Asianet Suvarna News Asianet Suvarna News

ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿ: ಹುಬ್ಬಳ್ಳಿಯಲ್ಲಿ ಮಠಾಧೀಶರ ಮೀಸಲಾತಿ ಹೋರಾಟ

ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಮತ್ತೆ ಮೀಸಲಾತಿ ಕೂಗ ಎದ್ದಿದೆ. ವೀರಶೈವ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿ ಎಂದು ನಾಡಿನ ವಿವಿಧ ಮಠಾಧೀಶರು ಹೋರಾಟ ಆರಂಭಿಸಿದ್ದಾರೆ.

Add Lingayat sub castes to Centres OBC list pontiff reservation struggle meeting in Hubballi gvd
Author
First Published Jun 16, 2023, 1:40 AM IST

ಗುರುರಾಜ ಹೂಗಾರ, ಏಷ್ಯಾನೆಟ್ ಸುವರ್ಣ ನ್ಯೂಸ್

ಹುಬ್ಬಳ್ಳಿ (ಜೂ.16): ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಮತ್ತೆ ಮೀಸಲಾತಿ ಕೂಗ ಎದ್ದಿದೆ. ವೀರಶೈವ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿ ಎಂದು ನಾಡಿನ ವಿವಿಧ ಮಠಾಧೀಶರು ಹೋರಾಟ ಆರಂಭಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸಭೆ ಸೇರಿದ  ಮಠಾಧೀಶರು ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಹೌದು! ವೀರಶೈವ ಲಿಂಗಾಯತ ಸಮುದಾಯದ ಒಳ ಪಂಗಡಗಳಿಗೆ ಕೇಂದ್ರದ ಓಬಿಸಿ ಮೀಸಲಾತಿಗಾಗಿ ವಿವಿಧ ಮಠಾಧೀಶರು ಇದೀಗ ಹೊಸ ಹೋರಾಟ ಹುಟ್ಟು ಹಾಕಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿಂದು ಪಂಚಪೀಠಾಧೀಶರ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಮುಖಂಡರಿಂದ ಸಭೆ ನಡೆಸಲಾಯಿತು. 

ವೇದಿಕೆಯಡಿ ಚಿಂತನ ಮಂಥನ ಸಭೆ ನಡೆಸುವ ಮೂಲಕ ವೀರಶೈವ ಎಲ್ಲಾ ಪಂಗಡಗಳನ್ನ ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಹಕ್ಕೋತ್ತಾಯ ಮಂಡಿಸಲಾಯಿತು. ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದಾರಾಮ ಪಂಡತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಜ್ಜಯನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ, ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಮುಂಡರಗಿಯ ಅನ್ನದಾನೇಶ್ವರ ಸ್ವಾಮೀಜಿಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಾಧೀಶರು ಈ ಸಭೆಯಲ್ಲಿ ಭಾಗಿಯಾಗಿ ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳಿಗೆ ಕೇಂದ್ರದ ಓಬಿಸಿ ಮೀಸಲಾತಿ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ತರುವ ನಿಟ್ಟಿನಲ್ಲಿ ಒಗ್ಗಟ್ಟಿನ‌ಮಂತ್ರ ಜಪಿಸಲಾಯಿತು.

ಲೋಕ​ಸಭಾ ಚುನಾ​ವ​ಣೆಯಲ್ಲಿ ಸ್ಪರ್ಧಿ​ಸಲು ಸಿದ್ಧ: ಅಶೋಕ್‌ ಖೇಣಿ

ಇನ್ನು ಪ್ರಮುಖವಾಗಿ ಈಗಾಗಲೇ ವೀರಶೈವ ಲಿಂಗಾಯತದ ಉಪಪಂಗಡಗಳಾದ ಗಾಣಿಗ, ಲಿಂಗಾಯತ ಕುರುಬ, ಹಡಪದ, ಮೇದಾರ, ನೇಕಾರ ಸೇರಿ 28 ಉಪಪಂಗಡಗಳು ಓಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಇನ್ನುಳಿದ 59 ಉಪ ಪಂಗಡಗಳನ್ನೂ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಮಠಾಧೀಶರಿಂದ ಒತ್ತಾಯ ಕೇಳಿಬಂದಿದೆ.‌ಇನ್ನು ಈ ವೇಳೆ ಮಾತನಾಡಿದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದಾರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ಈ ಹಕ್ಕೊತ್ತಾಯ ಸಮಾಜದ ಭಕ್ತರ ಮಕ್ಕಳಿಗೆ ಉಪಯೋಗವಾಗುವಂತಹದು. ಎಲ್ಲ ಮಠಾಧೀಶರ ಮೇಲೆ ಸಮಾಜದ ಋಣ ಇದೆ ಮಠಾಧೀಶರನ್ನ ಸಮಾಜ ತಮ್ಮ ಮಕ್ಕಳಂತೆ ಪೋಷಿಸಿಕೊಂಡು ಬಂದಿದೆ. ಮಠಗಳನ್ನ ಮಠಾಧೀಶರನ್ನ ಪೂಜ್ಯ ಭಾವನೆಯಿಂದ ಸಮಾಜದ ಜನ ನಡೆದುಕೊಂಡು ಬಂದಿದ್ದಾರೆ.

ಪ್ರತಾಪ್‌ ಸಿಂಹ-ಎಚ್‌ಡಿಕೆ ಅಡ್ಜಸ್ಟ್‌ಮೆಂಟ್‌ ರಾಜಕಾರಣಿಗಳು: ಎನ್‌.ಚಲುವರಾಯಸ್ವಾಮಿ

ಅದರ ಋಣ ತೀರಿಸಲು ಎಲ್ಲ‌ ಮಠಾಧೀಶರು ಈ ಹಕ್ಕೊತ್ತಾಯ ಮಾಡುತ್ತಿದ್ದಾರೆ ಕೇಂದ್ರದ ಓಬಿಸಿಯಿಂದ ವಂಚಿತರಾಗಿ,. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಒಳಪಂಗಡಗಳನ್ನ ಓಬಿಸಿ ಪಟ್ಟಿಗೆ ಸೇರಿಸಬೇಕು. ಕೇಂದ್ರ ಸರ್ಕಾರ ಈ ಒಳಪಂಗಡಗಳನ್ನ ಓಬಿಸಿಗೆ ಸೇರಿಸಬೇಕು. ಇಲ್ಲವಾದಲ್ಲಿ ಕೇಂದ್ರ ಸರ್ಕಾರ ಮುಂದಾಗುವ ಪರಿಣಾಮಗಳನ್ನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಒಟ್ಟಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳನ್ನ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂಚೂಣಿಯಲ್ಲಿ ತರಬೇಕೆಂಬ ನಿಟ್ಟಿನಲ್ಲಿ ಮಠಾಧೀಶರು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ.‌ವೀರಶೈವ ಮಠಾಧೀಶರ ಈ ಒತ್ತಾಯಕ್ಕೆ ಕೇಂದ್ರ ಸರ್ಕಾರ ಯಾವ ಮಟ್ಟಕ್ಕೆ ಮಣಿಯುತ್ತೆ. ಓಬಿಸಿ ಮೀಸಲಾತಿ ಕುರಿತಂತೆ ಕೇಂದ್ರ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ.ಈ ಹೋರಾಟ ಮತ್ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋದು ಕಾದುನೋಡಬೇಕು.

Follow Us:
Download App:
  • android
  • ios