ಕೆಲಸಕ್ಕೆ ಮತ್ತಷ್ಟು ನೌಕರರು: 7500 ಬಸ್‌ಗಳ ಸಂಚಾರ
ಕರ್ತವ್ಯಕ್ಕೆ ಆಗಮಿಸಿದ ನಾಲ್ಕು ನಿಗಮಗಳ ನೌಕರರು| ಭಾನುವಾರ ರಾತ್ರಿ 9 ಗಂಟೆ ವೇಳೆಗೆ ನಾಲ್ಕು ನಿಗಮಗಳು ಸೇರಿ ಒಟ್ಟು 7502 ಬಸ್‌ಗಳು ಕಾರ್ಯಚರಣೆ|
ಬೆಂಗಳೂರು(ಏ.19): ಕಳೆದ 12 ದಿನಗಳಿಂದ ಸಾರಿಗೆ ನೌಕರರ ನಡೆಸುತ್ತಿರುವ ಮುಷ್ಕರದ ತೀವ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಕರ್ತವ್ಯಕ್ಕೆ ಹಾಜರಾಗುವವರ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ಹೆಚ್ಚು ಬಸ್‌ಗಳು ಕಾರ್ಯಾಚರಣೆಯಾಗುತ್ತಿವೆ.
ಭಾನುವಾರ ರಾತ್ರಿ 9 ಗಂಟೆ ವೇಳೆಗೆ ನಾಲ್ಕು ನಿಗಮಗಳು ಸೇರಿ ಒಟ್ಟು 7,502 ಬಸ್‌ಗಳು ಕಾರ್ಯಚರಣೆಗೊಂಡಿವೆ.
ನಿಲ್ಲದ ಸಾರಿಗೆ ಮುಷ್ಕರ: ಮತ್ತೆ 121 ನೌಕರರ ಅಮಾನತು
ಕೆಎಸ್‌ಆರ್‌ಟಿಸಿ 3,445, ಎನ್‌ಇಕೆಎಸ್‌ಆರ್‌ಟಿಸಿ 1,503, ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ 1,148 ಮತ್ತು ಬಿಎಂಟಿಸಿಯ 1,406 ಬಸ್‌ಗಳು ಸೇರಿದಂತೆ 6,968 ಬಸ್‌ಗಳು ಸಂಚರಿಸಿವೆ ಎಂದು ಸಾರಿಗೆ ನಿಗಮಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶುಕ್ರವಾರ ನಾಲ್ಕು ನಿಗಮಗಳಿಂದ ಒಟ್ಟು 6,968 ಬಸ್‌ಗಳು ಸಂಚರಿಸಿದ್ದವು.