Asianet Suvarna News Asianet Suvarna News

ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟಿದ್ದಕ್ಕೆ ಧಾರವಾಡ ಕೃಷಿ ವಿವಿ ಕುಲಪತಿ ಮತ್ತು ರೆಜಿಸ್ಟರ್ ಮಧ್ಯ ಮನಸ್ತಾಪ!

ಧಾರವಾಡ ಕೃಷಿ ವಿಶ್ವವಿದ್ಯಾಲಯ ಸೆಪ್ಟೆಂಬರ್ 21 ರಿಂದ 24 ರ ವರೆಗೆ ನಡೆಯಲಿರುವ ಧಾರವಾಡ ಕೃಷಿ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್ ಪಾಟೀಲ ತಿಳಿಸಿದರು 

agricultural fair on 21 to 24th September at  dharwad agricultural university rav
Author
First Published Sep 16, 2024, 2:50 PM IST | Last Updated Sep 16, 2024, 2:58 PM IST

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ (ಸೆ.16): ಧಾರವಾಡ ಕೃಷಿ ವಿಶ್ವವಿದ್ಯಾಲಯ ಸೆಪ್ಟೆಂಬರ್ 21 ರಿಂದ 24 ರ ವರೆಗೆ ನಡೆಯಲಿರುವ ಧಾರವಾಡ ಕೃಷಿ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್ ಪಾಟೀಲ ತಿಳಿಸಿದರು 

ನಗರದಲ್ಲಿ ಕೃಷಿ ವಿಶ್ವವಿದ್ಯಾಲಯ ಆಡಳಿತ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಹವಾಮಾನ ವೈಪರಿತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಎಂಬ ಧ್ಯೇಯೋದ್ದೇಶದ ಘೋಷವಾಕ್ಯದೊಂದಿಗೆ 2024-25 ನೇ ಸಾಲಿನ ಕೃಷಿ ಮೇಳವು ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯಲಿದೆ ರೈತರ ಕಾರ್ಯಚಟುವಟಿಕೆಯ ವಿವಿಧ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿವಿಧ ಇಲಾಖೆಗಳ ಸಚಿವರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಧಾರವಾಡಕ್ಕೆ ಬಂದ ತೆಲುಗು ಖ್ಯಾತ ನಟ, ಕನ್ನಡಿಗ ಶ್ರೀಕಾಂತ: ಗೆಳೆಯನ ಮನೆಯಲ್ಲಿ ಉಪಹಾರ ಸೇವನೆ..!

ಆದರೆ ಕೃಷಿ ವಿವಿ ಕುಲಪತಿಗಳು ಪಿ ಎಲ್ ಪಾಟೀಲ ಅವರು  ಆಡಳಿತಾತ್ಮಕ ರೆಜಿಸ್ಟರ್ ಆದ ಜಯಲಕ್ಷ್ಮಿ ರಾಯಗೊಂಡ ಅವರನ್ನ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರನ್ನೆ ಕೈ ಬಿಟ್ಟಿದ್ದಾರೆ..ಆದರೆ ಈ ಕುರಿತು ಕೃಷಿ ಮೇಳದ ಆಮಂತ್ರಣ ಪತ್ರಿಕೆಯಲ್ಲಿ ಆಡಳಿತಾತ್ಮ ರೆಜಿಸ್ಟರ್ ಅವರ ಹೆಸರನ್ನ ಹಾಕದೆ ಇರೋದು ಹಲವು ಅನುಮಾನಕ್ಕೆ ಎಡೆ ಮಾಡಿಕ್ಕೊಟ್ಟಿದೆ. ಇನ್ನು ಈ ಕುರಿತು ವಿಸಿ ಅವರನ್ನ ಕೇಳಿದರೆ ಅವರು ವ್ಯವಸ್ಥಾಪನೆಯ ಮಂಡಳಿಯ ಸದಸ್ಯರಲ್ಲ ಎಂದು ಹರಕೆ ಉತ್ತರವನ್ನ ಕೊಡುತ್ತಿದ್ದಾರೆ.ಆದರೆ ಅವರು ಕೂಡಾ ವ್ಯವಸ್ಥಾಪನೆಯ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿದ್ದಾರೆ..ಕುಲಪತಿಗಳು ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.ಆದರೆ ಕುಲಪತಿಗಳು ರೆಜಿಸ್ಟರ್ ಅವರ ಹೆಸರನ್ನ ಆಮಂತ್ರಣ ಪತ್ರಿಕೆಯಲ್ಲಿ ಕೈ ಬಿಟ್ಟಿದ್ದು ಹಲವು ಅನುಮಾನಕ್ಕೆ ಎಡೆ ಮಾಡಿಕ್ಕೊಟ್ಟಂತಾಗಿದೆ.

ಇನ್ನು ಈ ಕುರಿತು ವಿಶ್ವ ವಿದ್ಯಾಲಯದ ಆಡಾಲಿತಾತ್ಮಕ ರೆಜಿಸ್ಟರ್ ಜಯಲಕ್ಷ್ಮಿ ರಾಯಗೊಂಡ ಇವರನ್ನ ಕೇಳಿದರೆ ನಾನು ಮಂಡಳಿಯ ಸದಸ್ಯಳಾಗಿದ್ದೆನೆ, ಅದರಲ್ಲಿ ಕಾರ್ಯದರ್ಶಿಯಾಗಿದ್ದೆನೆ ಕುಲಪತಿಗಳು ಯಾಕೆ ಹೆಸರು ಕೈ ಬಿಟ್ಟಿದ್ದಾರೆ ಎಂದು ಗೊತ್ತಾಗ್ತಾ ಇಲ್ಲ.ಕೇವಲ ಇದೊಂದೆ ಆಂತ್ರಣ ಪತ್ರಿಕೆಯಲ್ಲಿ ಅಲ್ಲ ನಾನು ಡಿಸೆಂಬರ್ 9 2023 ರಲ್ಲಿ ರೆಜಿಸ್ಟರ್ ಆಗಿನಿಂದಾಗಿನಿಂದಲೂ ನನ್ನ ಹೆಸರನ್ನ ಯಾವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹಾಕ್ತಿಲ್ಲ‌ ಎಂದು ಕುಲಪತಿಗಳ ವಿರುದ್ದ ಆಕ್ರೋಶ ಹೊರ ಹಾಕಿದರು.ನಾನು ಕೂಡಾ ಈ ಕುರಿತು ಸರಕಾರದ ಗಮನಕ್ಕೆ ತರುವೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿದರು.\

ರೈತರಿಗೆ ಹಿಂಗಾರು ಬೆಳೆ ಪರಿಹಾರ ದೊರಕಿಸಿ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಒಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಪತಿಯಾದ  ಪಿ ಎಲ್ ಪಾಟೀಲ ಅವರು ಆಡಳಿತಾತ್ಮಕ ರೆಜಿಸ್ಟರ್ ಜಯಲಕ್ಷ್ಮಿ ರಾಯಗೊಂಡ ಅವರ ಹೆಸರನ್ನ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಕೈ ಬಿಟ್ಟಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕ್ಕೊಟ್ಟಿದೆ.ಇನ್ನು ಈ ಕುರಿತು ರೆಜಿಸ್ಟರ್ ಅವರು ಸರಕಾರದ ಗಮನಕ್ಕೆ ತರುತ್ತೆನೆ ವಿಸಿ ಅವರ ವಿರುದ್ದ ಸಂಭಂದಪಟ್ಟವರ ಗಮನಕ್ಕೆ ತರುತ್ತೆನೆ ಎಂದು ವಿಸಿ ಅವರ ವಿರುದ್ದ ಅಸಮಾಧಾನ ಹೊರ ಹಾಕಿದರು..

Latest Videos
Follow Us:
Download App:
  • android
  • ios