ಬೆಂಗಳೂರು(ಜು.27): ಕರ್ನಾಟಕ ಒಟ್ಟು ಕೊರೋನಾ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಈಗ ತಮಿಳುನಾಡನ್ನು ಹಿಂದಿಕ್ಕಿದೆ. ಈ ಮೂಲಕ ಸಕ್ರಿಯ ಸೋಂಕಿತರಲ್ಲಿ ಕರ್ನಾಟಕವು 2ನೇ ಸ್ಥಾನಕ್ಕೇರಿದೆ.

ತಮಿಳುನಾಡು ಜು.24ರವರೆಗೂ ಅತಿ ಹೆಚ್ಚು ಸಕ್ರಿಯ ಸೋಂಕಿತರಿರುವ ದೇಶದ ಎರಡನೇ ರಾಜ್ಯವಾಗಿತ್ತು. ಅಂದು ತಮಿಳುನಾಡಿನಲ್ಲಿ 53,042 ಸಕ್ರಿಯ ಸೋಂಕಿತರಿದ್ದರು. 52,791 ಸಕ್ರಿಯ ಸೋಂಕಿತರನ್ನು ಹೊಂದಿದ್ದ ಕರ್ನಾಟಕ ಮೂರನೇ ಸ್ಥಾನದಲ್ಲಿತ್ತು. ಆದರೆ, ಜು.25ರಂದು ದೃಢಪಟ್ಟ5,072 ಹೊಸ ಕೋವಿಡ್‌ ಪ್ರಕರಣಗಳ ಸೇರ್ಪಡೆಯೊಂದಿಗೆ ಹಾಗೂ 2,403 ಮಂದಿ ಗುಣಮುಖರಾಗುವ ಮೂಲಕ ರಾಜ್ಯದ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 55,388ಕ್ಕೆ ಏರಿಕೆಯಾಗಿತ್ತು. ಭಾನುವಾರ ಇದರ ಸಂಖ್ಯೆ ಇನ್ನೂ ಹೆಚ್ಚಾಗಿ ಸಕ್ರಿಯರ ಸಂಖ್ಯೆ ರಾಜ್ಯದಲ್ಲಿ ಈಗ 58,417ಕ್ಕೆ ತಲುಪಿದೆ.

ಕೊರೋನಾ ಸಂಕಷ್ಟದ ನಡುವೆಯೂ ತವರು ಮರೆಯದ ಸಿಎಂ!

ಅತ್ತ ತಮಿಳುನಾಡಿನಲ್ಲಿ ಜು.25ರಂದು 6988 ಹೊಸ ಪ್ರಕರಣಗಳು ಪತ್ತೆಯಾದರೂ, ಅದೇ ದಿನ 7758 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದರಿಂದ ಸಕ್ರಿಯ ಸೋಂಕಿತರ ಸಂಖ್ಯೆ 52,273ಕ್ಕೆ ಇಳಿಕೆಯಾಗಿದೆ. ಭಾನುವಾರ ಇದರ ಸಂಖ್ಯೆ ಕೊಂಚ ಹಿಗ್ಗಿ 53,703ಕ್ಕೆ ತಲುಪಿದೆ. ಇದರಿಂದ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ತಮಿಳುನಾಡನ್ನು ಹಿಂದಿಕ್ಕಿ ಕರ್ನಾಟಕ ಎರಡನೇ ಸ್ಥಾನಕ್ಕೆ ಏರಿದೆ.

ಇನ್ನು, ಮಹಾರಾಷ್ಟ್ರದಲ್ಲಿ 1.45 ಲಕ್ಷಕ್ಕೂ ಹೆಚ್ಚು (ಜು.25) ಸಕ್ರಿಯ ಸೋಂಕಿತರಿದ್ದು ಅತಿ ಹೆಚ್ಚು ಸಕ್ರಿಯರಿರುವ ದೇಶದ ಮೊದಲ ರಾಜ್ಯವಾಗಿದೆ.

ಜುಲೈ ತಿಂಗಳೇ ಕಂಟಕ:

ರಾಜ್ಯದಲ್ಲಿ ಜೂನ್‌ 30ರವರೆಗೆ ಒಟ್ಟು 15,242 ಕೊರೋನಾ ಪ್ರಕರಣಗಳು ಮಾತ್ರ ದೃಢಪಟ್ಟಿದ್ದವು. ಆದರೆ ಜು.1ರಿಂದ 25ರವರೆಗೆ ಸೋಂಕು ತೀವ್ರ ಏರುಗತಿಯಲ್ಲಿ ಸಾಗಿದ್ದು, 75,700 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಸಾಮಾನ್ಯವಾಗಿ ಈವರೆಗೆ ಗುಣಮುಖರಾದವರು ಸರಾಸರಿ 12 ದಿನ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಆದರೆ, ಇಪ್ಪತ್ತೈದೇ ದಿನದಲ್ಲಿ 75 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟಿದ್ದರಿಂದ ರಾಜ್ಯದಲ್ಲಿ ಗುಣಮುಖ ಪ್ರಮಾಣ ಇಳಿಕೆಯಾಗಿ ಸಕ್ರಿಯ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ತಜ್ಞರು.

ಕೊರೋನಾ ಕೊಲ್ಲುತ್ತಂತೆ ಸಿಯಾರಾಮ್‌ ಉಡುಪು!

ಟಾಪ್‌ 3 ರಾಜ್ಯಗಳು

1 ಮಹಾರಾಷ್ಟ್ರ 1.45 ಲಕ್ಷ

2 ಕರ್ನಾಟಕ 58,417

3 ತಮಿಳುನಾಡು 53,703