ಸ್ಕೂಟರ್‌ನಲ್ಲೇ ತಾಯಿಯೊಂದಿಗೆ ಲೋಕ ಸಂಚಾರ ಕೈಗೊಂಡಿರುವ ಆಧುನಿಕ ಶ್ರವಣಕುಮಾರ
ಹಳೇ ಸ್ಕೂಟರ್‌ನಲ್ಲಿ ತನ್ನ 70 ವರ್ಷದ ತಾಯಿಯೊಂದಿಗೆ ಬಿಸಿಲು, ಗಾಳಿ, ಚಳಿ, ಮಳೆ ಎನ್ನದೇ ಜಿಲ್ಲೆ, ರಾಜ್ಯ, ದೇಶ, ವಿದೇಶಗಳನ್ನು ಸುತ್ತಿ ತಾಯಿಯ ಆಸೆ ಈಡೇರಿಸಲು ಹೊರಟಿರುವ ಈ ಕಲಿಯುಗದ ಆಧುನಿಕ ಶ್ರವಣಕುಮಾರ ಡಿ.ಕೃಷ್ಣಕುಮಾರ್ ಯಶೋಗಾಥೆ ಅದ್ಭುತವಾಗಿದೆ.

ಶೃಂಗೇರಿ (ನ.7) : ಹಳೇ ಸ್ಕೂಟರ್‌ನಲ್ಲಿ ತನ್ನ 70 ವರ್ಷದ ತಾಯಿಯೊಂದಿಗೆ ಬಿಸಿಲು, ಗಾಳಿ, ಚಳಿ, ಮಳೆ ಎನ್ನದೇ ಜಿಲ್ಲೆ, ರಾಜ್ಯ, ದೇಶ, ವಿದೇಶಗಳನ್ನು ಸುತ್ತಿ ತಾಯಿಯ ಆಸೆ ಈಡೇರಿಸಲು ಹೊರಟಿರುವ ಈ ಕಲಿಯುಗದ ಆಧುನಿಕ ಶ್ರವಣಕುಮಾರ ಡಿ.ಕೃಷ್ಣಕುಮಾರ್ ಯಶೋಗಾಥೆ ಅದ್ಭುತವಾಗಿದೆ.
ಮೈಸೂರು ಜಿಲ್ಲೆ ಭೋಗಾಧಿ ಮೂಲದ ಡಿ.ಕೃಷ್ಣಕುಮಾರ ಕಂಪ್ಯೂಟರ್ ಡಿಪ್ಲೋಮದಲ್ಲಿ ಪದವಿ ಗಳಿಸಿ,14 ವರ್ಷ ನೌಕರಿ ಮಾಡಿ, ಕೆಲಸ ತ್ಯಜಿಸಿ ತಾಯಿ ಚೂಡರತ್ನರ ಆಸೆಯಂತೆ ಲೋಕಸಂಚಾರ ಮಾಡಲು ಮಾತೃ ಸೇವಾ ಸಂಕಲ್ಪ ಯಾತ್ರೆ ಕೈಗೊಂಡು ಕೇವಲ ಭಾರತವಲ್ಲದೇ ನೇಪಾಳ, ಭೂತಾನ್, ಮಯನ್ಮಾರ್ ದೇಶಗಳಲ್ಲಿ ಹಳೇ ಸ್ಕೂಟರ್ ನಲ್ಲಿಯೇ ಸುಮಾರು 78,994 ಕಿ.ಮಿ ಸಂಚರಿಸಿ ನ. 4 ರಂದು ಶೃಂಗೇರಿ ಶಾರದಾ ಪೀಠಕ್ಕೂ ಬಂದು ಶಾರದಾಂಬೆ ದರ್ಶನ ಪಡೆದು ನಂತರ ಶೃಂಗೇರಿಯಿಂದ ಪುನಃ ಲೋಕಸಂಚಾರ ಮುಂದುವರೆಸಿದರು.
ಈತ ಆಧುನಿಕ ಶ್ರವಣಕುಮಾರ... ಅಪ್ಪ ಅಮ್ಮನ ಹೆಗಲಲ್ಲಿ ಹೊತ್ತು ಸಾಗಿದ ಯುವಕ
ಜನವರಿ 16, 2018 ರಿಂದ ಲೋಕ ಸಂಚಾರ ಹೊರಟು ಸುಮಾರು ಒಂದು ವರ್ಷಗಳ ಕಾಲ ಸಂಚರಿಸಿ ಮಗ, ನಂತರ ಕೋವಿಡ್ ಸಂದರ್ಭ ದಲ್ಲಿ 2 ವರ್ಷ ಮನೆಯಲ್ಲಿಯೇ ಉಳಿದುಕೊಂಡು ಮತ್ತೆ ಪುನಃ ಆಗಸ್ಟ್ 15, 2022 ರಲ್ಲಿ ಮಾತೃಸೇವಾ ಸಂಕಲ್ಪ ಯಾತ್ರೆಯ ಲೋಕಸಂಚಾರ ಪುನಃ ಆರಂಬಿಸಿದ್ದಾರೆ. ಸಾವಿರಾರು ಕಿ ಮಿ. ಸಂಚರಿಸಿ, ಲಕ್ಷಾಂತರ ಜನರನ್ನು ಸಂದರ್ಶಿಸಿ, ಸಾವಿರಾರು ದೇವಾಲಯಗಳಲ್ಲಿ ದರ್ಶನ ಪಡೆದು ಸಂಚರಿಸುತ್ತಿದ್ದಾರೆ.
ತಾಜ್‌ಮಹಲ್ ನೋಡಲು ಸ್ಟ್ರೆಚರ್‌ನಲ್ಲಿ ಅಮ್ಮನ ಕರೆತಂದ ಮಗ
ಹಳೆ ಸ್ಕೂಟರ್‌ನಲ್ಲಿ ಇವರಿಬ್ಬರೂ ಊರುಗಳಿಗೆ ಆಗಮಿಸುತ್ತಿದ್ದಂತೆ ಜನರು ಇವರಿಗೆ ವಿಶೇಷ ಸ್ವಾಗತ ನೀಡುತ್ತಿದ್ದಾರೆ ಹೊರಡುವಾಗ ಆತ್ಮೀಯತೆಯಿಂದ ಬೀಳ್ಕೋಡುತ್ತಿದ್ದಾರೆ. ಕೆಲವೆಡೆ ಸನ್ಮಾನ ಮಾಡುತ್ತಿದ್ದಾರೆ ಶೃಂಗೇರಿ ಭೇಟಿ ನೀಡಿದ ಸಂದರ್ಭದಲ್ಲಿ ಕನ್ನಡ ಪ್ರಭದೊಂದಿಗೆ ಮಾತನಾಡಿದ ಇವರು ತಂದೆ ತಾಯಿ ಪ್ರತ್ಯಕ್ಷ ದೇವರು. ಅವರ ಸೇವೆ ಮಾಡಬೇಕು. ಅವರು ಜೀವಂತವಿರುವಾಗಲೇ ಸೇವೆ ಮಾಡಬೇಕು. ನಂತರ ಫೋಟೊಗಳಿಗೆ ಹಾರ ಹಾಕಿ, ಅವರಿಷ್ಠದ ವಸ್ತುಗಳನ್ನು ತಿಂದರೆ ಸಾಲದು. ಇತ್ತಿಚ್ಚಿಗೆ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ವಿಷಯ. ಯುವ ಜನತೆ ತಂದೆ ತಾಯಿಗಳ ಸೇವೆ ಮಾಡಬೇಕು ಎನ್ನುತ್ತಾರೆ.