ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದವಾಯ್ತು ಮತ್ತೊಂದು ಕೋವಿಡ್ ಆಸ್ಪತ್ರೆ
- ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದವಾಯ್ತು ಕೋವಿಡ್ ಆಸ್ಪತ್ರೆ
- KSRTC ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ನವೀಕೃತಗೊಂಡು ಉದ್ಘಾಟನೆ
ಬೆಂಗಳೂರು (ಸೆ.12): ಕೋವಿಡ್ ಮೂರನೇ ಅಲೆ ಎದುರಿಸಲು ಕೋವಿಡ್ ಆಸ್ಪತ್ರೆ ಸಿದ್ಧವಾಗಿದೆ. KSRTC ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ನವೀಕೃತಗೊಂಡು ಉದ್ಘಾಟನೆಯಾಗಿದೆ.
ಬೆಂಗಳೂರಿನ ಜಯನಗರ 4th ಟಿ ಬ್ಲಾಕ್ ನಲ್ಲಿರುವ 25 ವರ್ಷದ ಹಳೆಯ KSRTC ಆಸ್ಪತ್ರೆಯನ್ನು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿಯಲ್ಲಿ ನವೀಕರಣ ಮಾಡಿದ್ದು, ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಆಸ್ಪತ್ರೆ ಉದ್ಘಾಟನೆ ಮಾಡಿದ್ದಾರೆ.
ಕೇರಳದಿಂದ ಬರುವವರಲ್ಲಿ ಹೆಚ್ಚು ಪಾಸಿಟಿವ್ ಕೇಸ್ : ಉಡುಪಿಯಲ್ಲಿ ಕಠಿಣ ಕ್ರಮ
. 50 ಬೆಡ್ ಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ 1 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನಾ ಘಟಕ ಕೂಡ ಸ್ಥಾಪಿಸಲಾಗಿದೆ. 3 ಆಂಬುಲೆನ್ಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ.
24 ಬೆಡ್ಗಳಿಗೆ ಆಕ್ಸಿಜನ್ ವ್ಯವಸ್ಥೆ ಇದ್ದು, ಈ ಪೈಕಿ 12 ಬೆಡ್ ಗಳನ್ನು ಮಕ್ಕಳಿಗೆ ಎಂದು ಮಿಸಲಿಡಲಾಗಿದೆ. 4 ಸಾರಿಗೆ ನಿಗಮಗಳ ನೌಕರರು ಹಾಗೂ ಅವರ ಮಕ್ಕಳು ಸೇರಿದಂತೆ ಸಾರ್ವಜನಿಕರು ಈ ಆಸ್ಪತ್ರೆಯ ಉಪಯೋಗ ಪಡೆದುಕೊಳ್ಳಬಹುದು.
ಇಂದು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಶ್ರೀರಾಮುಲು, ಸಂಸದ ತೇಜಸ್ವಿ ಸೂರ್ಯ, KSRTC ಎಂಡಿ ಶಿವಯೋಗಿ ಕಳಸದ್, ಸಚಿವ ಆರ್ ಅಶೋಕ್, ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ನಿಗಮದ ಅಧಿಕಾರಿಗಳು ಭಾಗಿಯಾಗಿದ್ದರು.