ಬೆಂಗಳೂರು[ಜ.08]: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್‌ ಬಂದ್‌ ನಗರಕ್ಕೂ ತಟ್ಟಲಿದೆ. ಆದರೆ ನಗರದಲ್ಲಿ ಎಂದಿನಂತೆ ಜನ ಜೀವನ ಇರಲಿದ್ದು, ಯಾರಾದರೂ ಬಲವಂತವಾಗಿ ಬಂದ್‌ ಮಾಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಎಚ್ಚರಿಕೆ ನೀಡಿದ್ದಾರೆ.

"

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಸಂಘಟನೆಗಳಿಂದಲೂ ರಾರ‍ಯಲಿಗೆ ಅವಕಾಶವಿಲ್ಲ. ಫ್ರೀಡಂಪಾರ್ಕ್ನಲ್ಲಿ ಸೇರಲು ಅವಕಾಶ ಕಲ್ಪಿಸಲಾಗಿದೆ. ಅದನ್ನು ಹೊರತುಪಡಿಸಿ ಬೇರೆ ಎಲ್ಲೂ ಅವಕಾಶವಿಲ್ಲ ಎಂದು ಹೇಳಿದರು.

ನಾಳೆ [ಬುಧವಾರ] ಭಾರತ್ ಬಂದ್ ಬಗ್ಗೆ ದಿಢೀರ್ ಪತ್ರಿಕಾ ಪ್ರಕಟಣೆ ಹೊರಡಿಸಿದ ಸಿಎಂ

ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ನಗರದಲ್ಲಿ 11 ಮಂದಿ ಡಿಸಿಪಿಗಳ ನೇತೃತ್ವದಲ್ಲಿ 23 ಎಸಿಪಿ, 111 ಇನ್‌ಸ್ಪೆಕ್ಟರ್‌, 316 ಪಿಎಸ್‌ಐ, ಎಎಸ್‌ಐ 471, 4,567 ಕಾನ್‌ಸ್ಟೇಬಲ್‌ಗಳು, 82 ಕೆಎಸ್‌ಆರ್‌ಪಿ, ಸಿಎಆರ್‌ ತುಕಡಿ, ಎರಡು ಅಗ್ನಿ ಶಾಮಕ ವಾಹನಗಳು, ಒಂದು ಕ್ಯೂಆರ್‌ಟಿ ಪಡೆ, ಎರಡು ವಾಟರ್‌ ಜೆಟ್‌, ನಾಲ್ಕು ಆರ್‌ಐವಿ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು ನಿಲ್ದಾಣಗಳು ಸೇರಿ ಎಲ್ಲೆಡೆ ಭದ್ರತಾ ಸಿಬ್ಬಂದಿ ಇರಲಿದ್ದಾರೆ ಎಂದು ತಿಳಿಸಿದರು.

ಭಾರತ್ ಬಂದ್: ಸ್ಕೂಲ್, ಕಾಲೇಜಿಗೆ ರಜೆ ಇಲ್ಲ, ಬಸ್ ಓಡಾಟ ನಿಲ್ಲೋದಿಲ್ಲ..!