80 ಕೋಟಿ ಜನಕ್ಕೆ ಮೋದಿ 5 ಕೇಜಿ ಉಚಿತ ಅಕ್ಕಿ; ಇದು ಮೋದಿ ಗ್ಯಾರಂಟಿ!
ಈ ಯೋಜನೆಯ ದೊಡ್ಡ ಪಾಲುದಾರರಲ್ಲಿ ಕರ್ನಾಟಕವೂ ಒಂದು. ಕರ್ನಾಟಕದ ಸುಮಾರು ನಾಲ್ಕು ಕೋಟಿಗೂ ಹೆಚ್ಚಿನ ಬಡವರು ಪ್ರತಿ ತಿಂಗಳು ಉಚಿತ ಅಕ್ಕಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರವು ಕರ್ನಾಟಕದ ಫಲಾನುಭವಿಗಳಿಗೆ ಒಟ್ಟು 2,00,965 ಟನ್ ಆಹಾರ ಧಾನ್ಯಗಳನ್ನು ಪ್ರತಿ ತಿಂಗಳು ಪೂರೈಸುತ್ತಿದೆ.
- ನಮೋ ಬ್ರಿಗೇಡ್
ಅದು ಕೊರೋನಾ ಭಾರತವನ್ನು ಆಗಷ್ಟೇ ಪ್ರವೇಶಿಸುತ್ತಿದ್ದ ಸಮಯ. ಅತ್ಯಂತ ವ್ಯಾಪಕವಾಗಿ ಹರಡುತ್ತಿದ್ದ ಈ ವೈರಸ್ ಅತ್ಯಂತ ಜನನಿಬಿಡ ದೇಶವಾದ ಭಾರತದಲ್ಲಿ ಬಹಳ ಬೇಗ ಎಲ್ಲೆಡೆ ಹರಡುವ ಅಪಾಯವನ್ನು ಮನಗಂಡ ಭಾರತ ಸರ್ಕಾರ ಎಲ್ಲೆಡೆ ಒಮ್ಮೆಲೇ ಲಾಕ್‌ಡೌನ್ ಘೋಷಿಸಲು ನಿರ್ಧರಿಸಿತು. ಪ್ರಧಾನಿ ನರೇಂದ್ರ ಮೋದಿಯವರು ಒಂದು ಭಾನುವಾರ ಎಲ್ಲರಿಗೂ ಮನೆಯಲ್ಲೇ ಇರಲು ಕರೆ ನೀಡಿ, ಮುಂದಿನ ತಿಂಗಳುಗಟ್ಟಲೆ ಗೃಹವಾಸಕ್ಕೆ ಜನರನ್ನು ಮಾನಸಿಕವಾಗಿ ತಯಾರುಗೊಳಿಸಿದರು. ಮುಂದಿನ ಒಂದು ವಾರಕ್ಕೇ ಇಡೀ ದೇಶ ಲಾಕ್‌ಡೌನ್‌ನಲ್ಲಿ ಬಂಧಿಯಾಯಿತು. ಯಾರೂ ಎಲ್ಲಿಯೂ ಹೋಗುವಂತಿಲ್ಲ. ತಮ್ಮ ತಮ್ಮ ಮನೆಗಳಲ್ಲೇ ಇರಬೇಕೆಂಬ ಆದೇಶವನ್ನು ಕೇಳಿ ಜನಸಾಮಾನ್ಯರು ಕಂಗಾಲಾದರು. ನಿತ್ಯ ದುಡಿದರೆ ಮಾತ್ರ ಹೊಟ್ಟೆಗೆ ಎನ್ನುವಂಥ ಸಂದರ್ಭವಿದ್ದ ದಿನಗೂಲಿ ಕಾರ್ಮಿಕರಿಂದ ಹಿಡಿದು ಪ್ರತಿಯೊಬ್ಬನಿಗೂ ನಾಳೆ ಊಟಕ್ಕೇನು ಎಂಬುದೇ ಚಿಂತೆ.
ಆದರೆ ಇಡೀ ದೇಶಕ್ಕೆ ಲಾಕ್‌ಡೌನ್ ಘೋಷಿಸುವಾಗಲೇ ಪ್ರಧಾನಮಂತ್ರಿಗಳಿಗೆ ಈ ಅಂದಾಜು ಇದ್ದೇ ಇತ್ತು. ಮನೆಯಿಂದ ಹೊರಕ್ಕೆ ಹೋಗಲಾಗದೆ ಇದ್ದರೆ ಅದೆಷ್ಟೋ ಜನ ಹಸಿವಿನಿಂದ ನರಳುತ್ತಾರೆಂಬ ಬಗ್ಗೆ ಅವರಿಗೂ ಗೊತ್ತಿತ್ತು. ಇದಕ್ಕೆ ಪರಿಹಾರವನ್ನು ಯೋಚಿಸಿಯೇ ಅವರು ಲಾಕ್‌ಡೌನ್ ಘೋಷಿಸಿದ್ದರು. ಹಾಗಾಗಿಯೇ ಲಾಕ್‌ಡೌನ್ ಘೋಷಣೆಯ ಜೊತೆಜೊತೆಗೆ ಬಡವರಿಗೆ ಉಚಿತ ಅಕ್ಕಿಯನ್ನೂ ಘೋಷಿಸಿದರು. ಆ ಮೂಲಕ ದೇಶದ ಎಂಬತ್ತು ಕೋಟಿ ಜನರು ಉಪವಾಸ ಬೀಳುವುದನ್ನು ತಪ್ಪಿಸಿದರು. ಜಗತ್ತಿನ ಅತಿ ದೊಡ್ಡ ಯೋಜನೆಯಾಗಿ ಇದು ಅನಂತರ ಗುರುತಿಸಲ್ಪಟ್ಟಿತು. ಇದು ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ (Pಋಎಓಅ್ಗ)ಯ ಕಥೆ.
ಗರೀಬ್ ಕಲ್ಯಾಣ್ ಅನ್ನ ಯೋಜನೆ
ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಕಳೆದ ನಾಲ್ಕು ವರ್ಷಗಳಿಂದಲೂ ದೇಶದ ಎಂಬತ್ತು ಕೋಟಿ ಬಡವರಿಗೆ ಉಚಿತ ಅಕ್ಕಿ ನೀಡುತ್ತಾ ಬಂದಿದೆ. ಮೋದಿ ಸರ್ಕಾರದ ಅತ್ಯಂತ ಮಹತ್ತ್ವದ ಹಾಗೂ ನೇರವಾಗಿ ಜನರನ್ನು ತಲುಪಿದ ಯೋಜನೆಗಳಲ್ಲಿ ಅನ್ನ ಯೋಜನೆಯೂ ಒಂದು. ಈ ಯೋಜನೆಯ ಆರಂಭದ ಸಮಯದಲ್ಲಿ ಅಂದರೆ ಲಾಕ್‌ಡೌನ್ ಆರಂಭದ ದಿನಗಳಲ್ಲಿ ಈ ಯೋಜನೆಯನ್ನು ಘೋಷಣೆ ಮಾಡುವಾಗ ಪ್ರತಿಯೊಬ್ಬ ಫಲಾನುಭವಿಗೂ ಆಹಾರ ಧಾನ್ಯವನ್ನು ತಲುಪಿಸುವ ಹೊಣೆ ಕೇಂದ್ರ ಸರ್ಕಾರಕ್ಕಿತ್ತು. 130 ಕೋಟಿ ಜನಸಂಖ್ಯೆಯ ದೇಶದಲ್ಲಿ ಅದರ ಮುಕ್ಕಾಲು ಪಾಲಿನಷ್ಟುಜನರಿಗೆ ಧಾನ್ಯಗಳನ್ನು ತಲುಪಿಸಲು ಇರುವ ಸವಾಲೇ ಬಹಳ ದೊಡ್ಡದು. ಇಡೀ ದೇಶದ ಮೂಲೆಗೆ ವಿತರಣೆಯ ಸವಾಲು ಒಂದೆಡೆಯಾದರೆ, ಅಧಿಕೃತವಾಗಿ ವಿತರಣಾ ಕೇಂದ್ರಗಳ ಮೂಲಕ ಯೋಗ್ಯರಿಗೆ ತಲುಪಿಸುವುದು ಮತ್ತೊಂದು ಸಮಸ್ಯೆ. ಆ ಸಮಯದಲ್ಲಿ ಒಂದೊಂದು ರಾಜ್ಯದಲ್ಲಿಯೂ ಪ್ರತ್ಯೇಕ ರೇಶನ್ ಕಾರ್ಡ್ ಇತ್ತು. ಹಾಗಾಗಿ ಒಂದು ದೇಶ ಒಂದು ರೇಶನ್ ಕಾರ್ಡ್ ಯೋಜನೆ ತಂದು ದೇಶದ ಯಾವೊಬ್ಬ ಬಡವ ಕೂಡ ಈ ಯೋಜನೆಯಿಂದ ವಂಚಿಸಲ್ಪಡದಂತೆ ಮೋದಿ ಸರ್ಕಾರ ನೋಡಿಕೊಂಡಿತು.
ಚಂದ್ರಯಾನ-3 ಲ್ಯಾಂಡಿಂಗ್ ಸಂಭ್ರಮಕ್ಕೆ ಇರೋದಿಲ್ಲ ಪ್ರಧಾನಿ ನರೇಂದ್ರ ಮೋದಿ!
ಪ್ರಧಾನ ಮಂತ್ರಿ ಅನ್ನ ಯೋಜನೆಯ ಮೂಲಕ ಎಲ್ಲರಿಗೂ ಉಚಿತ ಅಕ್ಕಿ ಮತ್ತು ಗೋಧಿಯನ್ನು ಕೊಡಲು ಮೋದಿ ಸರ್ಕಾರ ನಿರ್ಧರಿಸುವುದಕ್ಕಿಂತ ಮುಂಚೆ ಆಹಾರ ಭದ್ರತಾ ಕಾಯ್ದೆಯ ಅನುಗುಣವಾಗಿ ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳು ಹಾಗೂ ಆದ್ಯತಾ ಕುಟುಂಬ ಪಡಿತರ ಚೀಟಿ ಹೊಂದಿರುವವರು ಮಾರುಕಟ್ಟೆಯ ಬೆಲೆಗಿಂತ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದರು. ಅಂದರೆ ಅಂತ್ಯೋದಯ ಕುಟುಂಬಕ್ಕೆ ತಿಂಗಳಿಗೆ 30 ಕೇಜಿ ಮತ್ತು ಆದ್ಯತಾ ಕುಟುಂಬದ ಪ್ರತಿ ವ್ಯಕ್ತಿ ಐದು ಕೇಜಿ ಆಹಾರ ಧಾನ್ಯವನ್ನು ಹೊಂದುತ್ತಿದ್ದರು. ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ ಆಹಾರ ಭದ್ರತಾ ಕಾಯ್ದೆಯನ್ವಯ ದೊರೆಯುತ್ತಿದ್ದ ಆಹಾರ ಧಾನ್ಯಗಳ ಜೊತೆಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕೇಜಿ ಅಕ್ಕಿ ಅಥವಾ ಗೋಧಿಯನ್ನು ಕೊಡಲು ಮೋದಿ ಸರ್ಕಾರ ಪ್ರಾರಂಭಿಸಿತು. ನಾಲ್ಕು ಜನ ಇರುವ ಕುಟುಂಬಕ್ಕೆ ಇಪ್ಪತ್ತು ಕೇಜಿಯಂತೆ ಪ್ರತಿ ತಿಂಗಳು ಸಂಪೂರ್ಣ ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ಮೂವತ್ತು ಕೇಜಿ ಧಾನ್ಯಗಳು ದೊರೆಯಲು ಆರಂಭಿಸಿದವು.
ಆರಂಭದಲ್ಲಿ ಮೂರು ತಿಂಗಳ ಅವಧಿಗೆ ಆರಂಭವಾದ ಈ ಯೋಜನೆಯನ್ನು 2022ರ ಡಿಸೆಂಬರ್‌ವರೆಗೆ ಒಟ್ಟು ಏಳು ಬಾರಿ ವಿಸ್ತರಿಸಿ ಕೊರೋನಾ ಕಾಲಘಟ್ಟದ ಅನಂತರವೂ ನಿರಂತವಾಗಿ ಬಡವರಿಗೆ ಉಚಿತ ಆಹಾರವನ್ನು ಪೂರೈಸಿದೆ. ಕೊರೋನಾ ಕಾಲದ ಸಂಕಷ್ಟವನ್ನು ಎದುರಿಸುವ ಸಲುವಾಗಿ ಆರಂಭಗೊಂಡ ಈ ಉಚಿತ ಆಹಾರ ಪೂರೈಕೆ ಯೋಜನೆಯನ್ನು ಮೋದಿ ಸರ್ಕಾರ ಜನವರಿ 2023ರಿಂದ ಅನ್ವಯವಾಗುವಂತೆ ಮತ್ತೊಂದು ವರ್ಷ ಅಂದರೆ ಡಿಸೆಂಬರ್ 2023 ರವರೆಗೆ ಮುಂದುವರೆಸುವ ಮೂಲಕ ದೇಶದ ಬಡವರಿಗೆ ಸತತ ನಾಲ್ಕನೇ ವರ್ಷವೂ ನಿರಂತರವಾಗಿ ಉಚಿತ ಆಹಾರ ತಲುಪುವಂತೆ ನೋಡಿಕೊಳ್ಳುತ್ತಿದೆ. ಮಾಚ್‌ರ್ 2020ರಿಂದ ಡಿಸೆಂಬರ್ 2022ರವರೆಗೆ ಕೇಂದ್ರ ಸರ್ಕಾರವು ಏಳು ಹಂತಗಳಲ್ಲಿ ಒಟ್ಟು 3.91 ಲಕ್ಷ ಕೋಟಿ ರುಪಾಯಿಗಳನ್ನು ಈ ಯೋಜನೆಗಾಗಿ ವ್ಯಯಿಸಿದೆ. ಜೊತೆಗೆ 1121 ಲಕ್ಷ ಟನ್ ಆಹಾರ ಧಾನ್ಯಗಳನ್ನು ಪೂರೈಸಿದೆ. 2023ರಲ್ಲಿ ಈ ಯೋಜನೆಗಾಗಿ ಎರಡು ಲಕ್ಷ ಕೋಟಿಯಷ್ಟುವ್ಯಯವಾಗುವ ಅಂದಾಜು ಇದೆ. ಇಂಥ ಅರ್ಥಪೂರ್ಣ ಹಾಗೂ ಸಕಾಲಿಕ ಯೋಜನೆಯು ವಿಶ್ವದಲ್ಲೇ ಅತಿ ದೊಡ್ಡ ಯೋಜನೆಯಾಗಿ ದಾಖಲೆಗೊಂಡಿದೆ.
ಕರ್ನಾಟಕಕ್ಕೆ ಉಚಿತ ಅಕ್ಕಿಯ ಲಾಭ
ಈ ಯೋಜನೆಯ ದೊಡ್ಡ ಪಾಲುದಾರರಲ್ಲಿ ಕರ್ನಾಟಕವೂ ಒಂದು. ಕರ್ನಾಟಕದ ಸುಮಾರು ನಾಲ್ಕು ಕೋಟಿಗೂ ಹೆಚ್ಚಿನ ಬಡವರು ಪ್ರತಿ ತಿಂಗಳು ಈ ಉಚಿತ ಅಕ್ಕಿಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅಂದರೆ ಒಟ್ಟು ಐದರಲ್ಲಿ ಮೂರು ಜನ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದರ್ಥ. ಕೇಂದ್ರ ಸರ್ಕಾರವು ಕರ್ನಾಟಕದ ಫಲಾನುಭವಿಗಳಿಗೆ ಒಟ್ಟು 2,00,965 ಟನ್ ಆಹಾರ ಧಾನ್ಯಗಳನ್ನು ಪ್ರತಿ ತಿಂಗಳು ಪೂರೈಸುತ್ತಿದೆ. ಅಂದರೆ ವರ್ಷವೊಂದಕ್ಕೆ 24,11,580 ಟನ್ ಆಹಾರ ಧಾನ್ಯ ಪೂರೈಸಲಾಗುತ್ತಿದೆ. ಇಷ್ಟುದೊಡ್ಡ ಮಟ್ಟದಲ್ಲಿ ಉಚಿತ ಅಕ್ಕಿಯನ್ನು ಕೇಂದ್ರ ಸರ್ಕಾರ ಪೂರೈಸುತ್ತಿದ್ದರೂ, ಅದನ್ನು ಬಡವರು ಪಡೆಯುತ್ತಿದ್ದರೂ ಅದೆಷ್ಟೋ ಜನರಿಗೆ ಈ ಯೋಜನೆಯ ಬಗ್ಗೆ ಗೊತ್ತೇ ಇಲ್ಲ. ಯಾಕೆಂದರೆ ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ಬೇರೆ ಹೆಸರಿನಲ್ಲಿಯೋ ಅಥವಾ ತಮ್ಮ ಫೋಟೋ ಹಾಕಿಕೊಂಡೋ ಮುನ್ನಡೆಸುತ್ತಿವೆ. ಕರ್ನಾಟಕದಲ್ಲೂ ಕೂಡ ತೀರಾ ಇತ್ತೀಚೆಗೆ ರಾಜ್ಯ ಸರ್ಕಾರವು ತಾನು ಚುನಾವಣಾ ಪೂರ್ವದಲ್ಲಿ ಕೊಟ್ಟಿದ್ದ ಅಕ್ಕಿ ಗ್ಯಾರಂಟಿಯನ್ನು ಪೂರೈಸಲಾಗದೆ ಕೇಂದ್ರ ಸರ್ಕಾರವನ್ನು ಟೀಕಿಸುವ ಸಂದರ್ಭದಲ್ಲಿ ಜನರಿಗೆ ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು ಐದು ಕೇಜಿ ಅಕ್ಕಿ ಕೊಡುತ್ತಿರುವುದು ತಿಳಿಯಿತು.
ಎನ್‌ಇಪಿ ರದ್ದು: ಸೋನಿಯಾ ಎಜ್ಯುಕೇಶನ್ ಪಾಲಿಸಿ ತರಲು ಹೊರಟಿರುವ ಸರ್ಕಾರ -ಬಿಸಿ ನಾಗೇಶ್ ವಾಗ್ದಾಳಿ
ಐಎಮ…ಎಫ್ ಶ್ಲಾಘನೆ
ಕೋವಿಡ್ ಕಾಲದ ದುರಿತದ ಪರಿಹಾರವಾಗಿ ಆರಂಭವಾದ ಈ ಯೋಜನೆಯನ್ನು ಕೋವಿಡ್ ಮುಗಿದ ಮೇಲೂ ಅಂದರೆ ಸತತ ನಾಲ್ಕನೇ ವರ್ಷವೂ ಕೇಂದ್ರ ಸರ್ಕಾರ ಮುಂದುವರಿಸಿದ್ದು, ದೇಶದ ಎಂಬತ್ತು ಕೋಟಿಗೂ ಅಧಿಕ ಜನರಿಗೆ ಆಹಾರ ಧಾನ್ಯಗಳನ್ನು ಅತಿ ದೊಡ್ಡ ಪ್ರಮಾಣದಲ್ಲಿ ಉಚಿತವಾಗಿ ಪೂರೈಸುತ್ತಿದೆ. ಇದಕ್ಕಾಗಿ ಎರಡು ಲಕ್ಷ ಕೋಟಿ ರು. ಖರ್ಚಾಗುವ ಅಂದಾಜಿದೆ. ಇಂಥ ಒಂದು ಬೃಹತ್ ಯೋಜನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಐಎಮ…ಎಫ್ ಸಂಸ್ಥೆ, ಕೊರೋನಾದಂಥ ಭೀಕರ ಸ್ಥಿತಿಯಲ್ಲೂ ಭಾರತದ ಬಡತನವನ್ನು 0.8ರಷ್ಟುಕಡಿಮೆ ಪ್ರಮಾಣಕ್ಕೆ ಸೀಮಿತಗೊಳಿಸಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ವಿಸ್ಮಯ ಮೂಡಿಸುವ ಯೋಜನೆ ಗಾತ್ರ
ಒಂದು ಯೋಜನೆಯು ನಿಜವಾಗಿ ಅಗತ್ಯವಿರುವ ಜನರನ್ನು ತಲುಪುವ ಬಗೆಗೆ ಈ ಯೋಜನೆಯೊಂದು ಸಾಕ್ಷಿ. ದೇಶದ ದಲಿತ, ಅಲ್ಪಸಂಖ್ಯಾತ, ಆದಿವಾಸಿ ವರ್ಗ ಸೇರಿದಂತೆ ಎಲ್ಲ ಮತ, ಜಾತಿ, ಪ್ರದೇಶದ ಬಡವರನ್ನೂ ಒಳಗೊಂಡು ಎಲ್ಲರಿಗೂ ಆಹಾರವನ್ನು ಉಚಿತವಾಗಿ ಪೂರೈಸುತ್ತಿರುವ ಮೋದಿ ಸರ್ಕಾರದ ಈ ಯೋಜನೆಯು ಪ್ರಪಂಚದ ಎಲ್ಲ ದೇಶಗಳಿಗೂ ಮಾದರಿ. ಅಷ್ಟೇ ಅಲ್ಲ, ದೇಶವೊಂದು ತನ್ನ ಪ್ರಜೆಗಳು ಕಷ್ಟದಲ್ಲಿರುವಾಗ ಹೇಗೆ ನೆರವಿಗೆ ಬರಬೇಕೆಂಬ ಬಗ್ಗೆಯೂ ಒಂದು ಆದರ್ಶವಾಗಿದೆ. ಈ ಯೋಜನೆಯ ಫಲಾನುಭವಿಗಳ ಸಂಖ್ಯೆಯೇ ಅಮೆರಿಕದ ಜನಸಂಖ್ಯೆಯ ಎರಡೂವರೆ ಪಟ್ಟು ಆಗುತ್ತದೆ. ಯೂಕೆಯ ಜನಸಂಖ್ಯೆಯ ಹನ್ನೆರಡು ಪಟ್ಟು, ರಷ್ಯಾದ ಜನಸಂಖ್ಯೆಯ ಆರು ಪಟ್ಟು, ಆಸ್ಪ್ರೇಲಿಯಾದ ಜನಸಂಖ್ಯೆಯ ಮೂರು ಪಟ್ಟು ಈ ಯೋಜನೆಯ ಫಲಾನುಭವಿಗಳ ಸಂಖ್ಯೆಯಾಗುತ್ತದೆ. ಇದನ್ನು ಗಮನಿಸಿದಾಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಷ್ಟುಸಮರ್ಥವಾಗಿ ಈ ಯೋಜನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದೆ ಎಂಬ ಬಗ್ಗೆ ಸಣ್ಣದೊಂದು ವಿಸ್ಮಯ ಹುಟ್ಟಿಕೊಳ್ಳುತ್ತದೆ.
India Gate: ರಾಜ್ಯ ಬಿಜೆಪಿಗರ ಮೇಲೆ ಪ್ರಧಾನಿ ಮೋದಿಗೆ ಸಿಟ್ಟೇಕೆ?