ಸಿದ್ದು ಅವರನ್ನು ಮನೆಗೆ ಕಳಿಸುವ ಉತ್ಸವ ಸಿದ್ದರಾಮೋತ್ಸವ: ಅಶ್ವತ್ಥ್ ನಾರಾಯಣ್
ಕಾಂಗ್ರೆಸ್ಸಿಗರೆಲ್ಲರೂ ಸೇರಿ ಆಚರಿಸುತ್ತಿರುವ ಸಿದ್ದರಾಮೋತ್ಸವ ಸಿದ್ದರಾಮಯ್ಯ ಅವರನ್ನು ಮನೆ ಕಡೆಗೆ ಕಳುಹಿಸುವ ಉತ್ಸವ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ವ್ಯಂಗ್ಯವಾಡಿದರು.
ಮಂಡ್ಯ (ಜು.14): ಕಾಂಗ್ರೆಸ್ಸಿಗರೆಲ್ಲರೂ ಸೇರಿ ಆಚರಿಸುತ್ತಿರುವ ಸಿದ್ದರಾಮೋತ್ಸವ ಸಿದ್ದರಾಮಯ್ಯ ಅವರನ್ನು ಮನೆ ಕಡೆಗೆ ಕಳುಹಿಸುವ ಉತ್ಸವ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ವ್ಯಂಗ್ಯವಾಡಿದರು. ಮೇಲುಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ಸವ ಎಂದರೆ ಮನೆಗೆ ಹೋಗು ಎಂದರ್ಥ. 75 ವರ್ಷವಾಗಿದೆ. ಸಾಕಪ್ಪ, ಇಷ್ಟುವರ್ಷ ಕಾಲ ಸಾಕಷ್ಟು ಸೇವೆ ಮಾಡಿದ್ದೀರಿ. ಈಗ ನೀವು ಔಟ್‌ಡೇಟೆಡ್, ಪಕ್ಷದಲ್ಲಿ ಹೊಸಬರಿದ್ದಾರೆ. ಅವರಿಗೆ ಅವಕಾಶ ಕೊಡಿ. ಇನ್ನು ನೀವು ಮನೆ ಸೇರಿಕೊಳ್ಳಿ ಎಂಬ ಸಂದೇಶವನ್ನು ಪಕ್ಷದವರು ನೀಡುತ್ತಿದ್ದಾರೆ ಎಂದರು. ಮುಖ್ಯಮಂತ್ರಿ ಆದಾಗ 5 ವರ್ಷ ಆಡಳಿತ ನಡೆಸುತ್ತೇನೆ.
ಮತ್ತೆ ರಾಜಕೀಯದಿಂದ ದೂರ ಇರುತ್ತೇನೆ ಎಂದಿದ್ದರು ಸಿದ್ದರಾಮಯ್ಯ. ಈಗ ಇನ್ನೊಂದು 5 ವರ್ಷ, ಮತ್ತೆ ಇನ್ನೊಂದು 5 ವರ್ಷ ಬೇಕು ಅಂತಾರೆ. ಇದೇ ರೀತಿಯಾದರೆ ಬೇರೆಯವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು ಡಾ.ಅಶ್ವತ್ಥನಾರಾಯಣ. ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯಲ್ಲಿ ಏನು ದೊಡ್ಡ ಸಾಧನೆ ಮಾಡಿದ್ದಾರೆ ಹೇಳಲಿ. ನಾಡಿಗೆ ಭಾರೀ ಕೊಡುಗೆ ನೀಡಿದ್ದಾರಾ? ಇಂಥ ನಾಯಕ ನಮ್ಮ ನಾಡಿನಲ್ಲೇ ಇಲ್ಲ ಅಂತೇನೂ ಇಲ್ಲವಲ್ಲ ಎಂದರು. ತಮಗೋಸ್ಕರ ಬದುಕುವುದನ್ನ ಬಿಟ್ಟು, ಸಮಾಜಕ್ಕೆ ಬದುಕಬೇಕು. ಈ ವಯಸ್ಸಿನಲ್ಲಿ ತಮ್ಮ ಸ್ವಾರ್ಥ, ಅತೀ ಸ್ವಾರ್ಥವಾಗಿರುವಂತ ಬದುಕನ್ನ ಬಿಟ್ಟು 75ನೇ ವರ್ಷದಲ್ಲಾದರೂ ಒಳ್ಳೆಯ ಜ್ಞಾನ ಬರಲಿ ಅವರಿಗೆ ಎಂದು ಆಶಿಸಿದರು.
Bengaluru: ಮಲ್ಲೇಶ್ವರ ಅಭಿವೃದ್ಧಿಗೆ ವಿದ್ಯಾರ್ಥಿಗಳ ಮಾದರಿ
ಸೂಟು ಬೂಟು ಹೊಲಿಸಿಕೊಂಡವರೆಲ್ಲ ಸಿಎಂ ಆಗಲ್ಲ: ಸೂಟ್ ಹೊಲಿಸಿಕೊಂಡವರೆಲ್ಲ ಸಿಎಂ ಆಗೋಲ್ಲ, ಅಣ್ಣ-ತಮ್ಮಂದಿರು ಸೂಟು ಒಲಿಸಿಕೊಂಡಿದ್ದು ನಿರಾಶರಾಗಿದ್ದಾರೆ. ನಾನು ಸಿಎಂ ಆಗುತ್ತೇನೆ ಎಂಬ ಆತಂಕ ಡಿ.ಕೆ.ಸುರೇಶ್‌ಗೆ ಇದ್ದರೇ ಏನು ಮಾಡಕ್ಕೆ ಆಗಲ್ಲ ಎಂದು ಡಿ.ಕೆ. ಶಿವಕುಮಾರ್ ಸಹೋದರರ ವಿರುದ್ಧ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದರು.
ಚಿಕ್ಕಕಲ್ಯಾ ಗ್ರಾಮದಲ್ಲಿ ಜಿಟಿಡಿಸಿ ಕಟ್ಟಡ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮುಳುಗುವ ಹಡಗಾಗಿದ್ದು, ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂದು ಅರಿತಿರುವ ಆ ಪಕ್ಷದ ನಾಯಕರು ಒಬ್ಬೊಬ್ಬರೇ ಪಕ್ಷ ಬಿಡುತ್ತಿದ್ದಾರೆ. ಅಲ್ಲಿ ಸಿದ್ದರಾಮಯ್ಯ ಮೇಲಾ, ಡಿ.ಕೆ.ಶಿವಕುಮಾರು ಮೇಲಾ ಎಂದು ಗುದ್ದಾಟ ಶುರುವಾಗಿದೆ. ಬಿಜೆಪಿಯಲ್ಲಿ ಆ ರೀತಿಯ ಪರಿಸ್ಥಿತಿ ಇಲ್ಲ. ನಮ್ಮಂಥ ಸಾವಿರಾರು ನಾಯಕರನ್ನ ಸೃಷ್ಟಿಮಾಡುವ ಶಕ್ತಿ ಬಿಜೆಪಿಗೆ ಇದೆ, ಅಶ್ವತ್ಥನಾರಾಯಣ್ ಬಿಜೆಪಿಯ ಒಂದು ಭಾಗವಷ್ಟೇ ಎಂದರು.
ಚಿತ್ರನ್ನಾ ಗಿರಾಕಿಗಳು: ಡಿಕೆ ಸಹೋದರರು ಚಿತ್ರನ್ನಾ ಗಿರಾಕಿಗಳು, ಅಧಿಕಾರಕ್ಕಾಗಿ ಬದುಕುವವರು. ನಾವು ಜನರಿಗೋಸ್ಕರ ಬದುಕುತ್ತಿದ್ದೇವೆ. ಸಿದ್ದರಾಮಯ್ಯ ನಿರಾಧಾರ ಹೇಳಿಕೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರೂ ಮತ್ತೆ ಅಧಿಕಾರದ ಆಸೆ ಬಂದಿದೆ. ಬೇರೆಯವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಇಲ್ಲ ಎಂದು ಲೇವಡಿ ಮಾಡಿದರು. ಬಿಜೆಪಿ ಸರಕಾರಕ್ಕೆ ಬದ್ಧತೆ, ಕಾಳಜಿ ಇಲ್ಲ ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬದ್ಧತೆ ಎಂಬುದು ಕಾಂಗ್ರೆಸ್ ಜೀವನದಲ್ಲೆ ಇಲ್ಲ.
ಇನ್ಮುಂದೆ ಕರ್ನಾಟಕದ ಎಲ್ಲಾ ವಿವಿ, ಕಾಲೇಜುಗಳಿಗೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ
ಸಮಾಜದಲ್ಲಿ ಸಂಪೂರ್ಣ ತಿರಸ್ಕಾರವಾಗಿರೋ ಪಕ್ಷ ಏನು ಭವಿಷ್ಯವಿಲ್ಲದ ಪಕ್ಷ ಕಾಂಗ್ರೆಸ್. ದೇಶದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುತ್ತಿದೆ, ಯಾವ ನಾಯಕರು ಆ ಪಕ್ಷದಲ್ಲಿ ಮುಂದೆ ಇರುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಆಗಲು ಸಹ ಹುಡುಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಸಂಪೂರ್ಣ ನಿರ್ನಾಮವಾಗುವ ಪಕ್ಷ. ಅವರು ಎಲ್ಲಿ ಇರುತ್ತಾರೋ ಅಲ್ಲಿ ದುಡ್ಡು ಮಾಡಬೇಕು, ಏನು ಅಧಿಕಾರ ಪಡೆಯಬೇಕು, ಅವರ ಮನೆಯವರು ಏನು ರಾಜಕೀಯ ಮಾಡಬೇಕು ಎಂಬುದು ಬಿಟ್ಟರೇ ಅವರಿಗೆ ಬೇರೆ ಏನು ಯೋಚನೆ ಇಲ್ಲ ಎಂದು ಕಿಡಿಕಾರಿದರು.