Asianet Suvarna News Asianet Suvarna News

ಕರ್ನಾಟಕದಲ್ಲಿ ಹತ್ತೇ ದಿನದಲ್ಲಿ ವಾಡಿಕೆಗಿಂತ 78% ಅಧಿಕ ಮಳೆ..!

ಮಳೆ ಹಾನಿಯಿಂದ ಯಾವುದೇ ಜೀವ ಹಾನಿ, ಆಸ್ತಿ ಪಾಸ್ತಿ ಹಾನಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನೀರಾವರಿ, ಗ್ರಾಮೀಣಾ ಭಿವೃದ್ಧಿ, ಕಂದಾಯ ಸೇರಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ ಎಂದ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ

78 Percent More Rain than usual in Karnataka in Only 10 days grg
Author
First Published Jun 11, 2024, 11:56 AM IST | Last Updated Jun 11, 2024, 11:56 AM IST

ಬೆಂಗಳೂರು(ಜೂ.11):  ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೇರಿದಂತೆ ಇನ್ನೂ ಬೇರೆ ಬೇರೆ ವರದಿಯಲ್ಲಿ ಮಳೆ ಹಾನಿ ತಡೆಯಲು ಎಲ್ಲಾ ಅಗತ್ಯ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೂ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ನಿರ್ವಹಣೆ ಕುರಿತ ಸಚಿವ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಹಾನಿಯಿಂದ ಯಾವುದೇ ಜೀವ ಹಾನಿ, ಆಸ್ತಿ ಪಾಸ್ತಿ ಹಾನಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನೀರಾವರಿ, ಗ್ರಾಮೀಣಾ ಭಿವೃದ್ಧಿ, ಕಂದಾಯ ಸೇರಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ ಎಂದರು.

ಕೊಡಗು: ಕುಸಿಯುವ ಹಂತಕ್ಕೆ ತಲುಪಿದ ಆನೆಹಳ್ಳ ಸೇತುವೆ, ಆತಂಕದಲ್ಲಿ ಜನತೆ..!

ಯಾವುದೇ ಪ್ರಾಣ ಹಾನಿಗಳನ್ನು ತಡೆಯುವುದು ವಿಶೇಷ ಆದ್ಯತೆಯಾಗಿರಬೇಕು. ಏಕೆಂದರೆ ಪ್ರಾಣ ಹಾನಿಯಾದ ಬಳಿಕ ಎಷ್ಟೇ ಪರಿಹಾರ ಕೊಟ್ಟರೂ ಪ್ರಯೋಜನ ಇಲ್ಲ. ಪ್ರಾಣ ಹಾನಿಯಾಗದಂತೆ ತಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಅದನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಪ್ರತೀ ವರ್ಷ ಮಳೆ ಹಾನಿಗೊಳಗಾಗುವ ಪ್ರದೇಶಗಳನ್ನು ಮಾಪನ ಮಾಡಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಲುಪಿಸಲಾಗಿದೆ. ಅವರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

10 ದಿನದಲ್ಲಿ ಶೇ.41ರಷ್ಟು ಹೆಚ್ಚು ಮಳೆ:

ರಾಜ್ಯದಲ್ಲಿ ಪೂರ್ವ ಮುಂಗಾರಿನಲ್ಲಿ 115 ಮಿ.ಮೀ. ವಾಡಿಕೆ ಮಳೆ ಆಗಬೇಕು. ಈ ಬಾರಿ 151 ಮಿ.ಮೀ. ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ.41 ರಷ್ಟು ಹೆಚ್ಚು ಮಳೆಯಾಗಿದೆ. ಅದೇ ರೀತಿ ಜೂ.2ರಂದು ಅಧಿಕೃತವಾಗಿ ಮುಂಗಾರು ರಾಜ್ಯ ಪ್ರವೇಶಿಸಿದ್ದು ಇದುವರೆಗೆ ರಾಜ್ಯದ ಸಂಪೂರ್ಣ ಭಾಗಗಳಿಗೆ ವಿಸ್ತರಿಸಿದೆ. 10 ದಿನಗಳ ಅವಧಿಯಲ್ಲಿ ವಾಡಿಕೆ ಪ್ರಕಾರ 51 ಮಿ.ಮೀ. ಮಳೆ ಆಗಬೇಕಿತ್ತು. ಈಗಾಗಲೇ 91 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.78ರಷ್ಟು ಹೆಚ್ಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬರೀ ೫ ಮಿ.ಮೀ. ಆಗಿತ್ತು, ಅಂದರೆ ಶೇ. -72 ಮಳೆ ಕೊರತೆಯಾಗಿತ್ತು ಎಂದರು. ಈ ಬಾರಿ ಎಲ್ಲ ಭಾಗಗಳಲ್ಲೂ ಮಳೆಯಾಗುತ್ತಿದೆ. ಈ ಹಿನ್ನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಬರುವ 15 ದಿನಗಳಲ್ಲಿ ಗಣನೀಯವಾಗಿ ಕಡಿಮೆಯಾಗಲಿದೆ ಎಂದರು.

ಇನ್ನೂ 7 ಲಕ್ಷ ರೈತರಿಗೆ ಬರ ಪರಿಹಾರ

ಬೆಂಗಳೂರು: ಕಳೆದ ವರ್ಷದ ಮುಂಗಾರು ಹಂಗಾಮಿನ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ್ದ 3,457 ಕೋಟಿ ರು. ಬರ ಪರಿಹಾರ ಹಣವನ್ನು 27.5 ಲಕ್ಷ ರೈತರಿಗೆ ಹಂಚಿದ ಬಳಿಕ ಉಳಿದಿರುವ NOW ಕೋಟಿ ರು. ಹಣದಲ್ಲಿ ಹೆಚ್ಚುವರಿಯಾಗಿ 7 ಲಕ್ಷ ರೈತರಿಗೆ ಬರ ಪರಿಹಾರ ನೀಡಲು ಹೆಚ್ಚುವರಿಯಾಗಿ ಹಂಚಿಕೆಯಾಗಿರುವ 233 ಕೋಟಿ ರು.ಗಳಿಗೆ ರಾಜ್ಯ ಸರ್ಕಾರ ಇನ್ನೂ 232 ಕೋಟಿ ರು. ಸೇರಿಸಿ ಈ ಹಣದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಬೆಳೆ ನಷ್ಟದ ತೊಂದರೆಗೊಳಗಾಗಿರುವ 17 ಲಕ್ಷ 9 ಸಾವಿರ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳಿಗೆ ಜೀವನೋಪಾಯ ಪರಿಹಾರವಾಗಿ 2800 2.2 3000 ರು.ವರೆಗೆ ಹೆಚ್ಚುವರಿ ಪರಿಹಾರ ನೀಡಲು ಕೂಡ ತೀರ್ಮಾನಿಸಿದೆ. ವಿಧಾನಸೌಧ ದಲ್ಲಿ ಸೋಮವಾರ ನಡೆದ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಚಿವ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಈ 2 ಪರಿಹಾರ ಮೊತ್ತವನ್ನು 1 ವಾರದಲ್ಲಿ ರೈತರ ಖಾತೆಗೆ ಜಮೆ ಮಾಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು. 

Latest Videos
Follow Us:
Download App:
  • android
  • ios