ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ 74 ಭ್ರೂಣಹತ್ಯೆ?
ಆಸ್ಪತ್ರೆ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ರವಿಕುಮಾರ್ ಕೆಪಿಎಂಇ ಕಾಯ್ದೆಯಡಿ ಅನುಮತಿ ಪಡೆದು 74 ಭ್ರೂಣಹತ್ಯೆ ಮಾಡಿರುವುದಾಗಿ ಈತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಆಗಮಿಸುವಂತೆ ನೋಟಿಸ್ ನೀಡುತ್ತಿದಂತೆ ತಲೆಮರೆಸಿಕೊಂಡಿದ್ದಾನೆ.
ದಾಬಸ್‌ಪೇಟೆ(ಮಾ.07): ಹೊಸಕೋಟೆ, ಮಂಡ್ಯದಲ್ಲಿ ನಡೆದಭ್ರೂಣಹತ್ಯೆ ಪ್ರಕರಣಗಳುಮಾಸುವಮುನ್ನವೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸುಭಾಷ್ ನಗರದ ಖಾಸಗಿ ಆಸ್ಪತ್ರೆ ಯೊಂದರಲ್ಲಿ 74 ಗರ್ಭಪಾತ ನಡೆಸಿರುವ ಆರೋಪಕೇಳಿ ಬಂದಿದೆ. ಬೆಂಗಳೂರು ನಗರಕ್ಕೆ ಸಮೀಪವಿರುವ ನೆಲಮಂಗಲದಲ್ಲಿರುವ ಆಸರೆ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ನಡೆಸಿರುವ ಆರೋಪ ಕೇಳಿಬಂದಿದ್ದು, ಪೊಲೀಸರು ನೋಟಿಸ್ ನೀಡಿದ ತಕ್ಷಣ ವೈದ್ಯ ಓಡಿಹೋಗಿದ್ದಾನೆ.
ಆಸ್ಪತ್ರೆ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ರವಿಕುಮಾರ್ ಕೆಪಿಎಂಇ ಕಾಯ್ದೆಯಡಿ ಅನುಮತಿ ಪಡೆದು 74 ಭ್ರೂಣಹತ್ಯೆ ಮಾಡಿರುವುದಾಗಿ ಈತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಆಗಮಿಸುವಂತೆ ನೋಟಿಸ್ ನೀಡುತ್ತಿದಂತೆ ತಲೆಮರೆಸಿಕೊಂಡಿದ್ದಾನೆ.
ಪಟ್ಟಣದ ಸುಭಾಷ್ ನಗರದಲ್ಲಿರುವ ಆಸರೆ ಆಸ್ಪತ್ರೆ ಕೆಪಿಎಂಇ ಕಾಯ್ದೆಯಲ್ಲಿ 2026 ರವರೆಗೂ ಪರವಾನಗಿ ಪಡೆದು ಎಮ್‌ಟಿಪಿ ಕಾಯ್ದೆ ಅಡಿಯಲ್ಲಿ ಪರವಾನಗಿ ಪಡೆಯದೇ 2021 ರಿಂದ 2024ರವರೆಗೂ 74 ಭ್ರೂಣ ಹತ್ಯೆ (ಗರ್ಭಪಾತ)ಗಳನ್ನು ಮಾಡಿರುವ ಬಗ್ಗೆ ಜಿಲ್ಲಾ ಕುಟುಂಬ ಆರೋಗ್ಯಾಧಿಕಾರಿಗಳ ಪರಿಶೀಲನೆ ವೇಳೆ ಅನುಮಾನ ವ್ಯಕ್ತವಾಗಿತ್ತು. ದಾಖಲಾತಿಗಳು, ಅಲ್ಟಾಸೌಂಡ್ ರಿಪೋರ್ಟ್‌ಗಳು ಶೇ. 90ರಷ್ಟು ಕೇಸ್‌ಗಳಲ್ಲಿ ಇಲ್ಲದಿರುವ ಮಾಹಿತಿ ಲಭ್ಯವಾಗಿತ್ತು.
ಭ್ರೂಣಹತ್ಯೆಗೆ ₹5 ಲಕ್ಷ ದಂಡ, 5 ವರ್ಷ ಜೈಲು?: ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?
ವೈದ್ಯಕೀಯ ಗರ್ಭಪಾತ ಕಾಯ್ದೆಯ ಉಲ್ಲಂಘನೆ ಹಿನ್ನೆಲೆಯಲ್ಲಿ ಕುಟುಂಬ ಕಲ್ಯಾಣಾಧಿಕಾರಿಪೊಲೀಸ್ ಠಾಣೆಗೆದೂರುನೀಡಿದ್ದು, ಎಫ್‌ಐಆರ್‌ದಾಖಲಾಗಿತ್ತು. ಮೂರ್ನಾಲ್ಕು ಬಾರಿ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದರೂ ಉತ್ತರ ನೀಡದ ವೈದ್ಯಗೆ ಪೊಲೀಸರು ಅಂತಿಮ ನೋಟಿಸ್ ಜಾರಿ ಮಾಡುತ್ತಿದಂತೆ ನಾಪತ್ತೆ ಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಬಳಿ ಜನ ಸೇರಿದ್ದರು.