Asianet Suvarna News Asianet Suvarna News

ಲೀಲಾವತಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ; ಸಮಯ, ಸ್ಥಳದ ಮಾಹಿತಿ ಇಲ್ಲಿದೆ

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ. ಇಂದು ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತಾ ಕಾರ್ಯ ನಡೆಯುತ್ತಿದೆ.

Actress Leelavathi death All preparation for Lilavathi last darshan Here is the time and place information rav
Author
First Published Dec 9, 2023, 7:41 AM IST

ಬೆಂಗಳೂರು (ಡಿ.9) ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ. ಇಂದು ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತಾ ಕಾರ್ಯ ನಡೆಯುತ್ತಿದೆ.

ಹಿಂದೂ ಸಂಪ್ರದಾಯದಂತೆ ನೇರವೇರಲಿರೋ ನಟಿ ಲೀಲಾವತಿ ಅಂತ್ಯಕ್ರಿಯೆ. ಪುತ್ರ ವಿನೋದ್ ರಾಜ್ಯ ಸೂಚನೆಯಂತೆ ಆಪ್ತರ ಸಮ್ಮುಖದಲ್ಲಿ ಬೆಳಗ್ಗೆಯೇ ಜೆಸಿಬಿ ಬಳಸಿ ಫಾರ್ಮ್ ಹೌಸ್ ನಲ್ಲಿ ಸಮಾಧಿ ತೆಗೆಯುವ ಕಾರ್ಯ ಆರಂಭವಾಗಿದೆ. ಅತ್ತ ಫಾರ್ಮ್ ಹೊರ ಭಾಗದಲ್ಲೂ ಗಣ್ಯರು, ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲು ಪೊಲೀಸರಿಂದಲೂ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಸಿದ್ಧತೆ ನಡೆಸಿದ್ದಾರೆ. ಬೆಳಗ್ಗೆಯಿಂದಲೇ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಆಗಮಿಸುತ್ತಿರುವ ಅಭಿಮಾನಿಗಳು.  

ಅಮ್ಮ ಹೇಳಿದ ತಾಳ್ಮೆ, ಸಮಾಧಾನ ಯಾರೂ ಹೇಳಲು ಸಾಧ್ಯವಿಲ್ಲ; ಪುತ್ರ ವಿನೋದ್ ರಾಜ್ ಕಣ್ಣೀರು

ಲೀಲಾವತಿ ಅಮ್ಮ ನಮಗೆಲ್ಲ ಅಮ್ಮನಂತಿದ್ರು: ಗ್ರಾಮಸ್ಥರು ಕಣ್ಣೀರು:

ಲೀಲಾವತಿ ಅಮ್ಮ ನಮ್ಮಗೆಲ್ಲ ಅಮ್ಮನಂತಿದ್ರು ಅವರು ನೆಲಮಂಗಲಕ್ಕೆ ಬಂದ ನಂತರ ಈ ಭಾಗದಲ್ಲಿ ಬಹಳ ಅಭಿವೃದ್ಧಿ ಆಗಿತ್ತು.  ಗ್ರಾಮಸ್ಥರ  ಯಾವುದೇ ಕೆಲಸಗಳಿದ್ರೂ ಸರ್ಕಾರದವರೊಂದಿಗೆ ಮಾತನಾಡಿ ಬಗೆಹರಿಸುತ್ತಿದ್ರು. ಸ್ವಂತ ಖರ್ಚಿನಿಂದ ಆಸ್ಪತ್ರೆ, ರಸ್ತೆಗಳನ್ನು ಮಾಡಿಸಿದ್ರು   ಅವರನ್ನು ಕಳೆದು ಕೊಂಡು ನಾವು ಅನಾಥರಾಗಿದ್ದೇವೆ ಎಂದು ಕಣ್ಣೀರಿಟ್ಟ ಸೋಲದೇವನ ಹಳ್ಳಿ ಗ್ರಾಮಸ್ಥರು

ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ:

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಹಿರಿಯ ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಅಂತಿಮ ದರ್ಶನಕ್ಕೆ ಇಲ್ಲೇ ಅವಕಾಶ ಮಾಡಿರುವ ಹಿನ್ನಲೆ ಸಾಕಷ್ಟು ಗಣ್ಯರು, ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಕಲಾಕ್ಷೇತ್ರ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಿರುವ ಪೊಲೀಸ್ ಸಿಬ್ಬಂದಿ. ಗಣ್ಯರಿಗಾಗಿ ಪ್ರತ್ಯೇಕ ವಿಐಪಿ ಗೇಟ್ ವ್ಯವಸ್ಥೆ ಮಾಡಲಾಗಿದೆ ಎಂಟ್ರಿ & ಎಕ್ಸಿಟ್ ಗೇಟ್ ಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ.

ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರ ಆವರಣಕ್ಕೆ ಬರಲಿರುವ ಲೀಲಾವತಿ ಪಾರ್ಥಿವ ಶರೀರ. ಮಧ್ಯಾಹ್ನ 2:30 ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ. 2:30 ರ ಬಳಿಕ ಸೋಲದೇವನಹಳ್ಳಿಗೆ ತೆರಳಲಿರುವ ಪಾರ್ಥಿವ, ಹಿಂದು ಸಂಪ್ರಾದಯದಂತೆ ಅಂತ್ಯಕ್ರಿಯೆ ನೆರವೇರಿಸಲಿರುವ ಕುಟುಂಬಸ್ಥರು.

ಲೀಲಾವತಿ ನಿಧನ ಹಿನ್ನೆಲೆ; ಬಿಎಲ್‌ಆರ್ ಮುಂದೂಡಿಕೆ:

ಹಿರಿಯ ನಟಿ ಲೀಲಾವತಿ ನಿಧನರಾಗಿರುವ ಹಿನ್ನೆಲೆ ಇಂದು ನಡೆಯಬೇಕಿದ್ದ ಅನ್ ಬಾಕ್ಸಿಂಗ್ ಬಿಎಲ್ ಆರ್ ಹಬ್ಬ ನಾಳೆಗೆ ಮುಂದೂಡಲಾಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಬೇಕಿದ್ದ 'ನಮ್ಮ ಜಾತ್ರೆ' ಕಾರ್ಯಕ್ರಮ. ಹಿರಿಯ ನಟಿ ಲೀಲಾವತಿ ಅವರ ಗೌರವಾರ್ಥವಾಗಿ ಕಾರ್ಯಕ್ರಮ ಮುಂದೂಡಿದ ಸಂಘಟಕರು.

ಬೆಳ್ತಂಗಡಿ ಬೆಡಗಿಗೆ ಡಾ.ರಾಜ್ ಅಂದ್ರೆ ಬೆಟ್ಟದಷ್ಟು ಪ್ರೀತಿ ಅಭಿಮಾನ!

ಮುದ್ದಿನ ನಾಯಿ ಕರಿಯ ರೋಧನೆ:

ಸೋಲದೇವನಹಳ್ಳಿ ಲೀಲಾವತಿ ನಿವಾಸದಲ್ಲಿ ಸ್ಮಶಾನ ಮೌನ ಆವರಿಸಿದೆ. ಲೀಲಾವತಿಯವರ ಅಚ್ಚು ಮೆಚ್ಚಿನ ಶ್ವಾನ ಕರಿಯನ ಮುಖದಲ್ಲೂ ವೇದನೆ. ಮನೆಯ ಒಳಭಾಗ ಲೀಲಾವತಿಯವರ ಪೋಟೋ ಮುಂದೆ ಕುಳಿತು ನಾಯಿಯ ರೋದನೆ. ಹಲವು ವರ್ಷಗಳಿಂದ ಲೀಲಾವತಿಯವರ ಅಚ್ಚುಮೆಚ್ಚಿನ ಶ್ವಾನವಾಗಿದ್ದ ಕರಿಯ.  ರಾತ್ರಿಯಿಂದ ಮನೆಯಲ್ಲಿ ಲೀಲಾವತಿಯವರು ಕಾಣದ ಹಿನ್ನೆಲೆ ಪೋಟೋ ಮುಂದೆ ಕುಳಿತು ರೋಧಿಸುತ್ತಿರುವುದು ಕಂಡುಬಂತು. 

Follow Us:
Download App:
  • android
  • ios