ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ: ಅಶೋಕ್ ಖೇಣಿ
ಪಕ್ಷದ ವರಿಷ್ಠರು ಲೊಕಸಭಾ ಚುನಾವಣೆ ಸ್ಪರ್ಧೆಗೆ ಸೂಚನೆ ನೀಡಿದರೆ ನಾನು ಸ್ಪರ್ಧೆ ಮಾಡುವುದಕ್ಕೆ ಸಿದ್ಧ ಎಂದು ಮಾಜಿ ಶಾಸಕ, ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ತಿಳಿಸಿದರು.
ಬೀದರ್ (ಜೂ.15): ಪಕ್ಷದ ವರಿಷ್ಠರು ಲೊಕಸಭಾ ಚುನಾವಣೆ ಸ್ಪರ್ಧೆಗೆ ಸೂಚನೆ ನೀಡಿದರೆ ನಾನು ಸ್ಪರ್ಧೆ ಮಾಡುವುದಕ್ಕೆ ಸಿದ್ಧ ಎಂದು ಮಾಜಿ ಶಾಸಕ, ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ತಿಳಿಸಿದರು. ಬೀದರ್ ದಕ್ಷಿಣ ಕ್ಷೇತ್ರದ ಬಗದಲ್ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಚಿಂತನ-ಮಂಥನ ಸಭೆಯಲ್ಲಿ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿ ಮಾತನಾಡಿದ ಅವರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿದ ಮತದಾರರು, ಪಕ್ಷದ ಪರವಾಗಿ ಪ್ರಚಾರ ನಡೆಸಿದ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಗರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಮುಖಂಡರು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಸಾಧಿಸುವುದಕ್ಕೆ ಪೂರ್ವ ತಯಾರಿ ಮಾಡೋಣ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸರ್ವ ಧರ್ಮದವರಿಗೆ ಸಮಾನವಾಗಿ ನೋಡುವ ಪಕ್ಷ ಕಾಂಗ್ರೆಸ್ ಎಂದು ಖೇಣಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಸವರಾಜ ಜಾಬಶಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷರಾದ ಅಮೃತರಾವ್ ಚಿಮಕೋಡೆ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮೀನಾಕ್ಷಿ ಸಂಗ್ರಾಮ್ ಮಾತಾನಾಡಿದರು.
ಟೋಲ್ ದರ ಏರಿಕೆ ಅನ್ಯಾಯದ ಪರಮಾವಧಿ: ಎಚ್.ಡಿ.ಕುಮಾರಸ್ವಾಮಿ
ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಚಂದ್ರಶೇಖರ್ ಚನಶಟ್ಟಿ, ಕರೀಮಸಾಬ್ ಕಮಠಾಣ ಮುಖಂಡರಾದ ಬಾಬುರಾವ್ ತುಂಬಾ, ಪಂಡಿತ ಚಿದ್ರಿ, ತನ್ವೀರ ಆಹ್ಮದ್, ಶಾಮರಾವ್ ಬಂಬುಳಗಿ, ಅಮೃತರಾವ್ ಪಾಟೀಲ, ಸಚಿನ್ ಮಲ್ಕಾಪೂರ, ರಮೇಶ ಹೌದಖಾನಿ, ಗೋವರ್ಧನ ರಾಠೋಡ, ಉದಯ ಕುಮಾರ್ ಮಲಶೆಟ್ಟಿ, ಬಶಿರೊದ್ದಿನ್ ಸೌದಗಾರ, ಲೋಕೇಶ ಮಂಗಲಗಿ, ಶಾಮರಾವ್ ಬಂಬುಳಗಿ, ಖಮಾಮ, ಗೌತಮ, ಜಯಪ್ರಕಾಶ ಉಪಸ್ಥಿತರಿದ್ದರು.
ಬೀದರ್ನಲ್ಲಿ ಕೃಷ್ಣಮೃಗಗಳ ಸಂರಕ್ಷಿತ ಪ್ರದೇಶ: ಬೀದರ್ ಜಿಲ್ಲೆಯಲ್ಲಿ ಹೇರಳವಾಗಿರುವ ಕೃಷ್ಣಮೃಗಗಳ ಸುರಕ್ಷತೆಗಾಗಿ ಸಂರಕ್ಷಿತ ಪ್ರದೇಶವನ್ನು ಗುರುತಿಸಿ ಬೇಲಿ ಹಾಕಿ ಅಪರೂಪದ ಈ ಪ್ರಾಣಿಗಳನ್ನು ಸಂರಕ್ಷಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಘೋಷಿಸಿದರು. ಅವರು ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೃಷ್ಣಮೃಗಗಳ ಗಣತಿಯನ್ನು ಮಾಡುವದಲ್ಲದೆ ಅವುಗಳ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬರುವ ಎರಡು ವರ್ಷಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವದು ಎಂದರು.
1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ 1ರ ಅಡಿಯಲ್ಲಿ ಕೃಷ್ಣಮೃಗ ಬೇಟೆಯನ್ನು ನಿಷೇಧಿಸಲಾಗಿದ್ದು, ಇಂಥದ್ದೊಂದು ಅಪರೂಪದ ಜೀವಿ ಬೀದರ್ ಜಿಲ್ಲೆಯಲ್ಲಿ ಹೇರಳವಾಗಿ ಕಾಣಬಹುದಷ್ಟೇ ಅಲ್ಲದೇ, ಪ್ರವಾಸಿಗರ ಕಣ್ಮನ ಸೆಳೆದು ಪ್ರವಾಸೋದ್ಯಮ ಹೆಚ್ಚಳಕ್ಕೂ ಕಾರಣವಾಗಿದೆ. ಆದರೆ ಬೆಳೆಯುತ್ತಿರುವ ನಗರ ಪ್ರದೇಶ, ಹಿಡಿತದಲ್ಲಿರದ ಬೇಟೆಗಾರರ ಕಾಟದಿಂದ ಇವುಗಳ ಸಂತತಿ ದಿನೆ ದಿನೇ ಕ್ಷೀಣಿಸುತ್ತಿರುವ ಬೆನ್ನಲ್ಲಿಯೇ ಅರಣ್ಯ ಸಚಿವರ ಇಂಥದ್ದೊಂದು ನಿರ್ಧಾರ ಕೃಷ್ಣಮೃಗಗಳ ಸಂರಕ್ಷಣೆಗೆ ಹೆಚ್ಚಿನ ಮಹತ್ವ ಸಿಕ್ಕಂತಾಗಿದೆ.
ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ, ಇದು ರಾಜ್ಯದ ಬಡ ಜನರ ಹಸಿವಿನ ಪ್ರಶ್ನೆ: ಸಿ.ಟಿ.ರವಿಗೆ ದಿನೇಶ್ ತಿರುಗೇಟು
ನವಿಲು ಧಾಮ ನಿರ್ಮಾಣಕ್ಕೆ ಡಾ. ಬೆಲ್ದಾಳೆ ಆಗ್ರಹ: ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಕೃಷ್ಣಮೃಗಗಳ ಸಂರಕ್ಷಿತ ಪ್ರದೇಶ ಮಾಡಿದಂತೆ ಜಿಲ್ಲೆಯಲ್ಲಿ ಹೇರಳವಾಗಿರುವ ನವಿಲುಧಾಮ ಮಾಡುವಂತೆ ಕೋರಿದ್ದಕ್ಕೆ ಸಚಿವ ಖಂಡ್ರೆ ಮುಂದಿನ ದಿನಗಳಲ್ಲಿ ಈ ಕುರಿತಂತೆ ಗಮನಹರಿಸೋಣ ಎಂದರು. ರಾಜ್ಯಾದ್ಯಂತ ಅರಣ್ಯೀಕರಣ ಹೆಚ್ಚಳ ಮಾಡುವ ಹಿನ್ನೆಲೆಯಲ್ಲಿ 5ಕೋಟಿ ಸಸಿಗಳನ್ನು ನೆಟ್ಟು ಪೋಷಿಸುವ ಗುರಿ ಹೊಂದಿದ್ದು, ಬರುವ ಎರಡು ತಿಂಗಳಲ್ಲಿ ಬೀದರ್ ಜಿಲ್ಲೆಯಲ್ಲಿ 5ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುವದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.