Asianet Suvarna News Asianet Suvarna News

ಕೋಲಾರ: ಅಪ್ರಾಪ್ತ ಬಾಲಕನ ಬರ್ಬರ ಹತ್ಯೆ; ಹುಡುಗಿಗೆ ಮೆಸೇಜ್ ಕಳಿಸಿದ್ದೇ ಕೊಲೆಗೆ ಕಾರಣವಾಯ್ತಾ? ಐಜಿಪಿ ರವಿಕಾಂತೇಗೌಡ ಹೇಳೋದೇನು?

ನಗರದಲ್ಲಿ ಶುಕ್ರವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ 17 ವರ್ಷದ ಬಾಲಕ ಕಾರ್ತಿಕ್ ಸಿಂಗ್ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹರೀಶರನ್ನು ಅಮಾನತ್ತು ಮಾಡಲಾಗಿದೆ.

Kolar karthik singh murder case issue IGP Ravikantegowda press conference at kolar tooday rav
Author
First Published Nov 9, 2023, 8:18 PM IST

ಕೋಲಾರ (ನ.9): ನಗರದಲ್ಲಿ ಶುಕ್ರವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ 17 ವರ್ಷದ ಬಾಲಕ ಕಾರ್ತಿಕ್ ಸಿಂಗ್ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹರೀಶರನ್ನು ಅಮಾನತ್ತು ಮಾಡಲಾಗಿದೆ.

ಇಂದು ಕೋಲಾರದಲ್ಲಿ ಕೊಲೆ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಐಜಿಪಿ ರವಿಕಾಂತೇಗೌಡ, ಈ ಪ್ರಕರಣದಲ್ಲಿನ ಆರೋಪಿಗಳು ಈ ಹಿಂದೆ ಅದೇ ಬಾಲಕನ ಮೇಲೆ ಹಲ್ಲೆ ಮಾಡಿರುತ್ತಾರೆ‌. ಅಲ್ಲದೇ ಆರೋಪಿ ಬೇರೆ ಪ್ರಕರಣದಲ್ಲಿಯೂ ಭಾಗಿಯಾಗಿದ್ದಾನೆ. ನಂತರ ಬಾಲಾಪರಾಧಿ ಕೇಂದ್ರದಿಂದ ಹೊರಗೆ ಬರುತ್ತಾನೆ. ಹೊರಪ್ರಕರಣ ರೂವಾರಿ ರೌಡಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುತ್ತಾನೆ. ಈತನ ಚಟುವಟಿಕೆಗಳನ್ನ ನಿಗಾವಹಿಸುವಲ್ಲಿ ಪೊಲೀಸರು ವಿಫಲ ಆಗಿದ್ದಾರೆ. 

ಕೋಲಾರ: ಶಾಲೆಯ ಆವರಣದಲ್ಲಿ ಯುವಕನ ಬರ್ಬರ ಹತ್ಯೆ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ವಿಡಿಯೋ ವೈರಲ್

ಅಪ್ರಾಪ್ತರ ಮನಸ್ಥಿತಿಯನ್ನು ನೋಡಿ ವಯಸ್ಕರೆಂದು ತಿಳಿಯಬಹುದು:

ಹಿಂದಿನ ದ್ವೇಷದ ಹಿನ್ನಲೆಯಲ್ಲಿ ಕಳೆದ ವಾರ ಪಾರ್ಕ್‌ನಿಂದ ಬಾಲಕನ ಅಪಹರಣ ಮಾಡಿ, ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿ ಬಾಲಕನನ್ನ ಬರ್ಬರವಾಗಿ ಕೊಲೆ ಮಾಡಿರುತ್ತಾರೆ‌. ಈ ಪ್ರಕರಣದಲ್ಲಿ ಎಂಟು ಜನ ಆರೋಪಿಗಳಲ್ಲಿ ಏಳು ಜನರನ್ನ ಬಂಧಿಸಿದ್ದೇವೆ. ಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನ ಮಾಡಲಾಗಿತ್ತು. ಹೊರ ರಾಜ್ಯದಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದು ಗುಂಡನ್ನ ಹಾರಿಸಲಾಗಿದೆ. ಇವರಿಗೆ ಸಹಾಯ ಮಾಡಿದವರನ್ನ ಸಹ ತನಿಖೆ ನಡೆಸಿ ಬಂಧಿಸುತ್ತೇವೆ. ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪೀನ ಮೇಲೆ, ಕಾನೂನು ತಜ್ಞರ ಮಾಹಿತಿ ಪಡೆಯಲಾಗಿದೆ. ಅಪ್ರಾಪ್ತನ ಮನಸ್ಥಿತಿಯನ್ನ ಆಧರಿಸಿ ವಯಸ್ಕರೆಂದು ತಿಳಿಯಬಹುದು. ವಯಸ್ಕರೂ ಎಂದು ತಿಳಿದು ನಿಯಮಿತ ನ್ಯಾಯಾಲಯದಲ್ಲಿ ವಿಚಾರಣೆ ಮಾಡಬಹುದು. ಹೀಗಾಗಿ ಕಠಿಣ ಶಿಕ್ಷೆಯ ಕ್ರಮವನ್ನ ತೆಗೆದುಕೊಳ್ಳಲಾಗುವುದು ಎಂದರು.

15 ದಿನಗಳಲ್ಲಿ ಮೂರು ಕೊಲೆ:

ಘೋರ ಪ್ರಕರಣದಲ್ಲಿ ಭಾಗಿಯಾಗುವ ಅಪ್ರಾಪ್ತ ಬಾಲಕರನ್ನು ಈ ರೀತಿಯಾಗಿ ನೋಡುವುದು ದುಖಃದ ವಿಚಾರ. ಹಿಂಸಾತ್ಮಕ ಮನೋಭಾವ ಎನ್ನುವುದು ಊಹಿಸಲು ಸಾಧ್ಯವಿಲ್ಲ. ನಾವು ಡಾನ್ ಆಗಬೇಕು ಅನ್ನೋ ಮನೋಭಾವದಿಂದ ಕೊಲೆ ಮಾಡಿದವನಿಗಿದೆ. ಕಳೆದ 15 ದಿನಗಳಲ್ಲಿ ಕೋಲಾರದಲ್ಲಿ ಮೂರು ಕೊಲೆ ಪ್ರಕರಣ ನಡೆದಿದೆ. ಮಾಲೂರು, ಶ್ರೀನಿವಾಸಪುರ ಕೋಲಾರ ನಗರದಲ್ಲಿ ಕೊಲೆ ನಡೆದಿದೆ. ಇದರಿಂದ ಕೋಲಾರದಲ್ಲಿ ಆತಂಕ ವಾತವರಣ ಸೃಷ್ಟಿಯಾಗಿದೆ. ಕೊಲೆ ಪ್ರಕರಣಗಳಲ್ಲಿ ಬಾಗಿಯಾಗಿದ್ದ 90% ರಷ್ಟು ಆರೋಪಿಗಳನ್ನು ಬಂದಿಸಿದ್ದೇವೆ. 37 ಕೊಲೆ ಪ್ರಕರಣಗಳಲ್ಲಿ 36 ಕೊಲೆ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ನಾಲ್ಕು ಪ್ರೀ ಪ್ಲಾನ್ ಮರ್ಡರ್ ಸೇರಿವೆ. ರೌಡಿ ಚಟುವಟಿಕೆಗಳಲ್ಲಿ ತೀವ್ರ ವಿಚಾರಣೆ ಮಾಡಲಾಗಿದೆ.  ಅಪ್ರಾಪ್ತ ಬಾಲಕರ ವಿರುದ್ದ ಪೋಲೀಸ್ ಕಾಯ್ದೆ 391 ಪ್ರಕರಣಗಳನ್ನು ಮಾಡಿದ್ದಾರೆ. ಈಗಾಗಲೇ ಜಿಲ್ಲೆಯ 312 ಸ್ಥಳಗಳಲ್ಲಿ ಮಾದಕ ವಸ್ತುಗಳನ್ನು ಸ್ಥಳಗಳನ್ನು ಪರಿಶೀಲನೆ ಮಾಡಿದ್ದಾರೆ.

ಈ ಸರ್ಕಾರ ಬಂದ ಮೇಲೆನೇ ರಾಜ್ಯಕ್ಕೆ ಬರ ಬಂದಿರೋದು: ಸಂಸದ ಮುನಿಸ್ವಾಮಿ ಕಿಡಿ

ರೌಡಿ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ಕ್ರಮ:

ಶಾಲೆಗಳಲ್ಲಿ ವಿದ್ಯಾರ್ಥಿಗಳ ಬಳಿ ಮೊಬೈಲ್, ಗುಟ್ಕಾ ಪತ್ತೆಯಾದ ಮಕ್ಕಳ ಪೋಷಕರನ್ನು ಕರೆಸಿ ವಿಷಯ ತಿಳಿಸಲಾಗಿದೆ. ರೌಡಿ ಚುಟುವಟಿಗಳ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಅಪ್ರಾಪ್ತ ಬಾಲಕ ಕಾರ್ತಿಕ್ ಸಿಂಗ್ ನ ಅಪ್ರಾಪ್ತ ಬಾಲಕರೇ ಕೊಲೆ ಮಾಡಿದ್ದಾರೆ.ಈ ಪ್ರಕರಣದಲ್ಲಿ ಇಬ್ಬರು ಮಾತ್ರ ವಯಸ್ಕರು. ಮಕ್ಕಳಲ್ಲಿ ಇಂತಹ ಕ್ರೌರ್ಯ ಏಕೆ ಮನೆ ಮಾಡಿದೆ ಗೊತ್ತಿಲ್ಲ. ಇನ್ಮುಂದೆ ಶೈಕ್ಷಣಿಕವಾಗಿ ಕಾನೂನಿನ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತೇವೆ. ಈ ಪ್ರಕರಣದಲ್ಲಿ 8 ಆರೋಪಿಗಳ ಪೈಕಿ 7 ಮಂದಿಯನ್ನು ಬಂದಿಸಿದ್ದೇವೆ. ಹೊರ ರಾಜ್ಯದಲ್ಲಿ 3 ಆರೋಪಿಗಳು ಸುತ್ತಾಡಿದ್ದಾರೆ. ಅವರಿದ್ದ ಗೌಪ್ಯ ಸ್ಥಳದಿಂದ ಕರೆ ತರುವ ವೇಳೆ ,ಪೋಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಇಬ್ಬರ ಕಾಲಿಗೆ ಗುಂಡು ಹೊಡೆದು ಬಂದಿಸಲಾಗಿದೆ. ಇವರಿಗೆ ಯಾರು ದುಡ್ಡು ಕೊಟ್ಟು ಆಶ್ರಯ ನೀಡಿದ್ದು ತನಿಖೆ ನಡೆಸಿ ಅವರನ್ನೂ ಬಂಧಿಸುತ್ತೇವೆ. ಪೋಷಕರಾಗಿದ್ದರೂ ಸಹ ಅವರನ್ನೂ ಸಹ ಬಂದಿಸುತ್ತೇವೆ. ಹಣಕಾಸಿನ ನೆರವು ನೀಡು ಓಡಿಹೋಗಲು ಸಹಕಾರ ನೀಡಿದವರನ್ನೂ ಸಹ ಬಂದಿಸುತ್ತೇವೆ. ಮೃತ ಬಾಲಕ ಹುಡಗಿಗೆ ಮೆಸೇಜ್ ಹಾಗೂ ಸೇರಿದಂತೆ ಹಲವು ವೈಮನಸ್ಸು ಇತ್ತು.

ನ್ಯಾಯ ಒದಗಿಸುವಂತೆ ಪೋಷಕರು ಪಾದಯಾತ್ರೆ:

ಮಗನ ಸಾವಿಗೆ ನ್ಯಾಯ ಒದಗಿಸುವಂತೆ ಪಾದಯಾತ್ರೆ ಮೂಲಕ ಪೋಷಕರು ಪ್ರತಿಭಟನೆ ನಡೆಸಿದರು. JUSTICE FOR KARTHIK SINGH ಅನ್ನೋ ಘೋಷವಾಕ್ಯದಡಿ ನಡೆದ ಪ್ರತಿಭಟನೆ. ನಗರದ ಸಿಗ್ನಲ್ ಸರ್ಕಲ್ ನಿಂದ ನಗರ ಪೊಲೀಸ್ ಠಾಣೆವರೆಗೂ ಮಳೆಯಲ್ಲೇ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ ಪೋಷಕರು. ಅಹಿಂದ ಜನಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೃತ ಕಾರ್ತಿಕ್ ನ ತಾಯಿ, ತಂದೆ, ಸ್ನೇಹಿತರು, ಸಾರ್ವಜನಿಕರು ಸೇರಿದಂತೆ ನೂರಾರು ಜನರು ಭಾಗಿ. ಚಿಕ್ಕ ವಯಸ್ಸಲ್ಲೇ ಅತ್ಯಂತ ಕ್ರೂರ ಕೃತ್ಯವೆಸಗಿರುವ ಆರೋಪಿಗಳನ್ನು ಗಲ್ಲಿಗೇರಿಸಿ ಎಂದು ಆಗ್ರಹ.

Follow Us:
Download App:
  • android
  • ios