ಗದಗ: ಡಾಕ್ಟರ್ ಆಗುವ ಕನಸು ಕಂಡ ಮಗುವಿಗೆ ಕಿಡ್ನಿ ಫೇಲ್ ; ಕಿಡ್ನಿ ಕಸಿಗೆ ಬೇಕಿದೆ ನೆರವು
ಅಂಗಳದಲ್ಲಿ ಓಡಾಡ್ಕೊಂಡು ಇರ್ಬೇಕಾಗಿದ್ದ ಮಗಳು ಆಸ್ಪತ್ರೆಯ ಬೆಡ್ ಮೇಲೆ ಟ್ರೀಟ್ಮೆಂಟ್ ಪಡೀತಿದ್ರೆ ಹೆತ್ತ ತಂದೆ ತಾಯಿಗೆ ದಿನವೂ ನರಕಯಾತನೆ. ಬರೋಬ್ಬರಿ ಎರಡು ವರ್ಷದಿಂದ ಮಗಳು ಅನಾರೋಗ್ಯಕ್ಕೀಡಾಗಿದ್ದು, ಇಡೀ ಕುಟುಂಬ ಮಮ್ಮಲ ಮರಗುತ್ತಿದೆ.
ಗದಗ (ಏ.6) : ಅಂಗಳದಲ್ಲಿ ಓಡಾಡ್ಕೊಂಡು ಇರ್ಬೇಕಾಗಿದ್ದ ಮಗಳು ಆಸ್ಪತ್ರೆಯ ಬೆಡ್ ಮೇಲೆ ಟ್ರೀಟ್ಮೆಂಟ್ ಪಡೀತಿದ್ರೆ ಹೆತ್ತ ತಂದೆ ತಾಯಿಗೆ ದಿನವೂ ನರಕಯಾತನೆ. ಬರೋಬ್ಬರಿ ಎರಡು ವರ್ಷದಿಂದ ಮಗಳು ಅನಾರೋಗ್ಯಕ್ಕೀಡಾಗಿದ್ದು, ಇಡೀ ಕುಟುಂಬ ಮಮ್ಮಲ ಮರಗುತ್ತಿದೆ.
ಹೌದು, ಗದಗ ಬೆಟಗೇರಿಯಲ್ಲಿ ವಾಸವಿರೋ ಕಳಕನಗೌಡ ಬನ್ನಿಮರದ್ ಹಾಗೂ ಗಿರಿಜಾ ಬನ್ನಿಮರದ್ ದಂಪತಿಯ ಎರಡನೇ ಮಗಳು ಮಾನಸಾಗೆ ಎರಡೂ ಕಿಡ್ನಿ ಫೇಲ್ ಆಗಿವೆ. ಆಗಿನಿಂದಲೂ ಕಳಕನಗೌಡ ಅವರು ಮಗಳಿಗೆ ವಿವಿಧೆಡೆ ಟ್ರೀಟ್ಮೆಂಟ್ ಕೊಡಸ್ತಾನೆ ಬರ್ತಿದಾರೆ. ಆರಂಭದಲ್ಲಿ ಇನ್ಫೆಕ್ಷನ್ ಅಂತಾ ಅನ್ಕೊಂಡು ಟ್ರೀಟ್ಮೆಂಟ್ ಕೊಡಿಸಲಾಗಿತ್ತು. ನಂತ್ರ ಬೆಂಗಳೂರಿನಲ್ಲಿ ಚೆಕ್ ಮಾಡಿಸಿದಾಗ್ಲೇ ಮಗಳಿಗೆ ಕಿಡ್ನಿ ಸಮಸ್ಯೆ ಇರೋದು ಗೊತ್ತಾಗಿತ್ತು. ಆಗಿನಿಂದ ಮಾನಸಾಗೆ ಡಯಾಲಿಸಿಸ್ ಸೇರಿದಂತೆ ಅಗತ್ಯ ಟ್ರೀಟ್ಮೆಂಟ್ ಕೊಡಿಸಲಾಗ್ತಿದೆ. ಸದ್ಯ ಮಾನಸಾಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ(Hubballi KIMS Hospital)ಯಲ್ಲಿ ಟ್ರೀಟ್ಮೆಂಟ್ ಕೊಡಿಸಲಾಗ್ರಿದ್ದು, ಕಿಡ್ನಿ ಕರಿ ಮಾಡಿಸೋ ಸಲಹೆಯನ್ನ ವೈದ್ಯರು ನೀಡಿದ್ದಾರೆ.
ಅನಾಥ ವಯೋವೃದ್ಧೆಗೆ ಹೊಸ ಜೀವನ ಕಲ್ಪಿಸಿದ ನ್ಯಾಯಾಧೀಶರು
ಬೆಟಗೇರಿ ಬಳಿಯ ನರಸಾಪುರ ಸರ್ಕಾರಿ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿರುವ ಮಾನಸಾಗೆ ಸರಿಯಾಗಿ ಶಾಲೆಗೂ ಹೋಗೋದಕ್ಕೆ ಆಗ್ತಿಲ್ಲ. ಅನಾರೋಗ್ಯ ಆಕೆಯನ್ನ ಸಾಮಾನ್ಯರಂತೆ ಇರಲು ಬಿಡ್ತಿಲ್ಲ. ಹೀಗಿದ್ರೂ ನಾನು ವೈದ್ಯೆ ಆಗ್ತೀನಿ ಅಂತಾ ಮಾನಸಾ ತಂದೆ ತಾಯಿ ಬಳಿ ಹೇಳಿಕೊಂಡಿದ್ದಾಳಂತೆ. ವೈದ್ಯೆ ಆಗ್ಬೇಕು ಅಂತಾ ಕನಸು ಇಟ್ಕೊಂಡಿರೋ ಮಾನಸಾಗೆ ಅನಾರೋಗ್ಯ ಹಿಂಡಿ ಹಿಪ್ಪೆ ಮಾಡಿದೆ.
NWKSRTC ಗದಗ ಡಿಪೋದಲ್ಲಿ ತಾಂತ್ರಿಕ ಸಹಾಯಕರಾಗಿ ಕೆಲಸ ಮಾಡ್ತಿರೋ ಕಳಕನಗೌಡ ಅವರಿಗೆ, ತಿಂಗಳ ಡಯಾಲಿಸಿಸ್ ಖರ್ಚು ಆರ್ಥಿಕವಾಗಿ ಹೊರೆಯಾಗಿದೆ. ಮಗಳ ಟ್ರೀಟ್ಮೆಂಟ್ ಖರ್ಚಿಗೆ ಅಂತಾ ಸ್ವಂತ ಮನೆಯನ್ನ ಲೀಜ್ ಗೆ ಹಾಕಿ ಹಣ ಪಡೆದಿದಾರೆ. ಕೊಪ್ಪಳದಲ್ಲಿ ಸ್ವಲ್ಪ ಜಮೀನಿದೆ. ಅದು ಬಿಟ್ರೆ ಜೀವನಕ್ಕೆ ಆಧಾರ ಇಲ್ಲ. ತಿಂಗಳಿಗೆ 40 ರಿಂದ 50 ಸಾವಿರ ರೂಪಾಯಿ ಹೊಂದಿಸಿ ಮಗಳು ಮಾನಸಾಗೆ ಡಯಾಲಿಸಿಸ್ ಮಾಡಿಸಬೇಕು. KWKSRTC ಮುಂಗಡವಾಗಿ ತಿಂಗಳು ಹಣ ನೀಡಿ ಸಹಾಯ ಮಾಡ್ತಿದೆ. ಆದ್ರೆ, ಎರಡು ತಿಂಗಳಿಂದ ಕೆಲಸಕ್ಕೂ ಹೋಗಕ್ಕಾಗ್ದೆ, ಕಳಕನಗೌಡ ಅಸಹಾಯಕರಾಗಿದ್ದಾರೆ.
ಕಾಫಿನಾಡಲ್ಲಿ ನಿರ್ಗತಿಕಳಾಗಿ ಅಲೆಯುತ್ತಿದ್ದ ಆಂಧ್ರದ ವೃದ್ಧೆ ವರ್ಷದ ಬಳಿಕ ಮರಳಿ ಮನೆಗೆ!
ಕಿಡ್ನಿ ಕಸಿಗೆ ಬೇಕಿದೆ ದಾನಿಗಳ ಸಹಾಯ.
ಕಳಕನಗೌಡ ಸೇರಿದಂತೆ ಕುಟುಂಬ ಸದಸ್ಯರ ಕಿಡ್ನಿ ಮಾನಸಾಳಿಗೆ ಮ್ಯಾಚ್ ಆಗ್ತಿಲ್ಲ. A+ ಗುಂಪಿಗೆ ಸೇರಿದವರಿಂದಲೇ ಕಿಡ್ನಿ ಬೇಕಾಗಿದೆ. ಈವರೆಗೆ ಸುಮಾರು 16 ಲಕ್ಷ ರೂಪಾಯಿ ಹಣ ಖರ್ಚು ಮಾಡಿರೋ ಕಳಕನಗೌಡ ಅವರಿಗೆ ಹೆಚ್ಚುವರಿಯಾಗಿ 18 ಲಕ್ಷ ರೂಪಾಯಿ ಬೇಕಾಗಬಹುದು. ಜೊತೆಗೆ ಸರಿಯಾದ ಸಮಯಕ್ಕೆ ಡೋನರ್ ಸಿಗ್ಬೇಕು ಅನ್ನೋದು ಕಳಕನಗೌಡ ನಿರೀಕ್ಷೆ. ಕಿಮ್ಸ್ ನಲ್ಲಿ ಕಿಡ್ನಿಗಾಗಿ ನೋಂದಣಿ ಮಾಡಿಸಲಾಗಿದೆ. ಆದಷ್ಟು ಬೇಗ ಕಿಡ್ನಿ ಸಿಗುವಂತಾಗ್ಬೇಕು ಅನ್ನೋದು ಕುಟುಂಬದ ಆಶಯ.
ದಾನಿಗಳು ಸಹಾಯ ಸಿಕ್ಕಲ್ಲಿ ಮಗುವಿಗೆ ಹೊಸ ಜನ್ಮ ಸಿಗುತ್ತೆ. ಕುಟುಂಬದಲ್ಲಿ ಕಮರಿಹೋಗಿರೋ ಉತ್ಸಾಹ ಮರಳಿ ಸಿಕ್ಕಂತಾಗುತ್ತೆ.