haveri: ಹಾವೇರಿ ಜಿಲ್ಲೆಯ ಕೆರಿಮತ್ತಿಹಳ್ಳಿ ಗ್ರಾಮ, ಕುಟುಂಬವೊಂದು ತಮ್ಮ ಮನೆಯ ಆಕಳ ಕರುವಿಗೆ 'ಗುರುಬಸವ' ಎಂದು ನಾಮಕರಣ ಮಾಡಿ ಸಂಭ್ರಮಿಸಿದೆ. ಹಸುವಿಗೆ ಸೀಮಂತ ಮಾಡಿದ ನಂತರ, ಇದೀಗ ಕರುವನ್ನು ತೊಟ್ಟಿಲಲ್ಲಿ ಹಾಕಿ, ಶಾಸ್ತ್ರೋಕ್ತವಾಗಿ ಹೆಸರಿಟ್ಟು, ಊರಿನವರೊಟ್ಟಿಗೆ ಈ ವಿಶಿಷ್ಟ ಕಾರ್ಯಕ್ರಮ ಆಚರಿಸಲಾಯಿತು.

ಹಾವೇರಿ (ಡಿ.2): ಮನೆಯ ಆಕಳೊಂದು ಕರುವಿಗೆ ಜನ್ಮ ನೀಡಿದ್ದು, ಅದನ್ನು ತೊಟ್ಟಿಲಲ್ಲಿ ಹಾಕಿ ತೂಗಿ, ನಾಮಕರಣ ಮಾಡಿ ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದ ಮಹಾದೇವಪ್ಪ ತಾವರಗೊಪ್ಪ ಅವರ ಮನೆಯಲ್ಲಿ ಆಕಳ ಕರುವಿಗೆ ಗುರುಬಸವ ಎಂದು ಹೆಸರಿಡಲಾಯಿತು. 

ಹೋರಿ ಕರುವಿನ ಅದ್ದೂರಿ ನಾಮಕರಣ:

ಹೋರಿ ಕರು ಜನಿಸಿದ 5 ದಿನಗಳ ನಂತರ ಅದ್ಧೂರಿಯಾಗಿ ನಾಮಕರಣ ಸಮಾರಂಭ ನೆರವೇರಿತು. ಇತ್ತೀಚೆಗಷ್ಟೇ ಹಸುವಿಗೆ ಅದ್ಧೂರಿ ಸೀಮಂತ ಕಾರ್ಯ ಮಾಡಿದ್ದರು. ಇದೀಗ ಹುಟ್ಟಿದ ಕರುವಿಗೆ ಸುಮಂಗಲೆಯರು ಶಾಸ್ತ್ರೋಕ್ತವಾಗಿ ಹೆಸರಿಟ್ಟು ಸಂಭ್ರಮಿಸಿದರು. ಈ ಸಂಭ್ರಮದಲ್ಲಿ ನೂರಾರು ಜನರು ಭಾಗಿಯಾಗಿದ್ದರು.

ಮನೆಯಲ್ಲಿ ಹಬ್ಬದ ವಾತಾವರಣ:

ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮನೆಯ ಮುಂದೆ ರಂಗೋಲಿ, ಬಾಳೆಕಂಬ ಹಾಕಿ, ಕರುವಿಗೆ ಹಣೆಯಲ್ಲಿ ತಿಲಕವಿಟ್ಟು, ಅಕ್ಷತೆ ಹಾಕಿ ಸಂಭ್ರಮಿಸಿದರು. ತೊಟ್ಟಿಲಿಗೆ ತರಹೇವಾರಿ ಹೂವು, ಬಣ್ಣಬಣ್ಣದ ಬಲೂನ್ ಅಲಂಕಾರ ಮಾಡಿ, ಕರುವಿಗೆ ಮಗುವಿನಂತೆ, ತಲೆಗವಸು, ಹೊಸ ಬಟ್ಟೆ ಹಾಕಿ ಶೃಂಗರಿಸಿ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದರು.

ಕೃಷಿ ಕುಟುಂಬ

ಕೃಷಿ ಹಿನ್ನೆಲೆಯ ತಾವರಗೊಪ್ಪ ಕುಟುಂಬ ಜಾನುವಾರು ಸಾಕಾಣಿಕೆ ಮಾಡಿಕೊಂಡು ಬರುತ್ತಿದೆ. ಇತ್ತೀಚೆಗಷ್ಟೇ ಹಸುವಿಗೆ ಅದ್ಧೂರಿ ಸೀಮಂತ ಕಾರ್ಯ ಮಾಡಿದ್ದರು. ಇದೀಗ ಹುಟ್ಟಿದ ಕರುವಿಗೆ ಸುಮಂಗಲೆಯರು ಶಾಸ್ತ್ರೋಕ್ತವಾಗಿ ಹೆಸರಿಟ್ಟು ಸಂಭ್ರಮಿಸಿದರು. ಈ ಸಂಭ್ರಮದಲ್ಲಿ ಕುಟುಂಬಸ್ಥರು, ನೆರೆಹೊರೆಯವರು, ಗ್ರಾಮಸ್ಥರು ಸೇರಿ ನೂರಾರು ಜನರು ಭಾಗಿಯಾಗಿದ್ದರು.