ಪಾಕ್ ಉಗ್ರ ಸಂಘಟನೆಗೆ ನೆರವು: ಇಬ್ಬರು ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್ ಶೀಟ್
ಪಾಕಿಸ್ತಾನ ಮೂಲದ ತೆಹ್ರೀಕ್-ಎ-ತಾಲಿಬಾನ್ ಸಂಘಟನೆಯ ಜೊತೆ ಸಂಪರ್ಕದಲ್ಲಿದ್ದರು ಹಾಗೂ ಈ ಸಂಘಟನೆಗಾಗಿ ಹಣ ಸಂಗ್ರಹಣೆ ಮಾಡುತ್ತಿದ್ದರು ಎಂದು ಇಬ್ಬರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಮಂಗಳವಾರ ದೋಷಾರೋಪಪಟ್ಟಿ ಸಲ್ಲಿಸಿದೆ.
ಬೆಂಗಳೂರು (ಅ.11): ಪಾಕಿಸ್ತಾನ ಮೂಲದ ತೆಹ್ರೀಕ್-ಎ-ತಾಲಿಬಾನ್ ಸಂಘಟನೆಯ ಜೊತೆ ಸಂಪರ್ಕದಲ್ಲಿದ್ದರು ಹಾಗೂ ಈ ಸಂಘಟನೆಗಾಗಿ ಹಣ ಸಂಗ್ರಹಣೆ ಮಾಡುತ್ತಿದ್ದರು ಎಂದು ಇಬ್ಬರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಮಂಗಳವಾರ ದೋಷಾರೋಪಪಟ್ಟಿ ಸಲ್ಲಿಸಿದೆ.
ನಗರದಲ್ಲಿರುವ ಎನ್‌ಐಎ ಕೋರ್ಟ್‌ಗೆ ದೋಷಾರೋಪ ಸಲ್ಲಿಸಲಾಗಿದ್ದು, ಬೆಂಗಳೂರಿನಲ್ಲಿ ಫ್ರೆಂಚ್ ಭಾಷಾಂತರಕಾರನಾಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಮೊಹಮ್ಮದ್ ಆರಿಫ್ (42) ಮತ್ತು ಮಹಾರಾಷ್ಟ್ರದ ಹಮ್ರಾಜ್ ವೋರ್ಷಿದ್ ಶೇಖ್ ಹೆಸರನ್ನು ಉಲ್ಲೇಖಿಸಲಾಗಿದೆ. ‘ಇಬ್ಬರು ಆರೋಪಿಗಳ ವಿರುದ್ಧ ಯುಎಪಿಎ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಎನ್‌ಐಎ ವಕ್ತಾರ ಹೇಳಿದ್ದಾರೆ.
ವಿದೇಶಿಗರ ಪ್ರಾಣ ನುಂಗ್ತಿದ್ದಾರೆ ಹಮಾಸ್ ಉಗ್ರರು: ನಡುರಸ್ತೆಯಲ್ಲೇ ಕಿಡ್ನಾಪ್ ಮಾಡಿದ ರಾಕ್ಷಸರು!
‘ಈ ಇಬ್ಬರು ಆರೋಪಿಗಳು ಉಗ್ರ ಸಂಘಟನೆ ಸೇರುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದರು. ಆರಿಫ್ ಅಫ್ಘಾನಿಸ್ತಾನದ ಮೂಲಕ ಪಾಕಿಸ್ತಾನ ತಲುಪಿ ಈ ಉಗ್ರ ಸಂಘಟನೆಗೆ ಸೇರಲು ಬಯಸಿದ್ದ. ಇದಕ್ಕಾಗಿ ಇರಾನಿನ ವೀಸಾಗೆ ಅರ್ಜಿ ಸಲ್ಲಿಸಿದ್ದ. ಇಬ್ಬರು ಸಹ ಗುಪ್ತ ಭಾಷೆಯಲ್ಲಿ ತೆಹ್ರೀಕ್ ಸಂಘಟನೆಯ ಜೊತೆ ಸಂವಹನ ನಡೆಸುತ್ತಿದ್ದರು. ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ತರಲು ಬಯಸಿದ್ದ ಇವರು, ಹಿಂಸೆಯ ಮೂಲಕ ಚುನಾಯಿತ ಸರ್ಕಾರವನ್ನು ಕೆಡವಲು ಬಯಸಿದ್ದರು’ ಎಂದು ಎನ್‌ಐಎ ಹೇಳಿದೆ.
ಈ ನಾಲ್ವರು ಐಸಿಸ್ ಶಂಕಿತರ ಸುಳಿವು ನೀಡಿದರೆ ತಲಾ 3 ಲಕ್ಷ ಬಹುಮಾನ: ಎನ್‌ಐಎ ಘೋಷಣೆ