PSI Scam: ಅಮೃತ್‌ ಪಾಲ್‌ ಮಂಪರು ಪರೀಕ್ಷೆ ನಡೆಸಿ: ಸಿದ್ದು ಆಗ್ರಹ

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾಗಿರುವ ರಾಜಕಾರಣಿಗಳ ಹೆಸರು ಹೊರಬರಲು ಬಂಧಿತರಾಗಿರುವ ಎಡಿಜಿಪಿ ಅಮೃತ್‌ ಪಾಲ್‌ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಜತೆಗೆ ಅವರ ಡೈರಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

adgp amrit paul should be subjected to narco test says siddaramaiah gvd

ಬೆಂಗಳೂರು (ಜು.15): ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾಗಿರುವ ರಾಜಕಾರಣಿಗಳ ಹೆಸರು ಹೊರಬರಲು ಬಂಧಿತರಾಗಿರುವ ಎಡಿಜಿಪಿ ಅಮೃತ್‌ ಪಾಲ್‌ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಜತೆಗೆ ಅವರ ಡೈರಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ಪಿಎಸ್‌ಐ ಅಕ್ರಮ ಅಗೆದಷ್ಟೂ ಆಳವಿದೆ. ಪಿಎಸ್‌ಐ ನೇಮಕಾತಿ ವಿಭಾಗದ ಎಡಿಜಿಪಿಯೇ ಬಂಧಿತರಾಗಿದ್ದಾರೆ. ಅವರು ಸತ್ಯ ಬಾಯಿಬಿಟ್ಟರೆ ಪ್ರಕರಣದ ಹಿಂದಿರುವ ಹಿರಿಯರ ಹೆಸರು ಹೊರಬರಲಿದೆ. 

ಹೀಗಾಗಿ ಎಸಿಬಿ ಅಧಿಕಾರಿಗಳಿಂದ ಬಂಧಿತರಾಗಿರುವ ಅಮೃತ್‌ ಪಾಲ್‌ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಯಾರೆಲ್ಲಾ ಶಾಮೀಲಾಗಿದ್ದಾರೋ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲಿ. ಪ್ರಕರಣದಲ್ಲಿ ಯಾವೊಬ್ಬ ತಪ್ಪಿತಸ್ಥರೂ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅನೇಕ ಸಚಿವರು, ಅವರ ಆಪ್ತರು ಶಾಮೀಲಾಗಿರುವ ಸಂದೇಹಗಳಿವೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬೀಳಬೇಕು ಎಂದರೆ ಪ್ರಮುಖ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅಮೃತ್‌ ಪಾಲ್‌ ಬರೆದ ಡೈರಿಯ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಿದ್ದು ಅವರನ್ನು ಮನೆಗೆ ಕಳಿಸುವ ಉತ್ಸವ ಸಿದ್ದರಾಮೋತ್ಸವ: ಅಶ್ವತ್ಥ್‌ ನಾರಾಯಣ್‌

ಅಮೃತ್‌ ಪಾಲ್‌-ಶಾಂತಕುಮಾರ್‌ ಮಧ್ಯೆ 1.36 ಕೋಟಿ ವ್ಯವಹಾರ: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‌ ಪಾಲ್‌ ಹಾಗೂ ಡಿವೈಎಸ್ಪಿ ಶಾಂತಕುಮಾರ್‌ ನಡುವೆ 1.36 ಕೋಟಿ ರು. ಹಣ ಕೈ ಬದಲಾಗಿದೆ ಎಂದು ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ಪೊಲೀಸರು ತಿಳಿಸಿದ್ದಾರೆ. ತನಿಖೆಗಾಗಿ ವಶಕ್ಕೆ ಪಡೆದಿದ್ದ ಅವಧಿ ಬುಧವಾರಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಎಡಿಜಿಪಿ ಅಮೃತ್‌ ಪಾಲ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. 

ಅಲ್ಲದೆ, ಹೆಚ್ಚವರಿ ತನಿಖೆಗಾಗಿ ಮತ್ತೆ ವಶಕ್ಕೆ ನೀಡುವಂತೆ ಸಿಐಡಿ ಪೊಲೀಸರು ಮನವಿ ಮಾಡಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು, ಮತ್ತೆ ಮೂರು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶಿತು. ‘ಪಿಎಸ್‌ಐ ನೇಮಕಾತಿಯಲ್ಲಿ ಕೆಲ ಅಭ್ಯರ್ಥಿಗಳಿಗೆ ಸಹಕರಿಸಲು ಅವರಿಂದ ಹಣ ಸಂಗ್ರಹಿಸಲಾಗಿತ್ತು. ಈ ಹಣದಲ್ಲಿ ತಾನು ಎಡಿಜಿಪಿ ಅಮೃತ್‌ ಪಾಲ್‌ ಅವರಿಗೆ 1.36 ಕೋಟಿ ರು. ಹಣ ತಲುಪಿಸಿದ್ದೇನೆ ಎಂದು ವಿಚಾರಣೆ ವೇಳೆ ಡಿವೈಎಸ್ಪಿ ಶಾಂತಕುಮಾರ್‌ ಹೇಳಿಕೆ ನೀಡಿದ್ದಾರೆ. ಆದರೆ. ಡಿವೈಎಸ್ಪಿ ಹಣ ಕೊಟ್ಟಿರುವ ಬಗ್ಗೆ ಎಡಿಜಿಪಿ ಖಚಿತಪಡಿಸುತ್ತಿಲ್ಲ. 

ಇದು ಸಿದ್ದರಾಮೋತ್ಸವ ಅಲ್ಲ, ಸಿದ್ದು ಜನ್ಮದಿನದ ಅಮೃತ ಮಹೋತ್ಸವ: ಬಸವರಾಜ ರಾಯರೆಡ್ಡಿ

ಈ ಸಂಬಂಧ ಕೇಳಿದ ಯಾವುದೇ ಪ್ರಶ್ನೆಗಳಿಗೆ ಅವರು ಉತ್ತರಿಸದೆ ತನಿಖೆಗೆ ಅಸಹಕಾರ ತೋರಿದ್ದಾರೆ’ ಎಂದು ನ್ಯಾಯಾಲಯಕ್ಕೆ ಸಿಐಡಿ ವಕೀಲರು ತಿಳಿಸಿದರು. ‘ತನಿಖೆ ಸಲುವಾಗಿ ವಶಕ್ಕೆ ಪಡೆದಿದ್ದ 10 ದಿನಗಳಲ್ಲಿ ಐದು ದಿನಗಳು ಕಾಲ ಎಡಿಜಿಪಿ ವಿಚಾರಣೆಗೆ ಸಹಕರಿಸಲಿಲ್ಲ. ಹೀಗಾಗಿ ಮತ್ತೆ ಐದು ದಿನಗಳು ಎಡಿಜಿಪಿ ಅವರನ್ನು ಸಿಐಡಿ ವಶಕ್ಕೆ ನೀಡಿ’ ಎಂದು ಸಿಐಡಿ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಎಡಿಜಿಪಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಕೊನೆಗೆ ಸಿಐಡಿ ಮನವಿಯನ್ನು ಪುರಸ್ಕರಿಸಿ ಮೂರು ದಿನಗಳ ಕಾಲ ವಶಕ್ಕೆ ನೀಡಿದೆ.

Latest Videos
Follow Us:
Download App:
  • android
  • ios