ಮನೆಯಲ್ಲಿ ಬೆಕ್ಕು ಮರಿಗಳಿಗೆ ಜನ್ಮ ನೀಡಿದರೆ ಶುಭವೋ ಅಶುಭವೋ?
ಅನೇಕ ಜನರು ಮನೆಯಲ್ಲಿ ನಾಯಿ, ಬೆಕ್ಕುಗಳು ಇರುವುದನ್ನು ಇಷ್ಟಪಡುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ಪ್ರಾಣಿಗಳ ಇದ್ದರೆ ಅಶುಭವೆಂದು ಹೇಳುತ್ತೆ. ಆದರೆ ಇತರೆಡೆ ಮಂಗಳಕರವೆಂದೂ ಪರಿಗಣಿಸಲಾಗಿದೆ. ಕಪ್ಪು ಬಣ್ಣದ ಬೆಕ್ಕು ಮನೆಗೆ ಬಂದು ಕಿರುಚಿದರೆ ಏನಿದರ ಸೂಚನೆ?
ಅನೇಕ ಜನರು ಮನೆಯಲ್ಲಿ ನಾಯಿ, ಬೆಕ್ಕುಗಳು ಇರುವುದನ್ನು ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರಿಗೆ ಬೆಕ್ಕುಗಳೆಂದರೇನೆ ಪಂಚಪ್ರಾಣ. ಮುದ್ದಾದ ಬೆಕ್ಕುಗಳಿದ್ದರಂತೂ ಸಾಕಷ್ಟು ಸಮಯ ಅವುಗಳೊಂದಿಗೆ ಕಳೆಯಲು ಬಯಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ಪ್ರಾಣಿಗಳ ಇದ್ದರೆ ಅಶುಭವೆಂದು ಹೇಳುತ್ತೆ. ಆದರೆ ಇತರೆಡೆ ಮಂಗಳಕರವೆಂದೂ ಪರಿಗಣಿಸಲಾಗಿದೆ.
ನಾಯಿ ಮನುಷ್ಯನಿಗೆ ನಿಷ್ಠಾವಂತ ಪ್ರಾಣಿ. ಮಾನವನ ಮೊದಲ ಗೆಳೆಯನೆಂದರೆ ನಾಯಿ. ಅನಾದಿ ಕಾಲದಿಂದಲೂ ಮನುಷ್ಯನೊಂದಿಗೆ ನಾಯಿ ಒಡನಾಟ ಇದೆ. ನಾಯಿ ಸಾಕುವ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿಯೂ ಅನೇಕ ಒಮ್ಮತಗಳಿವೆ. ಆದರೆ ಮನೆಯಲ್ಲಿ ಬೆಕ್ಕು ಸಾಕುವ ಬಗ್ಗೆ ಅಶುಭವೆಂದು ಹೇಳಿದ್ದು ಕೇಳಿರಬಹುದು. ಯಾಕೆಂದು ಮುಂದೆ ನೋಡೋಣ.
ಮನೆಯಲ್ಲಿ ಬೆಕ್ಕು ಸಾಕುವ ವಿಚಾರದಲ್ಲಿ ಜನರು ಎರಡು ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೆಲವರು ಪ್ರಕಾರ ಬೆಕ್ಕು ಸಾಕುವುದು, ಬೆಳೆಸುವುದು ಮಂಗಳಕರವಾಗಿದೆ ಇನ್ನು ಕೆಲವರ ಪ್ರಕಾರ ಮನೆಯಲ್ಲಿ ಬೆಕ್ಕು ಇರುವುದು ನಕಾರಾತ್ಮಕತೆ ಮತ್ತು ಅಶುಭವನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ.
ಮನೆಯಲ್ಲಿ ಬೆಕ್ಕು ಸಾಕುವುದು ಶುಭವೋ ಅಶುಭವೋ? ಇದರ ಬಗ್ಗೆ ಜ್ಯೋತಿಷಿಗಳು ಏನು ಹೇಳುತ್ತಾರೆ? ಜ್ಯೋತಿಷ್ಯದ ಪ್ರಕಾರ. ಮನೆಯಲ್ಲಿ ಬೆಕ್ಕುಗಳು ಎಲ್ಲಿ ವಾಸಿಸುತ್ತಾವೋ ಅಲ್ಲಿ ನಕಾರಾತ್ಮಕ ಶಕ್ತಿಗಳು ಸಕ್ರಿಯವಾಗಿರುತ್ತವೆ.
ಆದರೆ ಬಂಗಾರದ ಬಣ್ಣದ ಬೆಕ್ಕು ಮನೆಯಲ್ಲಿರುವುದು ಶುಭವೆಂದು ಹೇಳುತ್ತಾರೆ. ಈ ಕಂದು ಅಥವಾ ಚಿನ್ನದ ಬಣ್ಣದ ಬೆಕ್ಕುಗಳೂ ಇನ್ನಷ್ಟು ಸಂಪತ್ತು ಹೆಚ್ಚಿಸಬಹುದು. ಅಷ್ಟೇ ಅಲ್ಲ ನಿಮ್ಮ ಬಾಕಿ ಕೆಲಸಗಳು ಸಹ ಯಶಸ್ವಿಯಾಗುತ್ತದೆ ಮತ್ತು ನೀವು ಕಷ್ಟಪಟ್ಟು ದುಡಿದ ಹಣ ಪಡೆಯಲು ಸಾಧ್ಯವಾಗುತ್ತದೆ.
ನಿಮ್ಮ ಮನೆಯಲ್ಲಿ ಬೆಕ್ಕು ಮರಿಗಳಿಗೆ ಜನ್ಮ ನೀಡಿದರೆ, ಅದು ಮನೆಯ ಮುಖ್ಯಸ್ಥರಿಗೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮರಿಗಳ ಜನನದ ನಂತರ 90 ದಿನಗಳಲ್ಲಿ, ಕುಟುಂಬದ ಸದಸ್ಯರು ಪ್ರತಿ ಕ್ಷೇತ್ರದಲ್ಲೂ ಪ್ರಗತಿ, ಯಶಸ್ಸನ್ನು ಸಾಧಿಸುತ್ತಾರೆ ಎಂದು ಹೇಳಲಾಗಿದೆ.
ಇದ್ದಕ್ಕಿದ್ದಂತೆ ಎಲ್ಲಿಂದಲೋ ಕಪ್ಪು ಬೆಕ್ಕು ನಿಮ್ಮ ಮನೆಗೆ ಬಂದು ಅಳಲು ಪ್ರಾರಂಭಿಸಿದರೆ, ಅದು ಅಶುಭದ ಸಂಕೇತವಾಗಿದೆ. ಬೆಕ್ಕುಗಳ ಕಿರಿಚುವಿಕೆ ಮತ್ತು ಅಳುವುದು ಅಹಿತಕರ ಘಟನೆಯನ್ನು ಸೂಚಿಸುತ್ತದೆ. ರಾತ್ರಿಯಲ್ಲಿ ಬೆಕ್ಕು ಕೂಗುವುದು ಕೆಟ್ಟ ಸುದ್ದಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಬೆಕ್ಕಿನ ಮರಿಗಳ ಜನನದಿಂದಾಗಿ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸಲು ಸಾಧ್ಯವಿಲ್ಲ.