ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆಂದು ಸ್ಥಳೀಯರು ಪ್ರಾರ್ಥನಮಂದಿರಕ್ಕೆ ನುಗ್ಗಿ ಗಲಾಟೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿ ನಡೆದಿದೆ.

ಉತ್ತರ ಕನ್ನಡ (ಸೆ.3): ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆಂದು ಸ್ಥಳೀಯರು ಪ್ರಾರ್ಥನಮಂದಿರಕ್ಕೆ ನುಗ್ಗಿ ಗಲಾಟೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಚಿತ್ತಾಕುಲದ ಶ್ಯಾಮ್ ನಾಯ್ಕ್ ಎಂಬವರಿಂದ ಆಯೋಜನೆಗೊಂಡಿದ್ದ ಪ್ರಾರ್ಥನೆ. ಸಾಮೂಹಿಕವಾಗಿ ಯೇಸುವಿನ ಪ್ರಾರ್ಥನೆ ಮಾಡುತ್ತಿದ್ದರು. ಈ ಪ್ರಾರ್ಥನೆಯಲ್ಲಿದ್ದವರು ಬಹುತೇಕರು ಹಿಂದೂಗಳನ್ನು ಸೇರಿಸಿಕೊಂಡು ಪ್ರಾರ್ಥನೆ ಮಾಡುತ್ತಿದ್ದ ಫಾಸ್ಟರ್. ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಹಿಂದೂಗಳು ಅಮಲಿನ ವಸ್ತು ನಶೆಯಲ್ಲಿ ತೇಲಾಡುವ ಭಂಗಿಯಲ್ಲಿ ಕುಳಿತಿದ್ದರು. 

ಮತಾಂತರ ಮಾಡುವವರ ಕೈಗೆ ಕರ್ನಾಟಕ ಜಾತಿಗಣತಿ ವರದಿ ಲಭ್ಯ: ಪ್ರಶಾಂತ ಸಂಬರಗಿ ಆರೋಪ

ಇತ್ತ ಸಭಾಂಗಣದ ಕೊಠಡಿಗಳಲ್ಲಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಮಾಹಿತಿ ನೀಡುತ್ತಿದ್ದ ಫಾಸ್ಟರ್ಗಳು. ಜನರನ್ನು ಮತಾಂತರ ಮಾಡಲು ಯತ್ನಿಸುತ್ತಿದ್ದಾರೆಂದು ಸ್ಥಳೀಯರಿಗೆ ಮಾಹಿತಿ. ಕೂಡಲೇ ಸ್ಥಳಕ್ಕೆ ಹೋಗಿದ್ದ ಹಿಂದುಗಳು. ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಬಹುತೇಕರು ಹಿಂದೂಗಳೇ ಆಗಿದ್ದರಿಂದ ಮತಾಂತರ ಸ್ಥಳೀಯರು ಮತಾಂತರ ಆರೋಪ ಮಾಡಿ ಗಲಾಟೆ ಮಾಡಿದ್ದಾರೆ.

ಸ್ಥಳದಲ್ಲಿ ಕೆಲಹೊತ್ತು ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ತಾಕುಲ ಗ್ರಾಮೀಣ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

ಯಾ ಅಲ್ಹಾ... ಮಹಿಳೆಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸು... ಮೆಕ್ಕಾದಲ್ಲಿ ಬಿಕ್ಕಿಬಿಕ್ಕಿ ಅತ್ತ ರಾಖಿ ಸಾವಂತ್​!