Asianet Suvarna News Asianet Suvarna News

ಗ್ಯಾರಂಟಿ ಬಗ್ಗೆ ತೆಲಂಗಾಣದಲ್ಲಿ ಜಾಹೀರಾತು, ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ನೋಟೀಸ್‌!

ಕರ್ನಾಟಕ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳು ಜಾರಿಯಾಗಿರುವ ಬಗ್ಗೆ ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರ ಜಾಹೀರಾತು ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತಾಗಿ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

advertisement in Telangana Karnataka Government in violation of the Model Code of Conduct ECI Send Notice san
Author
First Published Nov 27, 2023, 10:03 PM IST

ನವದೆಹಲಿ (ನ.27): ತೆಲಂಗಾಣದಲ್ಲಿ ಸರ್ಕಾರಿ ಜಾಹೀರಾತುಗಳನ್ನು ಹಾಕುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಭಾರತೀಯ ಚುನಾವಣಾ ಆಯೋಗ (ಇಸಿಐ) ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಸರ್ಕಾರವು ಹೈದರಾಬಾದ್ ಮೂಲದ ಹಲವಾರು ಪತ್ರಿಕೆಗಳಲ್ಲಿ ತನ್ನ ಜಾಹೀರಾತುಗಳನ್ನು ಪ್ರಕಟಿಸಿದೆ ಎಂದು ಬಿಜೆಪಿ ಮತ್ತು ಬಿಆರ್‌ಎಸ್ ದೂರಿದೆ ಎಂದು ಇಸಿಐ ಸೋಮವಾರ ಹೇಳಿದೆ. ಇಸಿಐ ತನ್ನದೇ ಆದ ದಾಖಲೆಗಳನ್ನು ಪರಿಶೀಲಿಸಿದ್ದು ಮತ್ತು ಅಂತಹ ಅನುಮೋದನೆಯನ್ನು ತಾನು ನೀಡಿಲ್ಲ ಅಥವಾ ಕರ್ನಾಟಕದಿಂದ ಅಂತಹ ಯಾವುದೇ ಅರ್ಜಿಯು ನಿರ್ಧಾರಕ್ಕಾಗಿ ಬಾಕಿ ಉಳಿದಿಲ್ಲ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಕರ್ನಾಟಕ ಮುಖ್ಯಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದು, ನಾಳೆ ಐದು ಗಂಟೆಯ ಒಳಗಾಗಿ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.

ಚುನಾವಣೆ ನಡೆಯುತ್ತಿರೋ ತೆಲಂಗಾಣ ರಾಜ್ಯದಲ್ಲಿ ಕರ್ನಾಟಕ ರಾಜ್ಯದಿಂದ ಜಾಹೀರಾತು ನೀಡಿರೋ ವಿಚಾರದಲ್ಲಿ, ಇನ್ನುಮುಂದೆ ಈ ರೀತಿಯಾದ ಜಾಹೀರಾತು ನೀಡಬಾರದು ಎಂದು ಆದೇಶ ನೀಡಿದೆ. ಈ ರೀತಿಯ ಜಾಹಿರಾತು ನೀಡಬೇಕಾದರೆ ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕು. ಈ ರೀತಿಯ ಜಾಹಿರಾತು ನೀಡಿರೋ ಬಗ್ಗೆ ರಾಜ್ಯ ಸರ್ಕಾರ, ಇನ್ನು ಯಾಕೆ ವಾರ್ತಾ ಇಲಾಖೆಯ ಕಾರ್ಯದರ್ಶಿ ವಿರುದ್ದ ಕ್ರಮ ಯಾಕೆ ಜರುಗಿಸಬಾರದು?  ಎಂದು ನೋಟಿಸ್‌ನಲ್ಲಿ ಆಯೋಗ ತಿಳಿಸಿದೆ.

"ಚುನಾವಣೆ ನಡೆಯುವ ತೆಲಂಗಾಣ ರಾಜ್ಯದಲ್ಲಿ ಪ್ರಸಾರವಾಗುವ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸುವ ಜಾಹೀರಾತುಗಳನ್ನು ನೀಡುವ ಕಾರ್ಯವು ಆಯೋಗದ ಮೇಲಿನ ನಿರ್ದೇಶನಗಳ ಸಂಪೂರ್ಣ ಉಲ್ಲಂಘನೆಯಾಗಿದೆ" ಎಂದು ಇಸಿಐ ಅಧಿಸೂಚನೆ ತಿಳಿಸಿದೆ.

ಮದ್ರಾಸ್, ಬಾಂಬೆ ಬಳಿಕ ಹೈದರಾಬಾದ್ ಮರುನಾಮಕರಣ ಖಚಿತ; ಬಿಜೆಪಿ ರಾಜ್ಯಾಧ್ಯಕ್ಷ!

ದೂರು ನೀಡಿದ್ದ ಬಿಜೆಪಿ: ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧ ಇಸಿಐಗೆ ಬಿಜೆಪಿ ದೂರು ನೀಡಿತ್ತು.  ತೆಲಂಗಾಣ ಚುನಾವಣೆಯಲ್ಲಿ ತೆಲುಗು ಹಾಗೂ ಇಂಗ್ಲಿಷ್ ಪೇಪರ್ ಗಳಲ್ಲಿ ಕರ್ನಾಟಕ ಗ್ಯಾರಂಟಿ ಕುರಿತು ಜಾಹೀರಾತು ನೀಡಿರುವ ಹಿನ್ನೆಲೆಯಲ್ಲಿ  ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿತ್ತು. ಈ ರೀತಿ ಜಾಹೀರಾತು ನೀಡದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಇಸಿಐಗೆ ಬಿಜೆಪಿ ಮನವಿ ಕರ್ನಾಟಕ ಜಾಹೀರಾತು ಕುರಿತಾಗಿ ಇದರ ವೆಚ್ಚವನ್ನ INC ತೆಲಂಗಾಣ ಭರಿಸುವಂತೆ ಸೂಚನೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸುಮ್ನೆ ಕೂತ್ಕೊಳ್ಳಿ, ಇಲ್ಲಾ ಎದ್ದೋಗಿ; ಕಾಂಗ್ರೆಸ್ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಗರಂ!

Follow Us:
Download App:
  • android
  • ios