Asianet Suvarna News Asianet Suvarna News

ಭಾನುವಾರ ರಾಜ್ಯದ 30 ಜಿಲ್ಲೆಗಳಲ್ಲಿ ಕೊರೋನಾ ಆರ್ಭಟ: ಇಲ್ಲಿದೆ ಜಿಲ್ಲಾವಾರು ಅಂಕಿ-ಅಂಶ

ಕರ್ನಾಟಕದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಸತತ ನಾಲ್ಕನೇ ದಿನವೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಹಾಗಾದ್ರೆ, ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..? ಇಲ್ಲಿ ಈ ಕೆಳಗಿನಂತಿದೆ ಫುಲ್ ಡಿಟೇಲ್ಸ್.

5199 new Covid19 cases reported In Karnataka On July 26th total number 96141
Author
Bengaluru, First Published Jul 26, 2020, 7:18 PM IST

ಬೆಂಗಳೂರು, (ಜುಲೈ.26): ಕೊರೋನಾ ನಿಯಂತ್ರಣಕ್ಕೆ ಸಂಡೇ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಆದರೂ ಮಹಾಮಾರಿ ಕೊರೋನಾಗೆ ಲಾಕ್‌ಡೌನ್‌ ಯಾವ ಲೆಕ್ಕಕ್ಕಿಲ್ಲ ಅನ್ಸುತ್ತೆ.

ಯಾಂಕದ್ರೆ, ಇಂದು (ಭಾನುವಾರ) ರಾಜ್ಯದಲ್ಲಿ  5,199 ಹೊಸ ಕೋವಿಡ್19 ಪ್ರಕರಣಗಳು ಪತ್ತೆಯಾಗಿದ್ದು, 2,088 ಜನರು ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

 ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 96,141ಕ್ಕೆ ಏರಿದ್ದು, ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 58,417 ಆಗಿದೆ.   ಸಾವಿನ ಸಂಖ್ಯೆಯೂ ಏರಿಕೆಯಾಗಿದೆ. ನಿನ್ನೆ 72 ಜನರು ಮೃತಪಟ್ಟಿದ್ದರೆ, ಭಾನುವಾರ ಆ ಸಂಖ್ಯೆ 82 ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿನ ಪ್ರಮಾಣ 1,878 ಕ್ಕೆ ತಲುಪಿದೆ.

ಆಗಸ್ಟ್‌ನಲ್ಲೂ ವೀಕೆಂಡ್ ಲಾಕ್‌ಡೌನ್ ಮುಂದುವರಿಸಲು ಸಿಎಂ ಸಹಮತ

 ಮರಣ ಪ್ರಮಾಣ ಶೇ.1.95 ಆಗಿದೆ. ಚೇತರಿಕೆ ಪ್ರಮಾಣ ಶೇ.37.28 ಆಗಿದೆ. ಇಂದು 33,565 ಜನರಿಗೆ ಕೋವಿಡ್​ ತಪಾಸಣೆ ನಡೆಸಲಾಗಿದ್ದು, ಒಟ್ಟಾರೆ ತಪಾಸನೆಗೊಳಗಾದವರ ಸಂಖ್ಯೆ 11,76827 ಆಗಿದೆ.

ಇನ್ನು ರಾಜಧಾನಿ ಬೆಂಗಳೂರು ನಗರದಲ್ಲಿ 1950 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 43503ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಮಹಾಮಾರಿಗೆ ಭಾನುವಾರ 29 ಮಂದಿ ಬಲಿಯಾಗಿದ್ದಾರೆ.

ಜಿಲ್ಲಾವಾರು ಕೊರೋನಾ ಕೇಸ್
ಬೆಂಗಳೂರು ನಗರ 1950, ಬಳ್ಳಾರಿ 579, ಮೈಸೂರು 230, ಬೆಂಗಳೂರು ಗ್ರಾಮಾಂತರ 213, ದಕ್ಷಿಣ ಕನ್ನಡ 199, ಉಡುಪಿ 169, ಧಾರವಾಡ 165, ಹಾಸನ 164, ಬೆಳಗಾವಿ 163, ಕಲಬುರಗಿ 152, ವಿಜಯಪುರ 132, ರಾಯಚೂರು 131, ದಾವಣಗೆರೆ 89, ಉತ್ತರ ಕನ್ನಡ 85, ಚಿಕ್ಕಬಳ್ಳಾಪುರ 81, ಬೀದರ್ 77, ಮಂಡ್ಯ 64, ಗದಗ 61, ಚಿಕ್ಕಮಗಳೂರು 61, ಯಾದಗಿರಿ 56, ಚಿತ್ರದುರ್ಗ 53, ಕೋಲಾರ 49, ಹಾವೇರಿ 47, ತುಮಕೂರು 46, ಬಾಗಲಕೋಟೆ 41, ಕೊಪ್ಪಳ 40, ಶಿವಮೊಗ್ಗ 39, ಚಾಮರಾಜನಗರ 28, ಕೊಡಗು 20 ಮತ್ತು ರಾಮನಗರ 15 

Follow Us:
Download App:
  • android
  • ios