Viral video: ಪತಿಯಿಂದ ಜೀವ ಬೆದರಿಕೆ; ವಿಡಿಯೋ ಮಾಡಿ ಸಿಎಂಗೆ ಟ್ಯಾಗ್!
‘ನನ್ನ ಪತಿ ನನ್ನ ಮತ್ತು ಇಬ್ಬರು ಮಕ್ಕಳನ್ನು ಮನೆಯಿಂದ ಹೊರಹಾಕಿದ್ದು, ಯಾವುದೇ ಸಮಯದಲ್ಲಿ ಆತ ನಮ್ಮನ್ನು ಕೊಲ್ಲಬಹುದು. ನಮಗೆ ಜೀವ ಬೆದರಿಕೆ ಇದೆ’ ಎಂದು ಮಹಿಳೆಯೊಬ್ಬರು ಮಕ್ಕಳೊಂದಿಗೆ ವಿಡಿಯೋ ಮಾಡಿ ಪೊಲೀಸರ ರಕ್ಷಣೆ ಕೋರಿದ್ದಾರೆ.
ಬೆಂಗಳೂರು (ಆ.21) : ‘ನನ್ನ ಪತಿ ನನ್ನ ಮತ್ತು ಇಬ್ಬರು ಮಕ್ಕಳನ್ನು ಮನೆಯಿಂದ ಹೊರಹಾಕಿದ್ದು, ಯಾವುದೇ ಸಮಯದಲ್ಲಿ ಆತ ನಮ್ಮನ್ನು ಕೊಲ್ಲಬಹುದು. ನಮಗೆ ಜೀವ ಬೆದರಿಕೆ ಇದೆ’ ಎಂದು ಮಹಿಳೆಯೊಬ್ಬರು ಮಕ್ಕಳೊಂದಿಗೆ ವಿಡಿಯೋ ಮಾಡಿ ಪೊಲೀಸರ ರಕ್ಷಣೆ ಕೋರಿದ್ದಾರೆ.
ಕೊತ್ತನೂರು ನಿವಾಸಿ ಪೂಜಾ ಗಾಂಧಿ ಎಂಬುವವರು ಈ ವಿಡಿಯೋ ಮಾಡಿದ್ದಾರೆ. ಪತಿ ವೈಭವ್ ಜೈನ್, ಗೀತಿಕಾ ಬಿಂದನಂ, ರೋಹನ್ ಸಾಲ್ಯಾನ್ ಅವರಿಂದ ನನಗೆ ಮತ್ತು ಮಕ್ಕಳಿಗೆ ಜೀವ ಬೆದರಿಕೆ ಇದೆ ಎಂದು ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ಪೂಜಾ ಗಾಂಧಿ ಸಹೋದರ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಹೋದರಿಯ ಸೆಲ್ಫಿ ವಿಡಿಯೋ ಹಂಚಿಕೊಂಡು, ಮುಖ್ಯಮಂತ್ರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾರೆ. ಸಹೋದರಿಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.
ಕಲಬುರಗಿ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಜೀವ ಬೆದರಿಕೆ
ಹೈದರಾಬಾದ್ ಮೂಲದ ಪೂಜಾಗಾಂಧಿ ಹಾಗೂ ವೈಭವ್ ಆರು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಕೊತ್ತನೂರಿನಲ್ಲಿ ವಾಸವಾಗಿದ್ದಾರೆ. ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ. ವೈಭವ್ ಪತ್ನಿ ವಿರುದ್ಧ ಸುಳ್ಳು ಆರೋಪ ಮಾಡಿ, ಪತ್ನಿ ಹಾಗೂ ಮಕ್ಕಳನ್ನು ಮನೆಯಿಂದ ಹೊರ ಹಾಕಿ ಜೀವ ಬೆದರಿಕೆ ಒಡ್ಡಿದ್ದಾನೆ. ಆತನ ಜತೆಗೆ ಸಂಬಂಧಿಕರಿಂದಲೂ ತಮಗೆ ಜೀವ ಬೆದರಿಕೆಯಿದೆ ಎಂದು ಪೂಜಾ ಗಾಂಧಿ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕೊತ್ತನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಫ್ಲೈಓವರಲ್ಲಿ ಇಬ್ಬರನ್ನು ಅಡ್ಡಗಟ್ಟಿ 3.7 ಕೇಜಿ ಚಿನ್ನಾಭರಣ ದರೋಡೆ!