* ಕರ್ನಾಟಕದಲ್ಲಿ ಕೊರೋನಾ ಕೊಂಚ ಏರಿಕೆ* ರಾಜ್ಯದಲ್ಲಿ ಕೊರೋನಾ ನಿನ್ನೆ (ಅ.04)ಗಿಂತ ಇಂದು (ಅ.05) ಪಾಸಿಟಿವ್ ಕೇಸ್‌ ಸಂಖ್ಯೆಯಲ್ಲಿ ಹೆಚ್ಚಳ* ಸೋಂಕಿನ ಪ್ರಮಾಣ ಶೇಕಡಾವಾರು ಪ್ರಮಾಣ ಶೇ. 059 ರಷ್ಟಿದ್ದು, ಮರಣ ಪ್ರಮಾಣ ಶೇ. 2.67 

ಬೆಂಗಳೂರು, (ಅ.05): ರಾಜ್ಯದಲ್ಲಿ ಕೊರೋನಾ ನಿನ್ನೆ (ಅ.04)ಗಿಂತ ಇಂದು (ಅ.05) ಕೊಂಚ ಏರಿಕೆಯಾಗಿದೆ.

Add Asianetnews Kannada as a Preferred SourcegooglePreferred

ಹೌದು..ಇಂದು (ಮಂಗಳವಾರ) 523 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಸೋಂಕಿನಿಂದ 14 ಮಂದಿ ಸಾವನ್ನಪ್ಪಿದ್ದಾರೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,78,808ಕ್ಕೆ ಏರಿಕೆಯಾಗಿದ್ರೆ, ಮೃತರ ಸಂಖ್ಯೆ 37,845ಕ್ಕೆ ಏರಿಕೆಯಾಗಿದೆ. ಇನ್ನು ಇದುವರೆಗೆ 29,29,008 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 

ಜನತೆಗೆ ಗುಡ್ ನ್ಯೂಸ್: ಕರ್ನಾಟಕದಲ್ಲಿ ಕೊರೋನಾ ಭಾರೀ ಇಳಿಕೆ

ಬೆಂಗಳೂರು ನಗರದಲ್ಲಿ 201 ಹೊಸ ಪ್ರಕರಣ ಪತ್ತೆಯಾಗಿದ್ದು, 238 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇಕಡಾವಾರು ಪ್ರಮಾಣ ಶೇ. 059 ರಷ್ಟಿದ್ದು, ಮರಣ ಪ್ರಮಾಣ ಶೇ. 2.67 ರಷ್ಟಿದೆ. ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕೊಪ್ಪಳ,ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-0, ಬಳ್ಳಾರಿ-7, ಬೆಳಗಾವಿ-10, ಬೆಂಗಳೂರು ಗ್ರಾಮಾಂತರ-6, ಬೆಂಗಳೂರು ನಗರ-201, ಬೀದರ್-0, ಚಾಮರಾಜನಗರ-3, ಚಿಕ್ಕಬಳ‍್ಳಾಪುರ-2, ಚಿಕ್ಕಮಗಳೂರು-48, ಚಿತ್ರದುರ್ಗ-9, ದಕ್ಷಿಣ ಕನ್ನಡ-55, ದಾವಣಗೆರೆ-2, ಧಾರವಾಡ-5, ಗದಗ-0, ಹಾಸನ-23, ಹಾವೇರಿ-0, ಕಲಬುರಗಿ-1, ಕೊಡಗು-7, ಕೋಲಾರ-5, ಕೊಪ್ಪಳ-0, ಮಂಡ್ಯ-11, ಮೈಸೂರು-33, ರಾಯಚೂರು-1, ರಾಮನಗರ-5, ಶಿವಮೊಗ್ಗ-5, ತುಮಕೂರು-37, ಉಡುಪಿ-19, ಉತ್ತರ ಕನ್ನಡ-26, ವಿಜಯಪುರ-2, ಯಾದಗಿರಿ-0.