ನಗರದ ನಾಗಶೆಟ್ಟಿಹಳ್ಳಿ ಬಸ್‌ ನಿಲ್ದಾಣದ ಮೂಲಕ ಹೆಬ್ಬಾಳ ರಿಂಗ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಗುಂಡಪ್ಪ ರಸ್ತೆ ಅವ್ಯವಸ್ಥೆಯನ್ನು ಕೇಳುವವರೇ ಇಲ್ಲ. ಕೇವಲ 50 ಮೀಟರ್‌ ರಸ್ತೆಯಲ್ಲಿ ಮೂರ್ನಾಲ್ಕು ಮ್ಯಾನ್‌ ಹೋಲ್‌ಗಳು ಬಾಯ್ತೆರೆದು ಆತಂಕ ಮೂಡಿಸಿವೆ. ವಾಹನ ಸವಾರರು, ಮಕ್ಕಳು ಆತಂಕದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಬೆಂಗಳೂರು (ಏ.4) : ನಗರದ ನಾಗಶೆಟ್ಟಿಹಳ್ಳಿ ಬಸ್‌ ನಿಲ್ದಾಣದ ಮೂಲಕ ಹೆಬ್ಬಾಳ ರಿಂಗ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಗುಂಡಪ್ಪ ರಸ್ತೆ ಅವ್ಯವಸ್ಥೆಯನ್ನು ಕೇಳುವವರೇ ಇಲ್ಲ. ಕೇವಲ 50 ಮೀಟರ್‌ ರಸ್ತೆಯಲ್ಲಿ ಮೂರ್ನಾಲ್ಕು ಮ್ಯಾನ್‌ ಹೋಲ್‌ಗಳು ಬಾಯ್ತೆರೆದು ಆತಂಕ ಮೂಡಿಸಿವೆ. ವಾಹನ ಸವಾರರು, ಮಕ್ಕಳು ಆತಂಕದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಬಿಬಿಎಂಪಿ(BBMP) ಪೂರ್ವ ವಲಯ ವ್ಯಾಪ್ತಿಯ ಸಂಜಯ ನಗರ ಮುಖ್ಯ ರಸ್ತೆ ಸದಾ ಜನದಟ್ಟಣೆಯಿಂದ ಕೂಡಿದ ರಸ್ತೆ. ಈ ರಸ್ತೆಯ ಮೂಲಕ ಹೆಬ್ಬಾಳ ರಿಂಗ್‌ರಸ್ತೆ,(Hebbal ringroad) ಬಳ್ಳಾರಿ ಮುಖ್ಯರಸ್ತೆ ಮತ್ತು ಅಶ್ವತ್‌್ಥ ನಗರದ 60 ಅಡಿ ರಸ್ತೆಯ ಮೂಲಕ ರಾಮಯ್ಯ ಆಸ್ಪತ್ರೆ ಮಾರ್ಗವಾಗಿ ತುಮಕೂರು ರಸ್ತೆಗೆ ಸಂಪರ್ಕಿಸಬಹುದು. ಹೀಗಾಗಿಯೇ ಸಂಜಯ ನಗರ ಮುಖ್ಯ ರಸ್ತೆ ಮತ್ತು ನಾಗಶೆಟ್ಟಿಹಳ್ಳಿಯ ರಸ್ತೆ ದಟ್ಟಣೆಯಿಂದ ಕೂಡಿದ್ದು ದಿನವಿಡೀ ಸಾವಿರಾರು ವಾಹನಗಳು ಸಂಚರಿಸುತ್ತವೆ.

Bengaluru: ಮೇಲ್ಸೇತುವೆಯಿಂದ ಬಿದ್ದು ಆಟೋ ಚಾಲಕ ಸಾವು: ಹೃದಯಾಘಾತ ಶಂಕೆ

ಈ ಕಾರಣದಿಂದಲೇ ಸಂಜಯ ನಗರ ಮುಖ್ಯರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ಯೋಜನೆ ರೂಪಿಸಿತ್ತು. ಆದರೆ, ಈ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ಖಾಸಗಿ ಒಡೆತನದ ಆಸ್ತಿಗಳು ಹೆಚ್ಚಾಗಿರುವುದರಿಂದ ಪರಿಹಾರ ಕೊಟ್ಟು ರಸ್ತೆ ಅಗಲೀಕರಣ ಮಾಡುವಷ್ಟುಸಾಮರ್ಥ್ಯ ಪಾಲಿಕೆಗಿಲ್ಲ. ಪ್ರಸ್ತುತ ರಸ್ತೆ ಹೇಗಿದೆಯೋ ಹಾಗೆಯೇ ಮುಂದುವರೆಯಲಿ ಎಂದು ಬಿಬಿಎಂಪಿ ಈ ರಸ್ತೆ ಅಗಲೀಕರಣ ಯೋಜನೆಯಿಂದ ಹಿಂದಕ್ಕೆ ಸರಿದಿದೆ. ಹೀಗಾಗಿ ಸಂಜಯ ನಗರ ಮುಖ್ಯ ರಸ್ತೆ ಅಗಲೀಕರಣಕ್ಕೆ ಎಳ್ಳುನೀರು ಬಿಟ್ಟಂತಾಗಿದೆ.

ಸದಾ ವಾಹನಗಳಿಂದ ಗಿಜಿಗುಡುವ ಈ ರಸ್ತೆಯಲ್ಲಿ ಉಡುಪಿ ಗಾರ್ಡನ್‌ ಹೋಟೆಲ್‌ನಿಂದ ಭದ್ರಪ್ಪ ಲೇಔಟ್‌ ಸಮೀಪದ ರೈಲ್ವೆ ಗೇಟ್‌ವರೆಗಿನ ರಸ್ತೆ ಅವ್ಯವಸ್ಥೆ ಕೇಳುವವರೇ ಇಲ್ಲ. ವಾಹನ ದಟ್ಟಣೆ ಒಂದೆಡೆಯಾದರೆ, ಮತ್ತೊಂದೆಡೆ ಮ್ಯಾನ್‌ ಹೋಲ್‌ಗಳು, ರಸ್ತೆ ಗುಂಡಿಗಳು ವಾಹನ ಸವಾರರ ಅದೃಷ್ಟವನ್ನು ಪರೀಕ್ಷೆಗೊಡ್ಡುತ್ತಿವೆ.

ಬೇಕರಿ, ಹೋಟೆಲ್‌ ಕೊಳಚೆ ನೀರು ರಸ್ತೆಗೆ

ಉಡುಪಿ ಗಾರ್ಡನ್‌ ಹೋಟೆಲ್‌ ಮುಂದಿನ ಮ್ಯಾನ್‌ಹೋಲ್‌ ಸದಾ ತುಂಬಿ ಕೊಳಚೆ ನೀರು ರಸ್ತೆಗೆ ಹರಿಯುತ್ತಿರುತ್ತದೆ. ಜೊತೆಗೆ ಕೃಷ್ಣಭವನ್‌, ಉಡುಪಿ ಗಾರ್ಡನ್‌ ಹೋಟೆಲ್‌ ತೊಳೆದ ನೀರು ಸಹ ರಸ್ತೆಗೆ ಬಂದು ನಿಲ್ಲುತ್ತಿದೆ. ಹಾಗೆಯೇ ಮುಂದೆ ಸಾಗಿದರೆ ಮುನೇಶ್ವರ ದೇವಸ್ಥಾನದ ಎದುರಿನ ರಸ್ತೆಯನ್ನು ಸವೀರ್‍ಸ್‌ ಸ್ಟೇಷನ್‌ವೊಂದು ಸಂಪೂರ್ಣ ಆಕ್ರಮಿಸಿಕೊಂಡಂತೆ ಭಾಸವಾಗುತ್ತದೆ. ಇಲ್ಲಿ ದ್ವಿಚಕ್ರ, ತ್ರಿಚಕ್ರ, ಕಾರು ಇತ್ಯಾದಿ ವಾಹನಗಳನ್ನು ವಾಟರ್‌ ಸವೀರ್‍ಸ್‌ ಮಾಡುತ್ತಿದ ನೀರು ರಸ್ತೆಯಲ್ಲಿ ಹರಿದು ಇಡೀ ರಸ್ತೆಯನ್ನು ಹಾಳು ಮಾಡಿದೆ. ಈ ಬಗ್ಗೆಯೂ ಯಾವುದೇ ಬಿಬಿಎಂಪಿ ಅಧಿಕಾರಿಗಳು ಪ್ರಶ್ನಿಸಿಲ್ಲ.

ಮಳೆಯಿಂದ ಜಲಾವೃತವಾದ ರಸ್ತೆ: ಸ್ಕೂಟರ್ ಸಮೇತ ಮ್ಯಾನ್‌ಹೋಲ್‌ಗೆ ಬಿದ್ದ ದಂಪತಿ

ಗುಂಡಪ್ಪ ರಸ್ತೆಯಲ್ಲೂ ಮ್ಯಾನ್‌ಹೋಲ್‌ ಸಮಸ್ಯೆ

ಇನ್ನು ಗುಂಡಪ್ಪ ರಸ್ತೆಯದ್ದು ಅದೇ ಕಥೆ. ಈ ರಸ್ತೆಯಲ್ಲಿ ಮ್ಯಾನ್‌ ಹೋಲ್‌ಗಳ ಸಂಖ್ಯೆ 10ಕ್ಕೂ ಹೆಚ್ಚಿದೆ. ಈ ಪೈಕಿ ಕೆಲವು ಮ್ಯಾನ್‌ ಹೋಲ್‌ಗಳು ಆಗಾಗ ತುಂಬಿ ಗಲೀಜು ನೀರು ರಸ್ತೆಗೆ ಹರಿಯುವುದು ಇಲ್ಲಿ ಸಾಮಾನ್ಯ. ಹಾಗೆಯೇ ಇಲ್ಲಿನ ಎಕ್ಸಿಸ್‌ ಬ್ಯಾಂಕ್‌ ಎಟಿಎಂ ಸಮೀಪ ಮೂರು ಮ್ಯಾನ್‌ ಹೋಲ್‌ಗಳ ಮುಚ್ಚಳ ಸಂಪೂರ್ಣ ಮುಗಿದಿವೆ. ಅದೇ ರಸ್ತೆಯಲ್ಲಿ ಸಾವಿರಾರು ವಾಹನಗಳು ನಿತ್ಯವೂ ಸಂಚರಿಸುತ್ತವೆ. ಸಮೀಪವೇ ಕೊಳಗೇರಿಯೊಂದಿದ್ದು ಸಣ್ಣ ಮಕ್ಕಳು, ಮಹಿಳೆಯರು, ವೃದ್ಧರು, ಮದ್ಯಪಾನಿಗಳು ಸಂಚರಿಸುತ್ತಿರುತ್ತಾರೆ. ಯಾವ ಕ್ಷಣದಲ್ಲಿ ಯಾರು ಬಿದ್ದರೂ ಅಪಾಯ ಕಟ್ಟಿಟ್ಟಬುತ್ತಿ. ಬಿಬಿಎಂಪಿ ಅಧಿಕಾರಿಗಳು ಕೂಡಲೇ ಈ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಇಲ್ಲವೇ ತೀವ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನಾಗಶೆಟ್ಟಿಹಳ್ಳಿಯ ನಿವಾಸಿಗಳು ನೀಡಿದ್ದಾರೆ.