ಮೂರು ದಿನಗಳಿಂದ ನಿರಂತರ ದೇವಸ್ಥಾನ ಪ್ರದಕ್ಷಿಣೆ; ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ ದೇವರ ಗೂಳಿ!
ಜಿಲ್ಲೆಯ ಕಾರಟಗಿ ತಾಲೂಕಿನ ಯರಡೋಣ ಗ್ರಾಮದ ದ್ಯಾವಮ್ಮ ದೇವಸ್ಥಾನದಲ್ಲಿ ಗೂಳಿಯೊಂದು ಕಳೆದ ಮೂರು ದಿನಗಳಿಂದ ನಿರಂರವಾಗಿ ಪ್ರದಕ್ಷಿಣೆ ಹಾಕುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಕೊಪ್ಪಳ (ಆ.21): ಜಿಲ್ಲೆಯ ಕಾರಟಗಿ ತಾಲೂಕಿನ ಯರಡೋಣ ಗ್ರಾಮದ ದ್ಯಾವಮ್ಮ ದೇವಸ್ಥಾನದಲ್ಲಿ ಗೂಳಿಯೊಂದು ಕಳೆದ ಮೂರು ದಿನಗಳಿಂದ ನಿರಂರವಾಗಿ ಪ್ರದಕ್ಷಿಣೆ ಹಾಕುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಗ್ರಾಮದ ಆರಾಧ್ಯ ದೈವ ಶ್ರೀ ಮುರಡಬಸವೇಶ್ವರ ದೇವಸ್ಥಾನದ ಗೂಳಿ. ಹಿಂದೆ ಯಾವತ್ತೂ ಇಂತಹ ಘಟನೆ ನಡೆದಿರಲಿಲ್ಲ. ಇದೀಗ ಕಳೆದ 3 ದಿನದಿಂದ ನಿರಂತರವಾಗಿ ವಿಶ್ರಾಂತಿ ಪಡೆಯದೇ ಆಹಾರ ಸೇವಿಸದೇ ಹಗಲು-ರಾತ್ರಿಯಿಡೀ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿರುವುದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ದ್ಯಾವಮ್ಮ ದೇವಿಯ ಪವಾಡ ಎಂದು ಗ್ರಾಮಸ್ಥರು ಪ್ರದಕ್ಷಿಣೆ ಹಾಕುತ್ತಿರುವ ಗೂಳಿಗೆ ಪೂಜೆ ಸಲ್ಲಿಸಿದ್ದಾರೆ.
ಮನೆಯಲ್ಲಿ ಬೆಕ್ಕು ಮರಿಗಳಿಗೆ ಜನ್ಮ ನೀಡಿದರೆ ಶುಭವೋ ಅಶುಭವೋ?
ರಾತ್ರಿವೇಳೆ ದೇವಸ್ಥಾನದ ಸುತ್ತಲು ಪ್ರದಕ್ಷಿಣೆ ಹಾಕುತ್ತಿರುವುದನ್ನ ಗ್ರಾಮಸ್ಥರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ದೇಗುಲದ ಸುತ್ತಲು ಭಕ್ತರು ಸುತ್ತುವಂತೆ ಭಕ್ತಿಪರವಶವಾಗಿ ಸುತ್ತುತ್ತಿರುವುದು ಕಾಣಬಹುದಾಗಿದೆ. ಈ ರೀತಿ ಪ್ರದಕ್ಷಿಣೆ ಹಾಕುತ್ತಿರುವುದು ಯಾವುದರ ಸೂಚನೆಯೋ ಒಳಿತು ಕೆಡುಕಿನ ಬಗ್ಗೆ ಗ್ರಾಮಸ್ಥರು ಅನೇಕ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಗೂಳಿ ಪ್ರದಕ್ಷಿಣೆ ಹಾಕುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.