ಕೊರೋನಾ 3ನೇ ಅಲೆ ಆತಂಕದ ಮಧ್ಯೆ ನೆಮ್ಮದಿ ಸುದ್ದಿ
* ಮೂರನೇ ಅಲೆ ಆತಂಕದ ಮಧ್ಯೆ ರಾಜ್ಯಕ್ಕೆ ಗುಡ್‌ನ್ಯೂಸ್
* ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖ
* 10 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ
ಬೆಂಗಳೂರು, (ಸೆ.13): ಮೂರನೇ ಅಲೆ ಆತಂಕದ ಮಧ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಇಂದು (ಸೆ.13) 10 ಜಿಲ್ಲೆಗಳಲ್ಲಿ ಪಾಸಿಟಿವ್ ಕೇಸ್ ಇಲ್ಲ
ಇಂದು (ಸೋಮವಾರ) 673 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 13 ಜನ ಸೋಂಕಿತರು ಬಲಿಯಾಗಿದ್ದಾರೆ. ಇನ್ನು 1074 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದವಾಯ್ತು ಮತ್ತೊಂದು ಕೋವಿಡ್ ಆಸ್ಪತ್ರೆ
ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,62,408ಕ್ಕೆ ಏರಿಕೆಯಾಗಿದ್ರೆ, 37,517 ಜನ ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ 29,08,622 ಜನ ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ 214 ಜನರಿಗೆ ಸೋಂಕು ತಗುಲಿದ್ದು, 371 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. 7211 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ 16,241 ಸಕ್ರಿಯ ಪ್ರಕರಣಗಳಿದ್ದು, ಇವತ್ತು ಒಂದೇ ದಿನ 1,19,014 ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ದರ ಶೇಕಡ 0.56 ರಷ್ಟು ಇದೆ.
ಜಿಲ್ಲಾವಾರು ಸೋಂಕಿತರ ಸಂಖ್ಯೆ
ಬಾಗಲಕೋಟೆ 0, ಬೆಳಗಾವಿ 0, ಬೀದರ್ 0, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 4, ದಾವಣಗೆರೆ 3, ಧಾರವಾಡ 0, ಗದಗ 0, ಹಾವೇರಿ 0, ಕಲಬುರಗಿ 0, ಕೊಪ್ಪಳ 1, ಮಂಡ್ಯ 4, ರಾಯಚೂರು 0, ರಾಮನಗರ 2, ವಿಜಯಪುರ 0, ಯಾದಗಿರಿ 0, ಬೆಂಗಳೂರು ನಗರ 214, ಚಿಕ್ಕಮಗಳೂರು 35, ದಕ್ಷಿಣಕನ್ನಡ 115, ಹಾಸನ 51, ಕೊಡಗು 31, ಮೈಸೂರು 39, ತುಮಕೂರು 36, ಉಡುಪಿ 75.