ಕರ್ನಾಟಕದಲ್ಲಿ ಕೊರೋನಾ ಏರಿಳಿತ: ಇಲ್ಲಿದೆ ಸೆ.21ರ ಅಂಕಿ-ಸಂಖ್ಯೆ

* ಕರ್ನಾಟಕದಲ್ಲಿ ಕೊರೋನಾ ಏರಿಳಿತ
* 818 ಕೋವಿಡ್ ಹೊಸ ಪ್ರಕರಣಗಳು ಪತ್ತೆ, ಪಾಸಿಟಿವಿಟಿ ರೇಟ್ 0.80% 
* ರಾಜ್ಯ ಆರೋಗ್ಯ ಇಲಾಖೆ ಮಾಹಿತಿ 

818 New Coronavirus cases and 21 deaths In Karnataka On Sept 21 rbj

ಬೆಂಗಳುರು, (ಸೆ.21): ಕರ್ನಾಟಕದಲ್ಲಿ ಕೊರೋನಾ ಸೋಂಕು ಏರಿಳಿತವಾಗುತ್ತಿದ್ದು, ಇಂದು (ಸೆ.21) 818 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 21 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಇನ್ನು ಇದೇ ಅವಧಿಯಲ್ಲಿ 1414 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್‌ ನೆಗೆಟಿವ್‌ ವರದಿ ಇದ್ರೆ ಮಾತ್ರ ರಾಜ್ಯಪ್ರವೇಶಕ್ಕೆ ಅವಕಾಶ

 ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,69,361ಕ್ಕೆ ಏರಿಕೆಯಾಗಿದ್ರೆ,  ಇದುವರೆಗೆ 29,17,944 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪ್ರಸ್ತುತ 13,741 ಸಕ್ರಿಯ ಪ್ರಕರಣಗಳು ಇದ್ದು, ಪಾಸಿಟಿವಿಟಿ ರೇಟ್ 0.80% ಇದೆ.

 ಬಾಗಲಕೋಟೆ, ಹಾವೇರಿ, ಬೀದರ್, ಕೊಪ್ಪಳ, ರಾಯಚೂರು, ರಾಮನಗರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಇಂದು (ಮಂಗಳವಾರ) ಯಾವುದೇ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. 

ಇನ್ನುಳಿದಂತೆ ಬೆಂಗಳೂರು ನಗರ 359, ದಕ್ಷಿಣ ಕನ್ನಡ 114, ಮೈಸೂರು 71, ಉಡುಪಿ 73 ಸೇರಿದಂತೆ ರಾಜ್ಯಾದ್ಯಂತ ಹೊಸದಾಗಿ 818 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

Latest Videos
Follow Us:
Download App:
  • android
  • ios