ಕುಟುಂಬ ಸಮೇತ ಮಲೆ ಮಹದೇಶ್ವರ ಸ್ವಾಮಿ ದರ್ಶನಕ್ಕೆ ಬಂದ ನಟ ರಾಘವೇಂದ್ರ ರಾಜ್ ಕುಮಾರ್
ನಮ್ಮ ತಂದೆ ರಾಜಕುಮಾರ್ ಅವರು ಒಂದು ಸಲ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆ ಮೇಲೆ ಇಲ್ಲಿಗೆ ನಾನು ಬಂದಿರಲಿಲ್ಲ. ಈಗ ಮೈಸೂರಿನಲ್ಲಿ ಮಗನ ಸಿನಿಮಾ ಚಿತ್ರೀಕರಣ ನಡೆತಿರೋದ್ರಿಂದ ಮಾದಪ್ಪನ ದರ್ಶನಕ್ಕೆ ಬಂದಿದ್ದೇನೆ. ಈ ಜಾಗ ತುಂಬಾ ಚೆನ್ನಾಗಿ ವರ್ಷಕ್ಕೊಮ್ಮೆ ಬರಬೇಕು ಅನಸ್ತಿದೆ ಇನ್ಮೇಲೆ ಬರ್ತಿನಿ ಎಂದ ರಾಘವೇಂದ್ರ ರಾಜಕುಮಾರ.
ಚಾಮರಾಜನಗರ (ಅ.2): ಕುಟುಂಬ ಸಮೇತ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದ ನಟ ರಾಘವೇಂದ್ರ ರಾಜ್ ಕುಮಾರ್. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟ. ಇಂದು ಕುಟುಂಬ ಸಮೇತರಾಗಿ ಮಾದಪ್ಪನ ಸನ್ನಿಧಿಗೆ ಬಂದರು. ಕಿರಿಯ ಪುತ್ರ ಯುವ ರಾಜಕುಮಾರ್, ಪತ್ನಿ ಮಂಗಳಾ ಅವರೊಂದಿಗೆ ಮಾದಪ್ಪನ ದರ್ಶನ ಪಡೆದು ರಾಘವೇಂದ್ರ ರಾಜಕುಮಾರ, ಬಳಿಕ ದಾಸೋಹ ಭವನದಲ್ಲಿ ಪ್ರಸಾದ ಸೇವಿಸಿದರು.
ಈ ವೇಳೆ ಮಾತನಾಡಿದ ನಟ ರಾಘವೇಂದ್ರ ರಾಜಕುಮಾರ್, ನಮ್ಮ ತಂದೆ ರಾಜಕುಮಾರ್ ಅವರು ಒಂದು ಸಲ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆ ಮೇಲೆ ಇಲ್ಲಿಗೆ ನಾನು ಬಂದಿರಲಿಲ್ಲ. ಪುತ್ರ ಯುವ ರಾಜಕುಮಾರ್ ನಟನೆಯ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೀತಿದೆ.ಅದಕ್ಕಾಗಿ ಮಾದಪ್ಪನ ದರ್ಶನ ಪಡೆಯಲು ಬಂದಿದ್ದೇವೆ.ಈ ಜಾಗ ತುಂಬಾ ಚೆನ್ನಾಗಿದೆ.ಮಲೆ ಮಹದೇಶ್ವರ ತಾಣ ಸ್ವರ್ಗದಂತೆ ಭಾಸವಾಗುತ್ತಿದೆ. ವರ್ಷಕ್ಕೆ ಒಂದು ಸಲವಾದರೂ ಇಲ್ಲಿಗೆ ಬರಬೇಕು ಅಂತ ಅನ್ನಿಸಿದೆ,
ಇನ್ಮೇಲೆ ಮಾದಪ್ಪನ ದರ್ಶನ ಪಡೆಯಲು ಬರ್ತಿನಿ ಎಂದರು.
ವರನಟ ರಾಜ್‌ಕುಮಾರ್ ಬಳಿಕ ಕಾವೇರಿ ಹೋರಾಟಕ್ಕಿಳಿದ ದೊಡ್ಡಮನೆ ಕುಡಿ: ಪ್ರಾಣಾನೇ ಮುಡಿಪಾಗಿಡೋದಾಗಿ ಪ್ರಮಾಣ