Asianet Suvarna News Asianet Suvarna News

ಜನಸ್ಪಂದನ ಕಾರ್ಯಕ್ರಮ ವೇಳೆ ಜಿಲ್ಲಾಧಿಕಾರಿ ಮುಂದೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ!

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರ ಎದುರಿನಲ್ಲೇ ಮಹಿಳೆಯೊಬ್ಬರು ಶೌಚಾಲಯ ವಿವಾದಕ್ಕೆ ಸಂಬಂಧಿಸಿ ವಿಷ ಸೇವಿಸಲು ಯತ್ನಿಸಿದ ಘಟನೆ ನಡೆದಿದೆ.

A woman tried to attempt suicide by consuming poison in front of DC at vijayanagar rav
Author
First Published Jul 1, 2024, 7:20 AM IST

ಹಗರಿಬೊಮ್ಮನಹಳ್ಳಿ (ಜು.1): ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರ ಎದುರಿನಲ್ಲೇ ಮಹಿಳೆಯೊಬ್ಬರು ಶೌಚಾಲಯ ವಿವಾದಕ್ಕೆ ಸಂಬಂಧಿಸಿ ವಿಷ ಸೇವಿಸಲು ಯತ್ನಿಸಿದ ಘಟನೆ ನಡೆದಿದೆ.

ತಾಲೂಕಿನ ಬಸರಕೋಡು ಗ್ರಾಮ(Basarkod)ದ ಸೋಮಶೇಖರಯ್ಯ ಕುಟುಂಬದವರು ಗ್ರಾಪಂ ಶೌಚಾಲಯ ನಿರ್ಮಾಣಕ್ಕೆ ಪರವಾನಗಿ ನೀಡುತ್ತಿಲ್ಲ. ವಿವಾದಿತ ಸ್ಥಳದಲ್ಲಿ ಮನೆ ಕಟ್ಟಲು ಸಂಬಂಧಿಗಳಿಗೆ ಪರವಾನಗಿ ನೀಡಿ ಗ್ರಾಪಂನವರು ನಮ್ಮನ್ನು ತೀವ್ರ ನೋಯಿಸಿದ್ದಾರೆ ಎಂದು ಕುಟುಂಬದ ಯಜಮಾನಿ ಗೌರಮ್ಮ ದೂರಿದ್ದಾರೆ.

ಭಾರತ ವಿಶ್ವಕಪ್‌ ಗೆದ್ದ ಖುಷಿಯಲ್ಲಿ ವೇಗದ ಬೈಕ್ ರೈ ಡ್‌ಗೆ ಯುವಕ ಬಲಿ!

ಈ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಬನ್ನಿಗೋಳ ಪಿಡಿಒ ನಮ್ಮ ಎದುರಾಳಿಗಳಿಗೆ ಮನೆಕಟ್ಟಲು ಪರವಾನಗಿ ನೀಡಿದ್ದಾರೆ. ನಾವು ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವೊಂದಕ್ಕೆ ಬೆಂಬಲಿಸಿದಕ್ಕಾಗಿ ನಮಗೆ ಈ ಶಿಕ್ಷೆಯಾಗುತ್ತಿದೆ. ಈ ವಿಷಯ ಬಗೆಹರಿಸಿ ಎಂದು ಶಾಸಕರ ಬಳಿ ಹೋದರೂ ನಮಗೆ ಪರಿಹಾರ ಸಿಕ್ಕಿಲ್ಲ ಎಂದು ಡಿಸಿ ಎದುರು ಅಳಲು ತೋಡಿಕೊಂಡರು.

ಗೌರಮ್ಮ ಡಿಸಿ ಮುಂದೆ ವಿಷ ಸೇವನೆಗೆ ಮುಂದಾದಾಗ ಸಿಪಿಐ ವಿಕಾಸ್ ಪಿ.ಲಮಾಣಿ, ಪಿಎಸ್‌ಐ ಬಸವರಾಜ ಅಡವಿಬಾವಿ ಬಾಟಲಿ ಕಸಿದರು. ಕೂಡಲೇ ಇದನ್ನು ಬಗೆಹರಿಸಿ ಎಂದು ತಾಪಂ ಇಒಗೆ ಡಿಸಿ ತಿಳಿಸಿದರು.

ಮೈಸೂರು: ಕ್ರೆಡಿಟ್ ಕಾರ್ಡ್ ಸಾಲಕ್ಕೆ ಹೆದರಿ ಯುವಕ ಆತ್ಮಹತ್ಯೆ

ಡಬಲ್ ಟ್ಯಾಕ್ಸ್:
ಪಟ್ಟಣದ ಪುರಸಭೆಯಲ್ಲಿ ಆಸ್ತಿಗಳಿಗೆ ಡಬಲ್ ಟ್ಯಾಕ್ಸ್ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ, ಪುರಸಭೆ ಸದಸ್ಯರು ಸರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಆಸ್ತಿಗಳಿಗೆ ರಾಜ್ಯದ ಯಾವುದೇ ತಾಲೂಕಿನಲ್ಲೂ ಇಲ್ಲದಷ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ. ಈ ಕುರಿತಂತೆ ಖುದ್ದು ಜಿಲ್ಲಾಧಿಕಾರಿ ಕಚೇರಿಗೆ ಪುರಸಭೆ ಸದಸ್ಯರು ನಿಯೋಗ ತೆರಳಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ, ಮರಿರಾಮಣ್ಣ, ಮಾಜಿ ಸದಸ್ಯ ಡಿಶ್ ಮಂಜುನಾಥ ಬೇಸರ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಈ ಕುರಿತಂತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದರು. ಇದೇ ವೇಳೆ ಪುರಸಭೆ ವ್ಯಾಪ್ತಿಯ 7 ಸ್ಮಶಾನಗಳಿಗೆ ವಿಶೇಷ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Latest Videos
Follow Us:
Download App:
  • android
  • ios