ಜನತೆಗೆ ಗುಡ್ ನ್ಯೂಸ್: ಕರ್ನಾಟಕದಲ್ಲಿ ಕೊರೋನಾ ಭಾರೀ ಇಳಿಕೆ
* ಕರ್ನಾಟಕದಲ್ಲಿ ಕೊರೋನಾ ಸಂಖ್ಯೆಯಲ್ಲಿ ಭಾರೀ ಇಳಿಕೆ
* ಹೊಸದಾಗಿ 397 ಜನರಿಗೆ ಸೋಂಕು, 13 ಮಂದಿ ಸಾವು
* ಪಾಸಿಟಿವಿಟಿ ದರ ಶೇಕಡ 0.50
ಬೆಂಗಳೂರು, ಅ.04): ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಇಂದು (ಅ.04) ಹೊಸದಾಗಿ 397 ಜನರಿಗೆ ಸೋಂಕು ತಗುಲಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಸೋಮವಾರ 693 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,28,433ಕ್ಕೆ ಏರಿಕೆಯಾಗಿದೆ. ಇನ್ನು11,992 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 0.50 ರಷ್ಟು ಇದೆ.
ಅಪ್ಪಳಿಸಲಿದೆ 3ನೇ ಅಲೆ - ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ : ಎಚ್ಚರ!
ಇನ್ನು ಸೋಂಕಿತರ ಸಂಖ್ಯೆ 2,978,286ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 37,832ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಸಚಿವ ಡಾ.ಕೆ ಸುಧಾಖರ್ ಅವರು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ..
ರಾಜಧಾನಿ ಬೆಂಗಳೂರಿನಲ್ಲಿ 166 ಜನರಿಗೆ ಸೋಂಕು ತಗುಲಿದ್ದು, 121 ಜನ ಬಿಡುಗಡೆಯಾಗಿದ್ದಾರೆ. 5 ಜನ ಮೃತಪಟ್ಟಿದ್ದಾರೆ. 7640 ಸಕ್ರಿಯ ಪ್ರಕರಣಗಳು ಇವೆ.