Asianet Suvarna News Asianet Suvarna News

ಸೇಬು ತುಂಬಿದ ಲಾರಿ ಪಲ್ಟಿ; ರಕ್ಷಣೆ ಮಾಡುವ ಬದಲು ಹಣ್ಣು ಹೊತ್ತೊಯ್ಯಲು ಮುಗಿಬಿದ್ದ ಜನರು!

ಚಾಲಕನ ನಿಯಂತ್ರಣ ತಪ್ಪಿ ಸೇಬು ಹಣ್ಣು ತುಂಬಿದ್ದ ಲಾರಿ ಪಲ್ಟಿಯಾಗಿದೆ ಈ ವೇಳೆ ಜನರು ಹಣ್ಣಿಗಾಗಿ ಮುಗಿಬಿದ್ದ ಘಟನೆ ವಿಜಯನಗರದ ಬಣವಿಕಲ್ಲು ಗ್ರಾಮದ ಬಳಿ ನಡೆದಿದೆ. ಶ್ರೀನಗರದಿಂದ ಕೇರಳದ ಕೊಚ್ಚಿನ್ ಗೆ ಹೊರಟ್ಟಿದ್ದ ಲಾರಿ. ಈ ವೇಳೆ ಅತಿ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಸೇರಿ ಲಾರಿಯಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ

A lorry loaded with apples overturned near Banavikallu village in Vijayanagar today rav
Author
First Published Nov 9, 2023, 9:00 PM IST

ವಿಜಯನಗರ (ನ.9): ಚಾಲಕನ ನಿಯಂತ್ರಣ ತಪ್ಪಿ ಸೇಬು ಹಣ್ಣು ತುಂಬಿದ್ದ ಲಾರಿ ಪಲ್ಟಿಯಾಗಿದೆ ಈ ವೇಳೆ ಜನರು ಹಣ್ಣಿಗಾಗಿ ಮುಗಿಬಿದ್ದ ಘಟನೆ ವಿಜಯನಗರದ ಬಣವಿಕಲ್ಲು ಗ್ರಾಮದ ಬಳಿ ನಡೆದಿದೆ.

ಶ್ರೀನಗರದಿಂದ ಕೇರಳದ ಕೊಚ್ಚಿನ್ ಗೆ ಹೊರಟ್ಟಿದ್ದ ಲಾರಿ. ಈ ವೇಳೆ ಅತಿ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಸೇರಿ ಲಾರಿಯಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಕೋಲಾರ: ಅಪ್ರಾಪ್ತ ಬಾಲಕನ ಬರ್ಬರ ಹತ್ಯೆ; ಹುಡುಗಿಗೆ ಮೆಸೇಜ್ ಕಳಿಸಿದ್ದೇ ಕೊಲೆಗೆ ಕಾರಣವಾಯ್ತಾ? ಐಜಿಪಿ ರವಿಕಾಂತೇಗೌಡ ಹೇಳೋದೇನು?

ಲಾರಿ ಬಿಳುತ್ತಿದ್ದಂತೆ ಸೇಬಿಗೆ ಮುಗಿಬಿದ್ದ ಜನರು:

ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಸೇಬುಹಣ್ಣುಗಳನ್ನು ತುಂಬಿದ ಲಾರಿ ಮುಗುಚಿಬಿಳುತ್ತಿದ್ದಂತೆ ರಕ್ಷಣೆ ಬದಲು ಹಣ್ಣುಗಳನ್ನು ಹೊತ್ತೊಯ್ಯಲು ಮುಗಿಬಿದ್ದ ಜನರು. ನೆಲಬೊಮ್ಮನಹಳ್ಳಿ, ಉಲ್ಲಾನಹಳ್ಳಿ, ಚಿಕ್ಕೋಬನಹಳ್ಳಿ,ಸೂಲಸಹಳ್ಳಿ, ಬಣವಿಕಲ್ಲು, ಎಂ.ಬಿ.ಅಯ್ಯನಹಳ್ಳಿಯ ಗ್ರಾಮಸ್ಥರು ಸೇಬುಹಣ್ಣಿಗಾಗಿ ನೂಕುನುಗ್ಗಲು. ಒಬ್ಬರ ಮೇಲೆ ಒಬ್ಬರು ಬಿದ್ದು ಹಣ್ಣಿಗಾಗಿ ಕಾದಾಟ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕಾನಹೊಸಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದರು.

Follow Us:
Download App:
  • android
  • ios