ಹಂಪಿ ಉತ್ಸವದಲ್ಲಿ ಗಮನ ಸೆಳೆದ ಶ್ವಾನ ಪ್ರದರ್ಶನ: ಒಂದಕ್ಕಿಂತ ಒಂದು ಭಿನ್ನವಾಗಿದ್ದ 19 ತಳಿಯ ಶ್ವಾನಗಳು!
ಹೆಸರಿಗೆ ಮಾತ್ರ ಅವು ಶ್ವಾನಗಳು. ಆದರೆ ಆ ಶ್ವಾನಗಳ ಸಾಹಸ, ಬುದ್ದಿವಂತಿಕೆ, ಮತ್ತು ಜಾಣ್ಮೆಯ ಪ್ರದರ್ಶನ ಒಮ್ಮೆ ನೋಡಿದ್ರೇ ಮಾತ್ರ ಪ್ರತಿಯೊಬ್ಬರು ಅಚ್ಚರಿ ಯಾಗೋದು ಗ್ಯಾರಂಟಿ. ಹೌದು , ಹಂಪಿ ಉತ್ಸವ ಕೊನೆಯ ದಿನ ನಡೆದ ಶ್ವಾನ ಪ್ರದರ್ಶನ ಜನರಿದಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿತು.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ವಿಜಯನಗರ
ವಿಜಯನಗರ (ಫೆ.04): ಹೆಸರಿಗೆ ಮಾತ್ರ ಅವು ಶ್ವಾನಗಳು. ಆದರೆ ಆ ಶ್ವಾನಗಳ ಸಾಹಸ, ಬುದ್ದಿವಂತಿಕೆ, ಮತ್ತು ಜಾಣ್ಮೆಯ ಪ್ರದರ್ಶನ ಒಮ್ಮೆ ನೋಡಿದ್ರೇ ಮಾತ್ರ ಪ್ರತಿಯೊಬ್ಬರು ಅಚ್ಚರಿ ಯಾಗೋದು ಗ್ಯಾರಂಟಿ. ಹೌದು , ಹಂಪಿ ಉತ್ಸವ ಕೊನೆಯ ದಿನ ನಡೆದ ಶ್ವಾನ ಪ್ರದರ್ಶನ ಜನರಿದಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿತು. ಇದೇ ಮೊದಲ ಬಾರಿ ಹಂಪಿ ಉತ್ಸವದ ಶ್ವಾನ ಪ್ರದರ್ಶನದಲ್ಲಿ ಪೊಲೀಸ್ ಶ್ವಾನಗಳು ಕೂಡ ಭಾಗವಹಿಸಿರೋದು ವಿಶೇಷವಾಗಿತ್ತು.
ಗಮನ ಸೆಳೆದ ಪೊಲೀಸ್ ಶ್ವಾನಗಳು: ಹುದುಗಿಸಿಟ್ಟ ಬಾಂಬ್ ಹುಡುಕಿದ ಲೂಸಿ, ಅಪರಾಧಿ ಪತ್ತೆ ಹಚ್ಚಿದ ಬ್ರೂನೋ, ಕದ್ದವಸ್ತು ಕಂಡುಹಿಡಿದ ಸಿಂಬಾ, ಹೀಗೆ ವಿಜಯನಗರ ಜಿಲ್ಲಾ ಪೊಲೀಸ್ ಶ್ವಾನದಳದ ಕರ್ತವ್ಯದ ಕರಾಮತ್ತು ಕಣ್ತುಂಬಿಕೊಂಡ ಜನರು ಶಿಳ್ಳೆ ಚಪ್ಪಾಳೆ ಹೊಡೆದರು. ಒಂದವರೆ ವರ್ಷದ ಬ್ರೂನೋ ಡಾಬರ್‌ಮನ್ ಜಾತಿ ಸೇರಿದ ನಾಯಿಯೂ ಕಳೆದ 19 ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದೆ.
ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು: ಸಚಿವ ಚಲುವರಾಯಸ್ವಾಮಿ
ಲಾಬ್ರಡಾರ್ ಜಾತಿ ಸೇರಿದ ಎರೆಡು ವರ್ಷದ ಲೂಸಿ ಬಾಂಬ್ ಪತ್ತೆ ಹಚ್ಚುವಲ್ಲಿ ನಿಷ್ಣಾಂತಳು ಅನ್ನೋದು ಪ್ರದರ್ಶನದಲ್ಲಿ ಸಾಭಿತು ಮಾಡಿತು. ಇನ್ನೂ ಇದೇ ಜಾತಿಗೆ ಸೇರಿದ ಸಿಂಬಾ ಒಂದವರೆ ವರ್ಷದವನಾಗಿದ್ದು, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ಕಾರ್ಯದಲ್ಲಿ ನೆರವಾಗುತ್ತಿದೆ. ತರಬೇತುದಾರ ಆಜ್ಞೆ ಅನುಸರಿಸಿ ನಡೆಯುವ ಈ ಶ್ವಾನಗಳು ನಿಂತಲ್ಲೇ ನಿಲ್ಲುವುದು, ಕೂರುವುದು, ಹೊರಳುವುದು, ಸಂಜ್ಞೆ ಆಧರಿಸಿ ಬೊಗಳುವುದು, ಗೌರವ ವಂದನೆ ಸಲ್ಲಿಸುವುದು ನೋಡಿದ ಮೆಚ್ಚುಗೆ ವ್ಯಕ್ತಪಡಿಸಿದರು
19 ಜಾತಿಯ 66ಕ್ಕೂ ಹೆಚ್ಚು ಶ್ವಾನಗಳು ಭಾಗಿ: ಹಂಪಿ ಉತ್ಸವದಲ್ಲಿ ಈ ಬಾರಿ 19 ವಿವಿಧ ಜಾತಿಯ ದೇಶಿ ಹಾಗೂ ವಿದೇಶಿ ತಳಿಗಳ 66ಕ್ಕೂ ಹೆಚ್ಚು ಶ್ವಾನಗಳು ತಮ್ಮ ಮಾಲೀಕರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅತಿ ಎತ್ತರ, ದೊಡ್ಡ ಹಾಗೂ ನೀಳ ಕಾಯದ ಗ್ರೇಟ್ ಡೆನ್, ಚಿಕ್ಕದಾದ ಸಿಟ್ಜ್ ಹಾಗೂ ಪಮೋರಿಯನ್, ಬೇಟೆಗೆ ಹೆಸರಾದ ಮುಧೋಳ, ಕುಟುಂಬಕ್ಕೆ ಪ್ರಿಯವಾದ ಗೋಲ್ಡನ್ ರಿಟ್ರೈವರ್, , ಮೊಲ ಹಾಗೂ ಚಿಕ್ಕಪುಟ್ಟ ಪ್ರಾಣಿಗಳ ಭೇಟೆಗೆ ಹೆಸರುವಾಸಿಯಾದ ಡ್ಯಾಶ್ ಹೌಂಡ್, ಸೈಬಿರಿಯನ್ ಹಸ್ಕಿ, ಯುದ್ದಕ್ಕೆ ಹೆಸರುವಾಸಿಯಾದ ಜರ್ಮನ್ ಶಫರ್ಡ್, ಮಾಲೀಕನಿಗೆ ಅತ್ಯಂತ ನಿಷ್ಠೆಯಿಂದಿರುವ ಡಾಬರ್ ಮನ್, ಭಾರತದಲ್ಲಿ ಜನಪ್ರಿಯ ಹೊಂದಿರುವ ಲ್ಯಾಬ್ರಡಾರ್, ವಿರಳ ಜಾತಿಯ ವಿದೇಶಿ ತಳಿಯ ಸೇಂಟ್ ಬರ್ನರ್ಡ್, ಪಾಕಿಸ್ತಾನದ ಬುಲ್ಲಿ, ಬೀಗಲ್, ಕಾಕಸ್ ಫನಲ್, ಕೇನ್ ಕೋರ್ಸ್ ಸೇರಿದಂತೆ ಹಲವು ಶ್ವಾನಗಳು ಪ್ರದರ್ಶನದ ವಿಶೇಷವಾಗಿದ್ದವು.
ಬೆಲೆ ಏರಿಕೆ, ನಿರುದ್ಯೋಗ ಬಗ್ಗೆ ಚಕಾರ ಎತ್ತದ ಪ್ರಧಾನಿ ಮೋದಿ: ರಕ್ಷಾ ರಾಮಯ್ಯ ಆರೋಪ
ಬಹುಮಾನ ವಿತರಣೆ: ಶ್ವಾನ ಪ್ರದರ್ಶನದಲ್ಲಿ ಹೊಸಪೇಟೆ ನಗರದ ವೀರು ಅವರ ಗ್ರೇಟ್ ಡೆನ್ ತಳಿಗೆ ಸೇರಿದ ಶ್ವಾನ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಪ್ರಥಮ ಸ್ಥಾನ ಪಡೆದ ಈ ಶ್ವಾನ ರೂ.10,000 ನಗದು ಪುರಸ್ಕಾರವನ್ನು ಪಡೆಯಿತು. ಮರಿಯಮ್ಮನಹಳ್ಳಿಯ ಸತೀಶ್ ಚಿದ್ರಿಯವರ ಡಾಬರ್ ಮನ್ ದ್ವೀತಿಯ ಸ್ಥಾನ ಪಡೆಯುವುದರೊಂದಿಗೆ ರೂ.7,500 ನಗದು ಬಹುಮಾನಕ್ಕೆ ಪಾತ್ರವಾಯಿತು. ಇನ್ನೂ ಮರಿಯಮ್ಮನಹಳ್ಳಿಯ ಬಸವರಾಜ್ ಅವರ ಮುದೋಳ ಹೌಂಡ್ ತೃತೀಯ ಸ್ಥಾನ ಪಡೆದು ರೂ.5000 ನಗದು ತನ್ನದಾಗಿಸಿಕೊಂಡಿತು. ಶ್ರೇಯಸ್ ಅವರ ಟಾಯ್ ಪಾಪ್, ಶಿವಪ್ರಸಾದ್ ಅವರ ಸೈಬೀರಿಯನ್ ಹಸ್ಕಿ, ಕಾರ್ತಿಕ್ ಅವರ ಬೀಗಲ್, ಲಕ್ಷ್ಮೀ ನಾರಾಯಣ ಅವರ ಸಿಡ್ಜು ತೀರ್ಪುಗಾರರ ಮೆಚ್ಚುಗೆ ಪಡೆದು, ಪ್ರಶಂಸೆಗೆ ಪಾತ್ರವಾದವು.