ಆರೋಗ್ಯ ಇಲಾಖೆಯು ತೀವ್ರ ಶ್ರವಣದೋಷವುಳ್ಳ ಮಕ್ಕಳಿಗೆ 'ಆಲಿಸು ಕಂದ' ಕಾರ್ಯಕ್ರಮದಡಿ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನೀಡಲು ಮುಂದಾಗಿದೆ. ಈ ಯೋಜನೆಯಡಿ 200 ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಗುರಿ ಹೊಂದಲಾಗಿದ್ದು, ಅಕ್ಟೋಬರ್ 22ರಂದು ಸಚಿವ ಯು.ಟಿ. ಖಾದರ್ ಚಾಲನೆ ನೀಡಲಿದ್ದಾರೆ.

ಬೆಂಗಳೂರು (ಅ.22): ಆರೋಗ್ಯ ಇಲಾಖೆಯು ತೀವ್ರ ಶ್ರವಣದೋಷವುಳ್ಳ ಮಕ್ಕಳಿಗೆ ಹೊಸ ಬದುಕು ನೀಡುವ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ ‘ಆಲಿಸು ಕಂದ’ ಕಾರ್ಯಕ್ರಮದ ಅಡಿ 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದೆ.

ಶ್ರವಣದೋಷ ಮುಕ್ತ ಕರ್ನಾಟಕ ಅಭಿಯಾನದಡಿ ಮಕ್ಕಳಿಗೆ ಶ್ರವಣದೋಷ ಇದ್ದರೆ ಅವರ ಸಮಸ್ಯೆ ಬಗೆಹರಿಸಲು ‘ಆಲಿಸು ಕಂದ’ ಕಾರ್ಯಕ್ರಮ ರೂಪಿಸಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬಳಿ ₹5400 ಕೋಟಿ ಕೇಳಿದೆ, ಈ ಸಲ ನೋಡೋಣ ಡಿಕೆ ಅಂದ್ರು.. ಏಷ್ಯಾನೆಟ್ ವಿಶೇಷ ಸಂದರ್ಶನದಲ್ಲಿ ಸಿಎಂ ಹೇಳಿದ್ದೇನು?

‘ಆಲಿಸು ಕಂದ’ ಯೋಜನೆಗೆ ಇಂದು ಸಚಿವ ಖಾದರ್ ಚಾಲನೆ

ತೊಟ್ಟಿಲಿನಿಂದ ತರಗತಿವರೆಗೆ ಶ್ರವಣ ಆರೈಕೆ ಪ್ರತಿಯೊಂದು ಮಗುವಿನ ಹಕ್ಕು. ಹೀಗಾಗಿ ಯೋಜನೆಯಡಿ ಶ್ರವಣದೋಷ ಪರಿಹಾರ ಕಲ್ಪಿಸುವ ಆಲಿಸು ಕಂದ ಕಾರ್ಯಕ್ರಮದ ಈವರೆಗಿನ ಸಾಧನೆ ಹಾಗೂ ಮುಂದೆ 200 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆ ಮಾಡುವ ಕುರಿತು ಅ.22 ರಂದು ಬೆಳಗ್ಗೆ 10.30 ಗಂಟೆವರೆಗೆ ಆರೋಗ್ಯ ಸಚಿವ ಯು.ಟಿ ಖಾದರ್‌ ಚಾಲನೆ ನೀಡಲಿದ್ದಾರೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಆರೋಗ್ಯ ಸೌಧದ ಬಿ.ಸಿ.ರಾಯ್ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಫಲಾನುಭವಿ ಮಕ್ಕಳು ಭಾಗವಹಿಸಲಿದ್ದಾರೆ.