ಈ ನಾಲ್ವರು ಐಸಿಸ್ ಶಂಕಿತರ ಸುಳಿವು ನೀಡಿದರೆ ತಲಾ 3 ಲಕ್ಷ ಬಹುಮಾನ: ಎನ್‌ಐಎ ಘೋಷಣೆ
ಐಸಿಸ್ ಉಗ್ರ ಸಂಘಟನೆಯ ಪುಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಾಂಟೆಡ್ ಲಿಸ್ಟ್‌ನಲ್ಲಿದ್ದ ನಾಲ್ವರು ಉಗ್ರರ ಸುಳಿವು ನೀಡಿದವರಿಗೆ ತಲಾ 3 ಲಕ್ಷ ರು. ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ (NIA) ಘೋಷಿಸಿದೆ.
ಪುಣೆ: ಐಸಿಸ್ ಉಗ್ರ ಸಂಘಟನೆಯ ಪುಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಾಂಟೆಡ್ ಲಿಸ್ಟ್‌ನಲ್ಲಿದ್ದ ನಾಲ್ವರು ಉಗ್ರರ ಸುಳಿವು ನೀಡಿದವರಿಗೆ ತಲಾ 3 ಲಕ್ಷ ರು. ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ (NIA) ಘೋಷಿಸಿದೆ. ಅಬ್ದುಲ್ಲಾ, ರಿಜ್ವಾನ್ ಅಬ್ದುಲ್ ಹಾಜಿ ಅಲಿ, ಅಬ್ದುಲ್ಲಾ ಫಯಾಜ್ ಶೇಕ್ ಹಾಗೂ ತಲ್ಹಾ ಲಿಯಾಕತ್ ಖಾನ್ ಎಂಬುವರನ್ನು ಹುಡುಕಿಕೊಡುವವರಿಗೆ ತಲಾ ಮೂರು ಲಕ್ಷ ರು. ಕೊಡುವುದಾಗಿ ಅದು ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಹಲವು ಬಾರಿ ದಾಳಿ ನಡೆಸಿ ಐಇಡಿ (IED), ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಈ ನಾಲ್ವರು ಕಣ್ಮರೆಯಾಗಿದ್ದರು. ಇವರೆಲ್ಲರೂ ಕೇಂದ್ರ ಸರ್ಕಾರದ ವಿರುದ್ಧ ದಾಳಿ ಮಾಡಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.
ಮಣಿಪುರದಲ್ಲಿ ಮತ್ತೆ ಹಿಂಸಾಚಾರ: 3 ಬಲಿ
ಇಂಫಾಲ್: ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿ ಇತ್ತೀಚಿನಿಂದ ತಣ್ಣಗಾಗಿದ್ದ ಮಣಿಪುರದಲ್ಲಿ ಮತ್ತೆ ಹೊಸದಾಗಿ ಹಿಂಸಾಚಾರ ಆರಂಭವಾಗಿದ್ದು, ಅಪರಿಚಿತ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ ಮೂವರು ನಾಗರಿಕರು ಬಲಿಯಾಗಿದ್ದಾರೆ. ಈ ಘಟನೆ ಮಂಗಳವಾರ ಮುಂಜಾನೆ ಜರುಗಿದ್ದು, ಕಂಗುಯಿ ಪ್ರದೇಶದ ಇರೆಂಗ್ ಮತ್ತು ಕರಂಗ್ ವೈಫೇಯಿ (Karang Waifaei) ಗ್ರಾಮಗಳ ನಡುವೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ದುರ್ಘಟನೆಯಲ್ಲಿ ಮೂವರು ಹತ್ಯಯಾಗಿದ್ದು, ಮೂವರು ಸಹ ಆದಿವಾಸಿ ಸಮುದಾಯಕ್ಕೆ (tribal community) ಸೇರಿದವರಾಗಿದ್ದಾರೆ. ದಾಳಿಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ: ನಿಷೇಧಿತ ಪಿಎಫ್ಐ ನೆಟ್ವರ್ಕ್ ತಲಾಶ್!
ಈ ದುಷ್ಕೃತ್ಯವನ್ನು ಕಾಂಗ್ಪೋಕಿ ಮೂಲದ ನಾಗರಿಕ ಸಮಾಜ ಸಂಘಟನೆ ಸಿಒಟಿಸಿ (COTC)ಖಂಡಿಸಿದೆ. ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುವುದಾಗಿ ಕೇಂದ್ರ ಸರ್ಕಾರ ನೀಡಿರುವ ಮಾತಿಗೆ ಬದ್ಧವಾಗಿರುವುದಾದರೆ ಹಿಂಸಾಚಾರಕ್ಕೆ ತುತ್ತಾಗಿರುವ ಎಲ್ಲಾ ರಾಜ್ಯಗಳಲ್ಲೂ ಶೀಘ್ರ ಸೇನಾಪಡೆಯನ್ನು ನೇಮಕ ಮಾಡಬೇಕು. 1958ರ ಸೇನಾಕಾಯ್ದೆ ಜಾರಿ ಮಾಡಬೇಕು ಎಂದು ಸಿಒಟಿಸಿ ಹೇಳಿದೆ. ಮೇ 3ರಂದು ರಾಜ್ಯದಲ್ಲಿ ಆರಂಭವಾದ ಸಾಮುದಾಯಿಕ ಹಿಂಸೆಯಲ್ಲಿ ಇದುವರೆಗೆ ಸುಮಾರು 180 ಮಂದಿ ಮೃತಪಟ್ಟಿದ್ದು, ನೂರಾರು ಜನ ಗಾಯಗೊಂಡಿದ್ದರು.
ಏಕರೂಪ ಸಂಹಿತೆ ವಿರುದ್ಧ ನಾಗಾಲ್ಯಾಂಡ್ ಅಸೆಂಬ್ಲಿ ನಿರ್ಣಯ
ಕೊಹಿಮಾ: ಪ್ರಾಸ್ತಾವಿತ ಏಕರೂಪ ನಾಗರಿಕ ಸಂಹಿತೆ (UCC))ಯನ್ನು ವಿರೋಧಿಸಿ, ಅದು ರಾಜ್ಯದಲ್ಲಿ ಜಾರಿಯಾಗದಂತೆ ನಾಗಾಲ್ಯಾಂಡ್ ವಿಧಾನಸಭೆ (Nagaland Assembly) ಮಂಗಳವಾರ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ನಾಗಾಲ್ಯಾಂಡ್ ಶಾಸಕಾಂಗ ಸಭೆಯ 14ನೇ ಸದನದಂದು ಯುಸಿಸಿಯ ಉದ್ದೇಶಿತ ಜಾರಿಯಿಂದ ರಾಜ್ಯವನ್ನು ಮುಕ್ತಗೊಳಿಸುವುದು ಅಥವಾ ರಾಜ್ಯದಲ್ಲಿ ಯುಸಿಸಿ ಜಾರಿಯಾಗದಂತೆ ಮುಖ್ಯಮಂತ್ರಿ ನೆಫಿಯು ರಿಯೊ ನಿರ್ಣಯ ಮಂಡಿಸಿದರು.
ಕರ್ನಾಟಕದಲ್ಲಿ ಅಡಗಿದ್ದ ಐಸಿಸ್ ಉಗ್ರ ನಬೀಲ್ ತಮಿಳ್ನಾಡಲ್ಲಿ ಬಂಧನ
ಈ ವೇಳೆ ಅವರು "ಯುಸಿಸಿಯು ಸಾಂಪ್ರಾದಾಯಿಕ ಕಾನೂನುಗಳು, ಸಾಮಾಜಿಕ ಆಚರಣೆಗಳು ಮತ್ತು ನಾಗಾ ಜನರ ಧಾರ್ಮಿಕ ಆಚರಣೆಗಳಿಗೆ ಬೆದರಿಕೆಯನ್ನುಂಟು ಮಾಡುತ್ತದೆ ಎಂದು ನಾಗಾಲ್ಯಾಂಡ್ ಸರ್ಕಾರ ಮತ್ತು ನಾಗಾ ಜನರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ವೈಯಕ್ತಿಕ ವಿಷಯಗಳ ಮೇಲೆ ಒಂದೇ ಕಾನೂನು ರಚಿಸುವುದು ಯುಸಿಸಿಯ ಸ್ಪಷ್ಟ ಉದ್ದೇಶವಾಗಿದೆ" ಎಂದರು. ಎಲ್ಲಾ ನಾಗರಿಕ ನಿಯಮಗಳನ್ನು ಎಲ್ಲಾ ಧರ್ಮದವರಿಗೆ ಒಂದೇ ತೆರನಾಗಿ ರೂಪಿಸುವುದು ಯುಸಿಸಿ ಉದ್ದೇಶವಾಗಿದೆ.
ಸಂಸತ್ ನೌಕರರ ಸಮವಸ್ತ್ರದಲ್ಲಿ ಕಮಲ ಚಿತ್ರ: ಕಾಂಗ್ರೆಸ್ ಕೆಂಡ
ನವದೆಹಲಿ: ನೂತನ ಸಂಸತ್ ಭವನದ ನೌಕರರ ಸಮವಸ್ತದಲ್ಲಿ ಕಮಲದ (lotus) ಚಿತ್ರ ಮುದ್ರಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಪಸ್ತಾಪಿಸಿ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ಲೋಕಸಭೆಯ ವಿಪ್ ಅಧಿಕಾರಿ ಮಾಣಿಕ್ಯಂ ಟ್ಯಾಗೋರ್ (Manikyam Tagore)‘ಕೇಂದ್ರ ಸರ್ಕಾರ ದೇಶದ ಸಂಸತ್ ವಿಚಾರದಲ್ಲೂ ತನ್ನ ಪಕ್ಷದ ಚಿಹ್ನೆಯನ್ನು ಬಳಸಿದೆ. ಇಲ್ಲಿ ಬೇಕಾದರೆ ರಾಷ್ಟ್ರ ಪ್ರಾಣಿ ಹುಲಿ (national animal tiger)ಅಥವಾ ರಾಷ್ಟ್ರಪಕ್ಷಿ ನವಿಲಿನ ಚಿತ್ರ (national bird peacock) ಬಿಡಿಸಬಹುದಿತ್ತು, ಆದರೆ ಅದರಲ್ಲಿ ಪಕ್ಷದ ಚಿಹ್ನೆ ಇರದ ಕಾರಣ ಕಮಲದ ಗುರುತನ್ನು ಬಳಸಿದೆ. ಈ ಮೂಲಕ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಸಂಸತ್ತನ್ನು ಏಕ ಪಕ್ಷೀಯ ಮಾಡಲು ಹುನ್ನಾರ ನಡೆಸಿದೆ’ ಎಂದು ಸ್ಪೀಕರ್ ಓಂ ಬಿರ್ಲಾ ಅವರನ್ನು ಪ್ರಶ್ನಿಸಿದ್ದಾರೆ.