಕಳೆದ ವಿಧಾನಸಭಾ ಚುನಾವಣೆ ವೇಳೆ ಇವಿಎಂ ಯಂತ್ರವನ್ನು ಧ್ವಂಸಗೊಳಿಸಿದ್ದ. ಹಲವು ವಿವೇಚನಾರಹಿತ ವರ್ತನೆಗಳನ್ನು ತೋರಿದ್ದಾನೆ. ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಅವರ ಫೋಟೊವನ್ನು ಸಹ ಪೋಸ್ಟ್ ಮಾಡಿ ರೌಡಿ ರಾಜೇಂದ್ರ ಎಂದು ಬರೆದುಕೊಂಡಿದ್ದ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಹಿಂದೂಗಳಿಗೆ ದ್ರೋಹ ಮಾಡುತ್ತಿದೆ: ಚಕ್ರವರ್ತಿ ಸೂಲಿಬೆಲೆ

Follow Us:
Download App:
  • android
  • ios