ಯುವಕನೋರ್ವ ಅಧುನಿಕ ಶ್ರವಣಕುಮಾರನಂತೆ ಅಪ್ಪ ಅಮ್ಮನನ್ನು ಹೆಗಲ ಮೇಲೆ ಹೊತ್ತುಕೊಂಡು ತೀರ್ಥಯಾತ್ರೆ ಹೊರಟಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಅಪ್ಪ ಅಮ್ಮನ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಆದರೆ ಇಂದಿನ ಈ ಆಧುನಿಕ ಯುಗದಲ್ಲಿ ಬಹುತೇಕ ಮಹಾನಗರಿಗಳಲ್ಲಿ ಅಪ್ಪ ಅಮ್ಮನನ್ನು ಮನೆಯಲ್ಲಿಯೂ ಇರಲು ಜಾಗ ನೀಡದೇ ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಇದರ ಮಧ್ಯೆ ಯುವಕನೋರ್ವ ಅಧುನಿಕ ಶ್ರವಣಕುಮಾರನಂತೆ ಅಪ್ಪ ಅಮ್ಮನನ್ನು ಹೆಗಲ ಮೇಲೆ ಹೊತ್ತುಕೊಂಡು ತೀರ್ಥಯಾತ್ರೆ ಹೊರಟಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಯುವಕನೋರ್ವ ತಕ್ಕಡಿಯಂತಹ ಸಾಧನದಲ್ಲಿ ಒಂದು ಕಡೆ ಅಪ್ಪನನ್ನು ಮತ್ತೊಂದು ಕಡೆ ಅಮ್ಮನನ್ನು ಕೂರಿಸಿಕೊಂಡು ಕನ್ವರ್‌ಯಾತ್ರೆಗೆ ಹೊರಟಿದ್ದಾನೆ. ಪ್ರತಿವರ್ಷ ಕನ್ವರ್ ಯಾತ್ರೆ ಜುಲೈ 14 ರಂದು ಆರಂಭವಾಗಿ ಜುಲೈ 26ರವರೆಗೆ ನಡೆಯುತ್ತದೆ. ಕನ್ವರ್ ಯಾತ್ರೆಯು ಕನ್ವಾರಿಯಾಸ್ ಅಥವಾ 'ಭೋಲೆ' ಎಂದು ಕರೆಯಲ್ಪಡುವ ಶಿವನ ಭಕ್ತರ ವಾರ್ಷಿಕ ತೀರ್ಥಯಾತ್ರೆಯಾಗಿದೆ. 

Scroll to load tweet…

ಆಧುನಿಕ ಶ್ರವಣಕುಮಾರನ ಕರುಣಾಜನಕ ಕಥೆ, ಅಂದು ಹೊಗಳಿದ್ದ ರಾಜಕಾರಣಿಗಳು ಕ್ಯಾರೆ ಎನ್ನುತ್ತಿಲ್ಲ

ಈ ಸಮಯದಲ್ಲಿ ಲಕ್ಷಕ್ಕೂ ಅಧಿಕ ಶಿವ ಭಕ್ತರು ಹಿಂದೂ ಪವಿತ್ರ ಕ್ಷೇತ್ರಗಳಾದ ಹರಿದ್ವಾರ, ಗೌಮುಖ, ಗಂಗೋತ್ರಿ, ಉತ್ತರಾಖಂಡ್‌ ಹಾಗೂ ಬಿಹಾರದ ಸುಲ್ತಾನ್‌ಗಂಜ್‌ಗೆ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಜೊತೆಗೆ ಅಲ್ಲಿಂದ ಗಂಗಾನದಿಯ ಪವಿತ್ರ ನೀರನ್ನು ತರುತ್ತಾರೆ. ಪ್ರತಿವರ್ಷ ಲಕ್ಷಾಂತರ ಭಕ್ತರು ತಲೆಮೇಲೆ ಭಾರವಾದ ಲಗೇಜುಗಳನ್ನು ಹೊತ್ತುಕೊಂಡು ಬರಿಗಾಲಲ್ಲಿ ಸಾಗುವ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಈ ಬಾರಿ ಯುವಕನೋರ್ವ ತನ್ನ ತಂದೆ ತಾಯಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಯಾತ್ರೆ ಹೊರಟಿದ್ದಾನೆ. ಇದರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಅಶೋಕ್ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಯುವಕನ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. 

ಕಲಬುರಗಿಯಲ್ಲೊಬ್ಬ ಆಧುನಿಕ ಶ್ರವಣ ಕುಮಾರ: ತಂದೆ-ತಾಯಿ ನೆನಪಿಗಾಗಿ ಗುಡಿ ಕಟ್ಟಿಸಿದ ಮಗ

ಇತ್ತೀಚಿನ ದಿನಗಳಲ್ಲಿ ವಯಸ್ಸಾದ ತಂದೆ ತಾಯಿಯರನ್ನು ಮಕ್ಕಳು ತಿರಸ್ಕಾರದಿಂದ ನೋಡುತ್ತಾರೆ. ಮನೆಯಿಂದ ಹೊರ ಹಾಕುತ್ತಾರೆ ಅಥವಾ ಮಕ್ಕಳೊಂದಿಗೆ ಇರಲು ಬಿಡುವುದಿಲ್ಲ. ಆದರೆ, ಇಂದು ಇದಕ್ಕೆ ವ್ಯತಿರಿಕ್ತ ಘಟನೆ ಕಾಣ ಸಿಕ್ಕಿದೆ. ಕನ್ವರ್ ಯಾತ್ರೆಗೆ ಬಂದ ಲಕ್ಷಾಂತರ ಶಿವಭಕ್ತರ ಮಧ್ಯೆ ಶ್ರವಣ ಕುಮಾರನಿದ್ದಾನೆ. ಅವನ ವಯಸ್ಸಾದ ಹೆತ್ತವರನ್ನು ಪಲ್ಲಕ್ಕಿಯಲ್ಲಿ ಕರೆತಂದಿದ್ದಾನೆ. ಆ ವ್ಯಕ್ತಿಗೆ ನನ್ನ ಗೌರವಗಳು ಎಂದು ಬರೆದು ಐಪಿಎಸ್ ಅಧಿಕಾರಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.