ಬೆಂಗಳೂರು(ಜ.01): ಮನೆಯೊಂದರ ಮೇಲೆ ದಾಳಿ ನಡೆಸಿದ ವಿಜಯನಗರ ಉಪ ವಿಭಾಗದ ಪೊಲೀಸರು, ಹೊಸ ವರ್ಷಾಚರಣೆಗೆ ಮತ್ತೇರಿಸಲು ಸಂಗ್ರಹಿಸಿಟ್ಟಿದ್ದ 85 ಲೀಟರ್‌ ಮದ್ಯವನ್ನು ಗುರುವಾರ ಜಪ್ತಿ ಮಾಡಿದ್ದಾರೆ.

ರಾಜಾಜಿನಗರದ ನಿವಾಸಿ ರಿಯಲ್‌ ಎಸ್ಟೇಟ್‌ ಏಜೆಂಟ್‌ಮಣಿ ಎಂಬುವರ ಮನೆ ಮೇಲೆ ದಾಳಿ ನಡೆದಿದ್ದು, ಮೇಖ್ರಿ ವೃತ್ತರದ ಏರ್‌ ಪೋರ್ಸ್‌ ಕ್ಯಾಂಟೀನ್‌ನಲ್ಲಿ ಸೇನಾಧಿಕಾರಿ ಮೂಲಕ ಆತ ಮದ್ಯ ಖರೀದಿಸಿದ್ದ.

ದೇಶದ ಇನ್ನೂ ಐವರಲ್ಲಿ ಬ್ರಿಟನ್ ಹೈಸ್ಪೀಡ್‌ ವೈರಸ್ ಪತ್ತೆ..!

ಮನೆಯಲ್ಲಿ ತನ್ನ ಸ್ನೇಹಿತರಿಗೆ ಗುರುವಾರ ರಾತ್ರಿ ಮಣಿ ಭರ್ಜರಿ ಪಾರ್ಟಿ ಆಯೋಜಿಸಿರುವ ಬಗ್ಗೆ ಮಾಹಿತಿ ಸಿಕ್ಕಿತು. ಅಂತೆಯೇ ದಾಳಿ ನಡೆಸಿ ಮನೆಯಲ್ಲಿ 114 ಬಾಟಲ್‌ನಲ್ಲಿ 85 ಲೀಟರ್‌ ಮದ್ಯ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಬಕಾರಿ ನಿಯಮಾವಳಿ ಪ್ರಕಾರ ತಮ್ಮ ಮನೆಯಲ್ಲಿ ಮೂರು ಲೀಟರ್‌ ಮದ್ಯವನ್ನು ಮಾತ್ರ ನಾಗರಿಕರು ಸಂಗ್ರಹಿಸಿಟ್ಟುಕೊಳ್ಳಲು ಅವಕಾಶವಿದೆ. ಆದರೆ ಈ ನಿಯಮ ಉಲ್ಲಂಘಿಸಿ ಮಣಿ ಮದ್ಯ ಸಂಗ್ರಹಿಸಿಟ್ಟಿದ್ದರು.

ದೇಶಾದ್ಯಂತ ಕೊರೋನಾ ಲಸಿಕೆ ತಾಲೀಮು

ಈ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳ ಜತೆ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ. ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.