ಮೈಸೂರಿನಲ್ಲಿ ಸ್ನೇಹಿತನಿಗೆ ಸಾಲ ಕೊಡಿಸಿದ ವ್ಯಕ್ತಿಯೊಬ್ಬ ಬ್ಯಾಂಕಿನಿಂದ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ನೇಹಿತನಿಗೆ ಕಾರು ಸಾಲ ಮತ್ತು ವೈಯಕ್ತಿಕ ಸಾಲ ಕೊಡಿಸಿದ್ದ ವ್ಯಕ್ತಿ, ಸ್ನೇಹಿತ ಕಂತುಗಳನ್ನು ಪಾವತಿಸದ ಕಾರಣ ಸಾಲ ತೀರಿಸಲು ಒತ್ತಡಕ್ಕೆ ಒಳಗಾಗಿದ್ದರು.

ಮೈಸೂರು (ಫೆ.2): ಖಾಸಗಿ ಬ್ಯಾಂಕ್‌ನಲ್ಲಿ ಸ್ನೇಹಿತನಿಗೆ ಸಾಲ ಕೊಡಿಸಿದ ತಪ್ಪಿಗೆ ವ್ಯಕ್ತಿಯೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಮೈಸೂರು ತಾಲೂಕಿನ ದಂಡಿಕೆರೆ ಗ್ರಾಮದ ಬಳಿ ನಡೆದಿದೆ.

ಸಿದ್ದೇಶ್(40), ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಸಿದ್ದೇಶ್ ಸ್ನೇಹಿತನಾದ ಮಣಿಕಂಠ ಎಂಬಾತನಿಗೆ ಖಾಸಗಿ ಬ್ಯಾಂಕ್‌ನಲ್ಲಿ ಕಾರು ಲೋನ್ ಕೊಡಿಸಿದ್ದ. ಜೊತೆಗೆ ತನ್ನ ಹೆಸರಿನಲ್ಲಿ 2 ಲಕ್ಷ ರೂ. ನಗದು ಸಾಲ ಕೊಡಿಸಿದ್ದ ಮೃತ ಸಿದ್ದೇಶ್. ಆದರೆ ಸ್ನೇಹಿತನ ಹೆಸರಲ್ಲಿ ಸಾಲ ಪಡೆದ ಮಣಿಕಂಠ ಕೇವಲ 2 ಕಂತು ಕಟ್ಟಿ ಸುಮ್ಮನಾಗಿದ್ದ. ಹಲವು ಸಲ ಬ್ಯಾಂಕ್ ನೋಟಿಸ್ ಕೊಟ್ಟರು ಕಂತು ಕಟ್ಟದೇ ನಿರ್ಲಕ್ಷ್ಯವಹಿಸಿದ್ದಾನೆ.

ಇದನ್ನೂ ಓದಿ: ಬೆಡ್‌ರೂಂಗೆ ಹೋದವಳು ಬಾಗಿಲು ತೆಗೆಯಲೇ ಇಲ್ಲ; ಮದುವೆ ದಿನವೇ ನವವಧು ಜೀವನ ಅಂತ್ಯ! ಆಗಿದ್ದೇನು?

ಸಾಲ ತೀರಿಸದ ಕಾರಣ ಖಾಸಗಿ ಬ್ಯಾಂಕ್ ಸಿದ್ದೇಶ್‌ಗೆ ಕರೆ ಮಾಡಿ ನಿಮ್ಮ ಸ್ನೇಹಿತ ಕಂತುಗಳು ಪಾವತಿಸುತ್ತಿಲ್ಲ. ಸ್ನೇಹಿತನಿಗೆ ಕೊಡಿಸಿರುವ ಸಾಲ ನೀವೇ ತೀರಿಸಬೇಕು ಎಂದು ಕರೆ ಮಾಡಿ ತಿಳಿಸಿದ್ದಾರೆ. ಸ್ನೇಹಿತನನ್ನ ನಂಬಿ ಸಾಲ ಕೊಡಿಸಿದ ತಪ್ಪಿಗೆ ಸಾಲಗಾರನಾಗಿ ಮೃತ ಸಿದ್ದೇಶ್ ಇಕ್ಕಟ್ಟಿಗೆ ಸಿಲುಕಿದ್ದಾನೆ. ಸ್ನೇಹಿತನ ಮೋಸಕ್ಕೆ ತೀವ್ರ ಮನನೊಂದ ಸಿದ್ದೇಶ್, ನಂಜನಗೂಡು ತಾಲೂಕಿನ ಮುಲ್ಲೂಪುರ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದುದಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಆತ್ಮಹತ್ಯೆ ಘಟನೆ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.