ಬೆಂಗಳೂರು(ನ.28): ರಾಜ್ಯದ ಅಣೆಕಟ್ಟುಗಳ ಪುನಶ್ಚೇತನ ಮತ್ತು ಸಬಲೀಕರಣಕ್ಕೆ 750 ಕೋಟಿ ರು. ಅನುದಾನ ನೀಡಲು ಕೇಂದ್ರ ಜಲ ಶಕ್ತಿ ಸಚಿವಾಲಯ ಒಪ್ಪಿಗೆ ಸೂಚಿಸಿದೆ ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರದ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿಯಾದ ಜಾರಕಿಹೊಳಿ ಅವರು, ರಾಜ್ಯದ ಗಾಯತ್ರಿ ಅಣೆಕಟ್ಟು, ತುಂಗಭದ್ರಾ ಜಲಾಶಯ, ನಾರಾಯಣಪುರ ಜಲಾಶಯ ಮತ್ತು ಕೆಆರ್‌ಎಸ್‌ ಜಲಾಶಯ ಸೇರಿದಂತೆ ಒಟ್ಟು 52 ಅಣೆಕಟ್ಟುಗಳ ಸಬಲೀಕರಣಕ್ಕೆ 1,500 ಕೋಟಿ ರು. ಗಳನ್ನು ವಿಶ್ವಬ್ಯಾಂಕ್‌ನ ಅಣೆಕಟ್ಟು ಪುನಶ್ಚೇತನ ಮತ್ತು ಸಬಲೀಕರಣ ಯೋಜನೆಯಡಿ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದ್ದರು. 

ಸೂತ್ರಧಾರಿ ಸಾಹುಕಾರ: ಬೆಳಗಾವಿಯ ಕನ್ವರ್‌ಲಾಲ್‌ನ ನಿಗೂಢ ಹೆಜ್ಜೆಯ ರಹಸ್ಯ..!

ನಮ್ಮ ಮನವಿಗೆ ಕೇಂದ್ರ ಸಚಿವರು ಸ್ಪಂದಿಸಿದ್ದು ವಿಶ್ವಬ್ಯಾಂಕ್‌ ನಿಂದ ನೆರವು ಪಡೆಯುಲು ಸಮ್ಮತಿ ಸೂಚಿಸಿದ್ದಾರೆ. ಕಾರ್ಯಯೋಜನೆಯನ್ನು ಅಂತಿಮಗೊಳಿಸಿ ಅನುಮೋದನೆ ಪಡೆಯುತ್ತೇವೆ. ರಾಜ್ಯದ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಮಕ್ತಾಯಗೊಳಿಸುತ್ತೇವೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.