2020ರ ಮೊದಲ ಭಾರತ್ ಬಂದ್ ನಡೆಯುತ್ತಿದೆ. ನಾಳೆ ಅಂದ್ರೆ ಜನವರಿ 08 [ಬುಧವಾರ] 10ಕ್ಕೂ ಹೆಚ್ಚು ಟ್ರೇಡ್ ಯೂನಿಯನ್ ಗಳು ಕರೆ ನೀಡಿವೆ. ಆದ್ರೆ, ಕರ್ನಾಟಕದಲ್ಲಿ ಭಾರತ್ ಬಂದ್ ಗೆ ಭಾರೀ ಬೆಂಬಲ ಸಿಕ್ಕಿಲ್ಲ. ರಾಜ್ಯದಲ್ಲಿ ಭಾರತ್ ಬಂದ್ ನಡೆಯುತ್ತೋ.? ಇಲ್ವೋ.? ಅನುಮಾನ ವ್ಯಕ್ತವಾಗ್ತಿದೆ. ಇದರ ಮಧ್ಯೆ ಸಿಎಂ ಬಿಎಸ್ ಯಡಿಯೂರಪ್ಪ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಹಾಗಾದ್ರೆ ಅದರಲ್ಲಿ ಏನೆಲ್ಲ ಹೇಳಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, [ಜ.7]: ನಾಳೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ರಾಜ್ಯದ ಎಲ್ಲಾ ನಗರಗಳು, ಅದರಲ್ಲೂ ಬೆಂಗಳೂರಿನಲ್ಲಿ ಜನಜೀವನ ಎಂದಿನಂತೇ ಸಾಮಾನ್ಯವಾಗಿರುತ್ತದೆ ಮತ್ತು ಅವರ ದಿನನಿತ್ಯದ ಕಾರ್ಯಗಳಿಗೆ ಯಾವುದೇ ತಡೆ ಇರುವುದಿಲ್ಲ.
ಜ.8 ಭಾರತ್ ಬಂದ್: ಏನಿದೆ-ಏನಿಲ್ಲ? ಶಾಲೆಗಳಿಗೆ ರಜೆ ಇರುತ್ತಾ?
ಶಾಲಾ-ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಮತ್ತು ಸಾರಿಗೆ ಕೂಡ ಸಾಮಾನ್ಯವಾಗಿರುತ್ತದೆ. ಯಾವುದೇ ಸಮಾಜ ವಿರೋಧಿ ಶಕ್ತಿಗಳು ಬಂದ್ ನಲ್ಲಿ ಭಾಗವಹಿಸಲು ಒತ್ತಾಯ ಮಾಡಿದರೆ ಅಥವಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಪ್ರಯತ್ನಿಸಿದರೆ ಪೊಲೀಸ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ.
ಬಂದ್ ಗಳು ಜನವಿರೋಧಿಯೆಂದು ಹಿಂದೆ ಸವೋಚ್ಛ ನ್ಯಾಯಾಲಯ ಹೇಳಿದೆ. ಈ ವಿಷಯ ಬಂದ್ ಗೆ ಕರೆ ಕೊಟ್ಟವರ ಗಮನದಲ್ಲಿ ಇರಬೇಕು.
ಜ.08 ರಂದು ಭಾರತ್ ಬಂದ್: ಕರ್ನಾಟಕದಲ್ಲಿ ಏನಿರುತ್ತೆ..? ಏನಿರಲ್ಲ..?
ಜನರು ಯವುದೇ ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡಿಕೊಂಡು ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎನ್ನುವುದು ನನ್ನ ಕಳಕಳಿಯ ಮನವಿ” ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಎಂ ಅವರ ಈ ಪತ್ರಿಕಾ ಪ್ರಕಟಣೆಯನ್ನು ನೋಡಿದ್ರೆ, ಯಾವುದೇ ಬಂದ್ ಗೆ ರಾಜ್ಯ ಪೊಲೀಸ್ ಅವಕಾಶ ನೀಡಿಲ್ಲ. ಎಂದಿನಂತೆ ದೈನಂದಿನ ಚಟುವಟಿಕೆಗಳು ಸಾಮಾನ್ಯವಾಗಿರುವುದು ಎಲ್ಲಾ ಸಾಧ್ಯತೆಗಳಿವೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ಭಯಪಡುವ ಅವಶ್ಯತೆ ಇಲ್ಲ. ಎಲ್ಲೋ ಒಂದು ಜಿಲ್ಲೆಯಲ್ಲಿ ಭಾರೀ ಪ್ರಮಾಣ ಪ್ರತಿಭಟನೆ ನಡೆಯಬಹುದು ಹೊರೆತು, ಉಳಿದೆಲ್ಲ ಸಾಮಾನ್ಯವಾಗಿರುತ್ತದೆ. ಎಂದಿನಂತೆ ತಮ್ಮ ಕಾರ್ಯಚಟುವಟಿಕೆಗಳಿಗೆ ಹೋಗಬಹುದು.
![ನಾಳೆ [ಬುಧವಾರ] ಭಾರತ್ ಬಂದ್ ಬಗ್ಗೆ ದಿಢೀರ್ ಪತ್ರಿಕಾ ಪ್ರಕಟಣೆ ಹೊರಡಿಸಿದ ಸಿಎಂ ನಾಳೆ [ಬುಧವಾರ] ಭಾರತ್ ಬಂದ್ ಬಗ್ಗೆ ದಿಢೀರ್ ಪತ್ರಿಕಾ ಪ್ರಕಟಣೆ ಹೊರಡಿಸಿದ ಸಿಎಂ](https://static.asianetnews.com/images/w-1280,h-720,imgid-01dy083vpqxr8ffbhmydecwwfx,imgname-588465-jpg.jpg)