ಮದ್ರಾಸ್ ಈಗ ಚೆನ್ನೈ, ಬಾಂಬೆ-ಮುಂಬೈ ಆಗಿ ಬದಲಾಗಿದೆ. ಹೀಗೆ ಹೈದರಾಬಾದ್ ಭಾಗ್ಯನಗರವಾಗಿ ಮರುನಾಮಕರಣ ಗೊಳ್ಳುವುದು ಖಚಿತ. ಅಧಿಕಾರಕ್ಕೆ ಬಂದ ಮೊದಲ ದಿನವೇ ಈ ಘೋಷಣೆ ಹೊರಬೀಳಲಿದೆ ಅನ್ನೋ ಬಿಜೆಪಿ ಘೋಷಣೆ ಇದೀಗ ಬಾರಿ ಸಂಚಲನ ಸಷ್ಟಿಸಿದೆ.

ಹೈದರಾಬಾದ್(ನ.27) ಹೈದರಾಬಾದ್ ಅಧಿಕಾರಕ್ಕೆ ಬಂದರೆ ಹೈದರಾಬಾದ್ ನಗರವನ್ನು ಭಾಗ್ಯನಗರವಾಗಿ ಮರುನಾಮಕರಣ ಮಾಡುವುದಾಗಿ ಘೋಷಣೆ ಮಾಡಿದೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಳಿಕ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಜಿ ಕಿಶನ್ ರೆಡ್ಡಿ ಮರುನಾಮಕರಣ ಖಚಿತ ಎಂದು ಘೋಷಣೆ ಮಾಡಿದ್ದಾರೆ. ಕೆಲ ನಗರಗಳನ್ನು ಈಗಾಗಲೇ ಮರುನಾಮಕರಣ ಮಾಡಲಾಗಿದೆ. ಬಾಂಬೆ, ಕಲ್ಕತ್ತಾ ಬಳಿಕ ಇದೀಗ ಹೈದರಾಬಾದ್ ಭಾಗ್ಯನಗರವಾಗಿ ಮರುನಾಮಕರಣಗೊಳ್ಳಲಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ತೆಲಂಗಾಣ ವಿಧಾನಸಭಾ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಕಿಶನ್ ರೆಡ್ಡಿ, ಹಿಮಂತ ಬಿಶ್ವಾ ಶರ್ಮಾ ಹಾಗೂ ಯೋಗಿ ಆದಿತ್ಯನಾಥ್ ಈಗಾಗಲೇ ಮರುನಾಮಕರಣ ಘೋಷಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮರುನಾಮಕರಣ ಖಚಿತ ಎಂದಿದ್ದಾರೆ. ಮದ್ರಾಸ್ ನಗರವನ್ನು ಚೆನ್ನೈ ಎಂದು, ಬಾಂಬೆ-ಮುಂಬೈ ಆಗಿ, ಕಲ್ಕತ್ತಾವನ್ನು ಕೋಲ್ಕತಾ ಎಂದು ಮರುನಾಮಕರಣ ಮಾಡಲಾಗಿದೆ. ರಾಜಪಥವನ್ನು ಕರ್ತವ್ಯಪಥ ಎಂದು ಕೇಂದ್ರ ಬಿಜೆಪಿ ಮರುನಾಮಕರಣ ಮಾಡಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ

ತೆಲಂಗಾಣ ಚುನಾವಣೆಗೆ ಅಕ್ರಮ ಹಣ ವರ್ಗಾವಣೆ?: ಜಮೀರ್ ಅಹಮ್ಮದ್ ತಂಗಿದ್ದ ಹೋಟೆಲ್‌ ಮೇಲೆ ಪೊಲೀಸರ ದಾಳಿ

ಯಾರು ಈ ಹೈದರ್. ಆತನ ಹೆಸರನ್ನು ನಗರಕ್ಕೆ ಏಕೆ ಇಡಬೇಕು. ಹೈದರಾಬಾದ್ ಹೆಸರಿಗೂ ಮೊದಲು ಇದು ಭಾಗ್ಯನಗರವಾಗಿತ್ತು. ನಿಜಾಮರ ಆಡಳಿತದಲ್ಲಿ ಭಾಗ್ಯನಗರವನ್ನು ಹೈದರಾಬಾದ್ ಎಂದು ಮರುನಾಮಕರಣ ಮಾಡಲಾಗಿದೆ. ಮದ್ರಾಸ್ ನಗರನ್ನು ಚೆನ್ನೈ ಎಂದು ಮರುನಾಮಕರಣ ಮಾಡಿದ್ದು ಬಿಜೆಪಿಯಲ್ಲ. ಚೆನ್ನೈ ಮರುನಾಮಕರಣವನ್ನು ಎಲ್ಲರೂ ಬೆಂಬಲಿಸಿದ್ದಾರೆ. ಇದೀಗ ಹೈದರಾಬಾದ್ ಭಾಗ್ಯನಗರ ಅನ್ನೋ ಮರುನಾಮಕರಣಕ್ಕೆ ಮಾತ್ರ ಕೆಲವರು ವಿರೋಧಿಸುತ್ತಿದ್ದಾರೆ ಎಂದು ರೆಡ್ಡಿ ಹೇಳಿದ್ದಾರೆ.

ಗುಲಾಮಿ ಸಂಸ್ಕೃತಿಯಲ್ಲಿ ಜೀವನ ಸಾಗಿಸುವ ಕಾಲ ಇದಲ್ಲ. ಇದು ಸ್ವಾವಲಂಭಿ ಭಾರತ. ಯಾವುದೇ ಗುಲಾಮಿ ಪದ್ದತಿಯನ್ನು ಉಳಿಸುವುದಿಲ್ಲ ಎಂದು ಜಿ ಕಿಶನ ರೆಡ್ಡಿ ಹೇಳಿದ್ದಾರೆ. 

ಒವೈಸಿ ಪೊಲೀಸ್ ಬೆದರಿಕೆ ಪ್ರಕರಣ ಅಸ್ಸಾಂನಲ್ಲಾಗಿದ್ರೆ ಐದೇ ನಿಮಿಷದಲ್ಲಿ ಸೆಟ್ಲ್; ಸಿಎಂ ಹಿಮಂತ ಎಚ್ಚರಿಕೆ!

ಇತ್ತೀಚೆಗೆ ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್ ಭಾಗ್ಯನಗರ ಹೇಳಿಕೆ ನೀಡಿದ್ದರು. ‘ಕಾಂಗ್ರೆಸ್‌ ಇಮದಿನ ಹೈದರಾಬಾದ್‌ ನಗರವನ್ನು ನಿರ್ಮಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಈ ನಗರವನ್ನು ಭಾಗ್ಯಲಕ್ಷ್ಮೀ ದೇವತೆಯ ಹೆಸರಿನಲ್ಲಿ ಭಾಗ್ಯನಗರ ಎಂದು ನಿರ್ಮಿಸಿ ಇಲ್ಲಿನ ರಾಮಭಕ್ತ ಮತದಾರರಿಗೆ ಅರ್ಪಿಸಲಾಗುವುದು’ ಎಂದರು. ಇದೇ ವೇಳೆ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವುದು ಅಂಬೇಡ್ಕರ್‌ ರಚಿಸಿದ ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಬಣ್ಣಿಸಿದರು.